Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 27:4 - ಕನ್ನಡ ಸತ್ಯವೇದವು C.L. Bible (BSI)

4 ಕೋಪವು ಕ್ರೂರ, ಕ್ರೋಧವು ಪ್ರವಾಹ, ಮತ್ಸರದ ಮುಂದೆ ನಿಲ್ಲಬಲ್ಲವರಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಕೋಪವು ಕ್ರೂರ, ಕ್ರೋಧವು ಪ್ರವಾಹ, ಮತ್ಸರಕ್ಕೆ ಎದುರಾಗಿ ಯಾರು ನಿಂತಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಕೋಪವು ಕ್ರೂರ, ಕ್ರೋಧವು ಪ್ರವಾಹ; ಮಾತ್ಸರ್ಯಕ್ಕೆ ಎದುರಾಗಿ ಯಾರು ನಿಂತಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಕೋಪವು ಕ್ರೂರ; ಅದು ಪ್ರವಾಹದಂತೆ ನಾಶಕರ. ಹೊಟ್ಟೆಕಿಚ್ಚು ಅದಕ್ಕಿಂತಲೂ ನಾಶಕರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಕ್ರೋಧವು ಕ್ರೂರ, ಕೋಪವು ಪ್ರವಾಹ; ಆದರೆ ಅಸೂಯೆದ ಮುಂದೆ ಯಾವನು ನಿಂತಾನು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 27:4
18 ತಿಳಿವುಗಳ ಹೋಲಿಕೆ  

ಏಕೆಂದರೆ, ಅವಳ ಪತಿಗಾಗುವ ಮತ್ಸರ ಉದ್ರೇಕಗೊಳ್ಳುವುದು; ಕನಿಕರ ತೋರನು, ಮುಯ್ಯಿ ತೀರಿಸುವ ದಿನದಂದು.


ಶಾಂತಗುಣವು ದೇಹಕ್ಕೆ ಆರೋಗ್ಯದಾಯಕವು; ಹೊಟ್ಟೆಕಿಚ್ಚು ಎಲುಬಿಗೆ ಕ್ಷಯ ರೋಗವು.


“ಈ ಪಿತಾಮಹರು ಜೋಸೆಫನ ಮೇಲೆ ಮತ್ಸರ ತಾಳಿ ಅವನನ್ನು ಈಜಿಪ್ಟಿನವರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಅವನೊಂದಿಗೆ ಇದ್ದು,


ಆ ಜನರು ಅಸೂಯೆಯಿಂದಲೇ ಯೇಸುವನ್ನು ಹಿಡಿದೊಪ್ಪಿಸಿದ್ದಾರೆಂದು ಅವನಿಗೆ ಅರಿವಾಗಿತ್ತು.


ಮೂರ್ಖನಿಗೆ ನಾಶ ಕೋಪದಿಂದ ಮೂಢನಿಗೆ ಮರಣ ರೋಷದಿಂದ.


ತನ್ನ ಸಹೋದರನನ್ನೇ ಕೊಂದ ಕಾಯಿನನಂತೆ ನಾವು ಇರಬಾರದು. ಅವನು ಕಡುಕೇಡಿಗನ ಕುವರ. ಅವನು ಕೊಂದುದಾದರೂ ಏಕೆ? ತನ್ನ ಕೃತ್ಯಗಳು ದುಷ್ಟವಾಗಿದ್ದು ತನ್ನ ಸಹೋದರನ ಕೃತ್ಯಗಳು ಧರ್ಮಿಷ್ಠವಾಗಿದ್ದುದರಿಂದ ಅಲ್ಲವೇ?


ಆದರೆ ಯೆಹೂದ್ಯರು ಮತ್ಸರದಿಂದ ಕೂಡಿ, ಪುಂಡಪೋಕರಿಗಳನ್ನು ಎತ್ತಿಕಟ್ಟಿ, ಒಂದು ಗುಂಪನ್ನು ಕೂಡಿಸಿದರು. ಪಟ್ಟಣದಲ್ಲೆಲ್ಲಾ ದೊಂಬಿ ಎಬ್ಬಿಸಿದರು. ಪೌಲ ಮತ್ತು ಸೀಲರನ್ನು ಜನರ ಮುಂದೆ ಎಳೆದುತರುವ ಉದ್ದೇಶದಿಂದ ಅವರನ್ನು ಹುಡುಕುತ್ತಾ ಯಾಸೋನ ಎಂಬವನ ಮನೆಯನ್ನು ಮುತ್ತಿದರು.


ನಿನ್ನ ವೃಕ್ಷದಲಿ, ನಿನ್ನ ಹಸ್ತಗಳಲಿ ಧರಿಸಿಕೊ ನನ್ನನ್ನು ಪ್ರೇಮ ಮುದ್ರೆಯಾಗಿ. ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ ! ಮತ್ಸರ ಪಾತಾಳದಷ್ಟು ಕ್ರೂರಿ ಅದರ ಜ್ವಾಲೆ ಬೆಂಕಿಯ ಉರಿ ಧಗಧಗಿಸುವ ಕೋಪಾಗ್ನಿ.


ಅಣ್ಣಂದಿರೋ ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದರೆ ತಂದೆ ಈ ವಿಷಯವನ್ನು ಮನಸ್ಸಿನಲ್ಲೇ ಮೆಲುಕುಹಾಕಿದ.


ಅವನಿಗೆ ದನಕುರಿಗಳೂ ಆಳುಕಾಳುಗಳೂ ಹೇರಳವಾಗಿದ್ದುದನ್ನು ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟರು.


ಸಕಲ ವಿಧವಾದ ಅನ್ಯಾಯ, ಅಕ್ರಮ, ದುರಾಶೆ, ದುರ್ನಡತೆ ಅವರಲ್ಲಿ ತುಂಬಿಕೊಂಡವು. ಮತ್ಸರ, ಕೊಲೆ, ಕಲಹ, ಕಪಟತನ, ಹಗೆತನ, ಇವೆಲ್ಲವೂ ಅವರಲ್ಲಿ ತುಂಬಿಹೋಗಿವೆ.


ಇಂತಿರಲು ಪ್ರಧಾನಯಾಜಕನೂ ಅವನ ಸಂಗಡವಿದ್ದ ಸ್ಥಳೀಯ ಸದ್ದುಕಾಯರೂ ಪ್ರೇಷಿತರ ಬಗ್ಗೆ ತೀವ್ರ ಅಸೂಯೆಪಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದರು.


ಕಲ್ಲು ಭಾರ, ಮರಳು ಭಾರ, ಮೂಢನ ರೇಗಾಟ ಇವೆರಡಕ್ಕೂ ಬಲುಭಾರ.


ಆದರೆ ಓನಾನನು, ಹೀಗೆ ಆಗುವ ಸಂತಾನ ತನ್ನದಾಗುವುದಿಲ್ಲವೆಂದು ತಿಳಿದುಕೊಂಡನು. ಅಣ್ಣನಿಗೆ ಸಂತತಿ ಹುಟ್ಟಿಸಲು ಅವನು ಒಪ್ಪಲಿಲ್ಲ. ತನ್ನ ಅತ್ತಿಗೆಯಲ್ಲಿ ಸಂಭೋಗ ಮಾಡುವಾಗಲೆ ತನ್ನ ವೀರ್ಯವನ್ನು ಹಾಸಿಗೆಪಾಲು ಮಾಡುತ್ತಿದ್ದನು.


ಅಂದಿನಿಂದ ಸೌಲನು ದಾವೀದನ ಮೇಲೆ ಕಣ್ಣಿಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು