Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 27:25 - ಕನ್ನಡ ಸತ್ಯವೇದವು C.L. Bible (BSI)

25 ಹುಲ್ಲು ಕೊಯ್ದು ತಂದಮೇಲೆ, ಗುಡ್ಡದ ಸೊಪ್ಪು ಕೂಡಿಸಿಟ್ಟ ಮೇಲೆ, ಹಸಿ ಹುಲ್ಲು ಚಿಗುರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಹುಲ್ಲನ್ನು ಕೊಯ್ದು ಹೊತ್ತುಕೊಂಡು ಬಂದ ಮೇಲೆ ಹಸಿಹುಲ್ಲು ತಲೆದೋರುವುದು, ಬೆಟ್ಟಗಳ ಸೊಪ್ಪನ್ನೂ ಕೂಡಿಸಿಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಹುಲ್ಲನ್ನು [ಕೊಯ್ದು] ಹೊತ್ತುಕೊಂಡು ಬಂದ ಮೇಲೆ ಹಸಿಹುಲ್ಲು ತಲೆದೋರುವದು; ಬೆಟ್ಟಗಳ ಸೊಪ್ಪನ್ನೂ ಕೂಡಿಸಿಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಹುಲ್ಲನ್ನು ಕತ್ತರಿಸಿದ ಮೇಲೆ ಹೊಸಹುಲ್ಲು ಬೆಳೆಯಲಾರಂಭಿಸುವುದು; ಒಣಹುಲ್ಲನ್ನು ಬೆಟ್ಟಗಳ ಮೇಲೆ ಸಂಗ್ರಹಿಸಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಒಣಹುಲ್ಲನ್ನು ಕೊಯ್ದು ನಂತರ ಹೊಸ ಬೆಳೆ ಕಾಣಿಸಿಕೊಂಡಾಗ ಮತ್ತು ಬೆಟ್ಟಗಳಿಂದ ಹುಲ್ಲು ಸಂಗ್ರಹಿಸಿದಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 27:25
7 ತಿಳಿವುಗಳ ಹೋಲಿಕೆ  

ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತ; ಕೊಯ್ಲಿನಲ್ಲಿ ತೂಕಡಿಸುವವನು ಲಜ್ಜೆಗೆಡುಕ.


ಮೊಳೆಸುವೆ ಹುಲ್ಲನ್ನು ದನಕರುಗಳಿಗೋಸ್ಕರ I ಬೆಳೆಸುವೆ ಪೈರನು ನರಮಾನವರಿಗೋಸ್ಕರ II


ಕುರಿಗಳಿಂದ ನಿನ್ನ ಬಟ್ಟೆಬರೆ; ಆಡುಗಳಿಂದ ನಿನ್ನ ಹೊಲಗದ್ದೆ.


ಅದು ಕೊಯ್ದ ಹೊಲದಂತಿರುವುದು, ತೆನೆಕತ್ತರಿಸಿದ ಹುಲ್ಲಿನಂತಿರುವುದು. ಕೂಳೆಯನ್ನೂ ಬಿಡದೆ ಆಯ್ದುಕೊಂಡ ರೆಫಾಯಿಮ್ ಕಣಿವೆಯಂತೆ ಇರುವುದು.


ನಾನಂತು ಮಿಚ್ಪದಲ್ಲಿ ವಾಸವಾಗಿರುವೆನು. ನಮ್ಮ ಬಳಿಗೆ ಬರುವ ಬಾಬಿಲೋನಿಯರ ಮುಂದೆ ನಿಮ್ಮ ಪ್ರತಿನಿಧಿಯಾಗಿರುವೆನು. ನೀವು ಹೋಗಿ ದ್ರಾಕ್ಷಾರಸ, ಹಣ್ಣು, ಎಣ್ಣೆ ಮುಂತಾದವುಗಳನ್ನು ಸಂಗ್ರಹಿಸಿ ನಿಮ್ಮ ಉಗ್ರಾಣಗಳಲ್ಲಿ ತುಂಬಿಸಿಡಿ. ನೀವು ಹಿಡಿದಿರುವ ಪಟ್ಟಣಗಳಲ್ಲೆ ವಾಸವಾಗಿರಿ,” ಎಂದು ಶಪಥಮಾಡಿ ಹೇಳಿದನು.


ತಾವು ಹೊರದೂಡಲ್ಪಟ್ಟು ವಾಸಮಾಡುತ್ತಿದ್ದ ಎಲ್ಲಾ ಊರುಗಳಿಂದ ಜುದೇಯಕ್ಕೆ ಹಿಂದಿರುಗಿದರು. ಮಿಚ್ಪದಲ್ಲಿ ವಾಸವಾಗಿದ್ದ ಗೆದಲ್ಯನ ಬಳಿಗೆ ಬಂದು ಸೇರಿಕೊಂಡರು. ದ್ರಾಕ್ಷಾರಸವನ್ನೂ ಹಣ್ಣುಹಂಪಲುಗಳನ್ನೂ ಹೇರಳವಾಗಿ ಕೂಡಿಸಿಕೊಂಡರು.


ಕವಿಸುವನಾತ ಮೋಡಗಳನು ಗಗನದಲಿ I ಸುರಿಸುವನು ಮಳೆಯನು ಬುವಿಯಲಿ I ಬೆಳೆಸುವನು ಹುಲ್ಲನು ಬೆಟ್ಟಗಳಲಿ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು