Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 24:4 - ಕನ್ನಡ ಸತ್ಯವೇದವು C.L. Bible (BSI)

4 ಮೌಲ್ಯವೂ ಸುಂದರವೂ ಆದವುಗಳಿಂದ ಅದರ ಕೋಣೆಗಳನ್ನು ತುಂಬಿಸಲು ತಿಳುವಳಿಕೆಯೇ ಉಪಕರಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ, ಇಷ್ಟ ಸಂಪತ್ತಿನಿಂದ ತುಂಬಿಸುವುದಕ್ಕೆ, ತಿಳಿವಳಿಕೆಯೇ ಉಪಕರಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬಿಸುವದಕ್ಕೆ ತಿಳುವಳಿಕೆಯೇ ಉಪಕರಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅದರ ಕೋಣೆಗಳು ಅಮೂಲ್ಯವಾದ ಭಂಡಾರಗಳಿಂದ ತುಂಬಿರುವುದು ಜ್ಞಾನದಿಂದಲೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ತಿಳುವಳಿಕೆಯಿಂದ ಅದರ ಕೋಣೆಗಳು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 24:4
16 ತಿಳಿವುಗಳ ಹೋಲಿಕೆ  

ಬುದ್ಧಿವಂತನ ಮನೆಯ ಸಿರಿ, ಎಣ್ಣೆ ಬೆಣ್ಣೆ; ಬುದ್ಧಿಹೀನನು ನುಂಗಿಬಿಡುವನು ಸರ್ವಸ್ವವನ್ನೆ.


ನೀತಿವಂತನ ಮನೆಯೊಳು ನಿಧಿನಿಕ್ಷೇಪ; ಅನೀತಿವಂತನ ಆದಾಯ ದುಃಖತಾಪ.


ಹೊನ್ನು ಉಂಟು, ಹವಳದ ರಾಶಿ ಉಂಟು; ಆದರೆ ತಿಳುವಳಿಕೆಯುಳ್ಳ ತುಟಿಗಳು ಬೆಲೆಮೀರಿದ ಆಭರಣಗಳು.


ನನ್ನನ್ನು ಪ್ರೀತಿಸುವವರಿಗೆ ದೊರಕಿಸುವೆ ಸಿರಿಸಂಪತ್ತನ್ನು ಬಾಧ್ಯವಾಗಿ ನಾನವರ ಬೊಕ್ಕಸಗಳನ್ನು ತುಂಬಿಸುವೆ ಭರ್ತಿಯಾಗಿ.


ಆಗ ಯೇಸು, “ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ,” ಎಂದರು.


ಇಸ್ರಯೇಲರೂ ಲೇವಿಯರೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಲ್ಲಿ ದೇವರಿಗಾಗಿ ಪ್ರತ್ಯೇಕಿಸತಕ್ಕ ಭಾಗಗಳನ್ನು ತಂದು, ಸೇವೆ ನಡೆಸುತ್ತಿರುವ ಯಾಜಕರು, ದ್ವಾರಪಾಲಕರು, ಗಾಯಕರು ಇವರೂ, ಪವಿತ್ರಾಲಯದ ಪಾತ್ರೆಗಳೂ, ಇರುವ ಕೊಠಡಿಗಳಲ್ಲಿ ಇಡಬೇಕು; ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯ ಮಾಡುವುದಿಲ್ಲ,’ ಎಂದು ಬರೆದುಕೊಟ್ಟರು.


ಬಲವಂತನಿಗಿಂತ ಬುದ್ಧಿವಂತ ಶಕ್ತಿಶಾಲಿ; ಶೂರನಿಗಿಂತ ಜ್ಞಾನಿಯೇ ಬಲಶಾಲಿ.


ಸುರಂಗಗಳನ್ನು ಕೊರೆಯುತ್ತಾನೆ ಬಂಡೆಗಳಲಿ ಅಮೂಲ್ಯವಾದ ವಸ್ತುಗಳನ್ನು ಕಾಣುತ್ತಾನಲ್ಲಿ.


ನನ್ನಲ್ಲಿವೆ ಶ್ರೀಮಂತಿಕೆ ಮತ್ತು ಘನತೆ ಶಾಶ್ವತ ಸಂಪತ್ತು ಹಾಗೂ ಸಮೃದ್ಧಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು