Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 20:4 - ಕನ್ನಡ ಸತ್ಯವೇದವು C.L. Bible (BSI)

4 ಮೈಗಳ್ಳನು ಮಳೆಗಾಲದಲ್ಲೂ ಹೊಲ ಉಳಲಾರನು; ಸುಗ್ಗಿಕಾಲದಲ್ಲಿ ಅಂಗಲಾಚಿದರೂ ಅವನಿಗೆ ಬೆಳೆಸಿಗಲಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಮೈಗಳ್ಳನು ಮಳೆಗಾಲದಲ್ಲಿ ಉಳುವುದಿಲ್ಲ, ಸುಗ್ಗೀಕಾಲದಲ್ಲಿ ಅಪೇಕ್ಷಿಸಲು ಏನು ಸಿಕ್ಕೀತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಮೈಗಳ್ಳನು ಮಳೆಗಾಲದಲ್ಲಿ ಹೊಲಗೇಯನು; ಸುಗ್ಗೀಕಾಲದಲ್ಲಿ ಅಪೇಕ್ಷಿಸಲು ಏನು ಸಿಕ್ಕೀತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಸೋಮಾರಿಯು ಬಿತ್ತನೆಕಾಲದಲ್ಲಿ ಬೀಜ ಬಿತ್ತುವುದಿಲ್ಲ; ಸುಗ್ಗಿಕಾಲದಲ್ಲಿ ಅವನಿಗೆ ಬೆಳೆಯೂ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಮೈಗಳ್ಳನು ಮಳೆಗಾಲದಲ್ಲಿ ಉಳುಮೆ ಮಾಡುವುದಿಲ್ಲ; ಆದಕಾರಣ ಸುಗ್ಗಿಯಲ್ಲಿ ಅವನು ಅಪೇಕ್ಷಿಸಿದರೂ ಏನೂ ಸಿಕ್ಕುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 20:4
14 ತಿಳಿವುಗಳ ಹೋಲಿಕೆ  

ಜೋಲುಗೈ ತರುತ್ತದೆ ದಾರಿದ್ರ್ಯ; ಚುರುಕು ಕೈ ತರುತ್ತದೆ ಐಶ್ವರ್ಯ.


ಮೈಗಳ್ಳತನ ಗಾಢನಿದ್ರೆಯಲ್ಲಿ ಮುಳುಗಿಸುವುದು; ಸೋಮಾರಿಯು ಹಸಿವಿನಿಂದ ಬಳಲುವನು.


ಸೋಮಾರಿಗೆ ಹಸಿದಿದ್ದರೂ ಊಟವಿಲ್ಲ; ಶ್ರಮಜೀವಿಗಳಿಗಾದರೋ ಬಲಿಷ್ಠರನ್ನಾಗಿಸುವ ಮೃಷ್ಟಾನ್ನ.


ಆಗ ಬಡತನ ಎರಗುವುದು ದಾರಿಗಳ್ಳನಂತೆ; ಕೊರತೆಯು ನಿನ್ನ ಮೇಲೆ ಬೀಳುವುದು ಪಂಜುಗಳ್ಳನಂತೆ.


ಮೈಗಳ್ಳ ಕೈ ಹಾಕುತ್ತಾನೆ ತುತ್ತಿಗೆ; ಆದರೆ ಎತ್ತಲಾರ ಬಾಯ ಹತ್ತಿರಕ್ಕೆ.


ಎಲೈ ಸೋಮಾರಿಯೇ, ಇರುವೆಯ ಬಳಿಗೆ ಹೋಗು; ಅದರ ನಡವಳಿಕೆಯನ್ನು ನೋಡಿ ಜ್ಞಾನಿಯಾಗು.


ಮಾನವನ ಅಂತರಾಲೋಚನೆಗಳು ಆಳವಾದ ಜಲನಿಧಿ; ವಿವೇಕಿಯಾದ ವ್ಯಕ್ತಿ ಅದನ್ನು ಹೊರ ತೆಗೆಯಬಲ್ಲ ಸೇದಿ.


ಮೈಗಳ್ಳನನ್ನು ಕೊಲ್ಲುವುದು ಅವನ ಇಚ್ಛೆಯೆ; ಬಗ್ಗದು ಅವನ ಕೈ ದುಡಿಮೆಗೆ.


ಗಾಳಿಗಾಗಿಯೇ ಕಾದಿರುವವನು, ಮೋಡಕ್ಕಾಗಿಯೇ ಎದುರು ನೋಡುತ್ತಿರುವವನು ಎಂದಿಗೂ ಬೀಜಬಿತ್ತಲಾರನು; ಎಂದಿಗೂ ಪೈರು ಕೊಯ್ಯಲಾರನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು