Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 2:14 - ಕನ್ನಡ ಸತ್ಯವೇದವು C.L. Bible (BSI)

14 ಅವರು ಸಂತೋಷಿಸುವುದು ಕೇಡನ್ನು ಮಾಡುವುದರಲ್ಲಿ. ಉಲ್ಲಾಸಿಸುವುದು ಕೆಟ್ಟವರ ದುಷ್ಟತನದಲ್ಲಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅವರು ಕೆಟ್ಟದ್ದನ್ನು ಮಾಡುವುದರಲ್ಲಿ ಸಂತೋಷಿಸಿ, ಕೆಟ್ಟವರ ದುಷ್ಟತನದಲ್ಲಿ ಆನಂದಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಅವರು ಕೆಟ್ಟದ್ದನ್ನು ಮಾಡುವದರಲ್ಲಿ ಸಂತೋಷಿಸಿ ಕೆಟ್ಟವರ ದುಷ್ಟತನಕ್ಕೆ ಒಲಿಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಅವರಿಗೆ ಕೆಟ್ಟದ್ದನ್ನು ಮಾಡುವುದರಲ್ಲೇ ಸಂತೋಷ; ಕೆಡುಕರ ಕೆಟ್ಟಕಾರ್ಯಗಳಲ್ಲೇ ಆನಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅವರು ಕೆಟ್ಟದ್ದನ್ನು ಮಾಡುವುದಕ್ಕೆ ಸಂತೋಷಿಸುತ್ತಾರೆ. ಕೇಡಿನ ವಕ್ರತನದಲ್ಲಿ ಆನಂದಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 2:14
10 ತಿಳಿವುಗಳ ಹೋಲಿಕೆ  

ಮೂರ್ಖನಿಗೆ ಕೆಡುಕುಮಾಡುವ ಚಟ; ಬುದ್ಧಿವಂತನಿಗೆ ಜ್ಞಾನಗಳಿಸುವ ಹಟ.


ಇಂಥವುಗಳನ್ನು ಮಾಡುವವರು ಮರಣದಂಡನೆಗೆ ಪಾತ್ರರು ಎಂಬ ದೈವನಿಯಮವನ್ನು ಅರಿತಿದ್ದರೂ ಇಂಥ ಹೀನ ಕೃತ್ಯಗಳನ್ನು ಮಾಡುತ್ತಾರೆ. ತಾವು ಮಾಡುವುದೇ ಅಲ್ಲದೆ ಹಾಗೆಮಾಡುವ ಇತರರನ್ನೂ ಪ್ರೋತ್ಸಾಹಿಸುತ್ತಾರೆ.


“ನನಗೆ ಆಪ್ತವಾದ ಜನತೆಯು, ನನಗೆ ಅಸಹ್ಯಕಾರ್ಯಗಳನ್ನು ಮಾಡಿದ್ದೇಕೆ? ನನ್ನ ಆಲಯದಲ್ಲಿ ಅದಕ್ಕಿರುವ ಹಕ್ಕಾದರೂ ಏನು? ವ್ರತಗಳ ಮೂಲಕ, ಪಶುಬಲಿ ಮಾಂಸದ ಮೂಲಕ ಅದು ಬರಲಿರುವ ದಂಡನೆಯನ್ನು ತಡೆಗಟ್ಟಬಲ್ಲದೆ?


ನೀನು ನನಗೆ ಎದುರಾಗಿ ದಂಗೆಯೆದ್ದು ಮಾಡಿದ ನಾನಾ ದುಷ್ಕೃತ್ಯಗಳಿಗಾಗಿ ಆ ದಿನದಂದು ನೀನು ನಾಚಿಕೆಪಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅತಿ ಗರ್ವದಿಂದ ಮೆರೆಯುವವರನ್ನು ನಿನ್ನ ಮಧ್ಯೆಯಿಂದ ತೊಲಗಿಸಿಬಿಡುವೆನು. ಅಂದಿನಿಂದ ನನ್ನ ಪವಿತ್ರ ಪರ್ವತದ ಮೇಲೆ ನೀನು ಗರ್ವಪಡದೆ ಬಾಳುವೆ.


“ಅವರು ಅಧರ್ಮದಿಂದ ಅರಸನನ್ನು ಆನಂದಗೊಳಿಸುತ್ತಾರೆ; ಅಸತ್ಯದಿಂದ ಅಧಿಕಾರಿಗಳನ್ನು ಸಂತೋಷಪಡಿಸುತ್ತಾರೆ.


ಈ ಕಾರಣ ಆ ಬಾಬಿಲೋನಿಯರು ಮಾನವರನ್ನು ಗಾಳದಿಂದ ಸೆಳೆದುಕೊಳ್ಳುತ್ತಾರೆ; ಬಲೆಯಿಂದ ಬಾಚಿಕೊಳ್ಳುತ್ತಾರೆ; ತಮ್ಮ ಜಾಲದಲ್ಲಿ ರಾಶಿಹಾಕಿಕೊಳ್ಳುತ್ತಾರೆ; ಹಿರಿಹಿರಿ ಹಿಗ್ಗುತ್ತಾರೆ.


ದುರಾತ್ಮನ ಮನಸ್ಸು ಕೇಡಿನ ಮೇಲೆ; ದಯೆತೋರಿಸನಾತ ನೆರೆಯವನ ಮೇಲೆ.


ಕೇಡು ಮಾಡದಿದ್ದರೆ ಆ ದುರುಳರಿಗೆ ನಿದ್ರೆಬಾರದು, ವಂಚಿಸಿ ಬೀಳಿಸದಿದ್ದರೆ ಅವರಿಗೆ ನಿದ್ರೆ ಹತ್ತದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು