Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 19:29 - ಕನ್ನಡ ಸತ್ಯವೇದವು C.L. Bible (BSI)

29 ಕುಚೋದ್ಯನಿಗೆ ಕಾದಿದೆ ನ್ಯಾಯತೀರ್ಪು; ದಡ್ಡನ ಬೆನ್ನಿಗೆ ಬೀಳಲಿದೆ ದೊಣ್ಣೆಪೆಟ್ಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಧರ್ಮನಿಂದಕರಿಗೆ ದಂಡನೆಯ ತೀರ್ಪು ಸಿದ್ಧ, ಮೂಢರ ಬೆನ್ನಿಗೆ ಪೆಟ್ಟು ಖಂಡಿತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಧರ್ಮನಿಂದಕರಿಗೆ [ದಂಡನೆಯ] ತೀರ್ಪು ಸಿದ್ಧ, ಮೂಢರ ಬೆನ್ನಿಗೆ ಪೆಟ್ಟು ಖಂಡಿತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ದುರಾಭಿಮಾನಿಯು ಶಿಕ್ಷೆಗೆ ಗುರಿಯಾಗಿ ದಂಡಿಸಲ್ಪಡುವನು; ಮೂಢನು ತನಗಾಗಿ ಕಾದಿರುವ ದಂಡನೆಯನ್ನು ಅನುಭವಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಪರಿಹಾಸ್ಯಗಾರರಿಗೆ ನ್ಯಾಯ ತೀರ್ಪುಗಳೂ, ಬುದ್ಧಿಹೀನರ ಬೆನ್ನಿಗೆ ಪೆಟ್ಟುಗಳೂ ಸಿದ್ಧವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 19:29
17 ತಿಳಿವುಗಳ ಹೋಲಿಕೆ  

ಕುದುರೆಗೆ ಚಬುಕು, ಕತ್ತೆಗೆ ಕಡಿವಾಣ, ಮೂಢನಿಗಾದರೊ ಬೆನ್ನಿಗೆ ಬೆತ್ತ.


ಬುದ್ಧಿವಂತನ ಬಾಯಿಂದ ಜ್ಞಾನ; ಬುದ್ಧಿಹೀನನ ಬೆನ್ನಿಗೆ ಬೆತ್ತ.


ನೀನು ಜ್ಞಾನವಂತನಾದರೆ ನಿನ್ನ ಜ್ಞಾನ ನಿನಗೇ ಲಾಭಕರ; ಕುಚೋದ್ಯಗಾರನು ಆದರೆ ಸವಿಯುವೆ ಅದರ ಪ್ರತೀಕಾರ.


ಸರ್ವೇಶ್ವರ ತಾವು ಪ್ರೀತಿಸುವವನನ್ನು ಶಿಕ್ಷಿಸುವರು; ತಮಗೆ ಮಗನೆಂದು ಬರಮಾಡಿಕೊಳ್ಳುವವನನ್ನು ದಂಡಿಸುವರು.”


ಏಕೆಂದರೆ ಭಯೋತ್ಪಾದಕರು ನಿಶ್ಶೇಷರಾಗುವರು, ಧರ್ಮನಿಂದಕರು ನಿರ್ನಾಮವಾಗುವರು.


ಆದಕಾರಣ, ನಿಮ್ಮ ಬಂಧನಗಳು ಇನ್ನೂ ಬಿಗಿಯಾಗದಂತೆ ಧರ್ಮನಿಂದೆಯನ್ನು ಬಿಟ್ಟುಬಿಡಿ. ‘ಇಡೀ ನಾಡೇ ನಾಶವಾಗಲಿ’ ಎಂಬ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ತೀರ್ಪನ್ನು ನಾನು ಕೇಳಿದ್ದೇನೆ.


ಕಲಹವೆಬ್ಬಿಸುವುದು ಬುದ್ಧಿಹೀನನ ತುಟಿ; ಪೆಟ್ಟಿಗಾಗಿ ಕೂಗಿಕೊಳ್ಳುವುದು ಅವನ ಬಾಯಿ.


ಮಂದಮತಿಗೆ ನೂರು ಗುದ್ದು; ಬುದ್ಧಿವಂತನಿಗೆ ಒಂದು ಮಾತು.


ವಧ್ಯಸ್ಥಾನಕ್ಕೆ ಹೋಗುವ ಹೋರಿಯಂತೆ, ಬಲೆಗೆ ಸಿಕ್ಕಿಬೀಳುವ ಜಿಂಕೆಯಂತೆ,


ಅಪಹಾಸ್ಯಮಾಡುವವರನ್ನು ಆತ ಅಪಹಾಸ್ಯ ಮಾಡುವನು; ನಮ್ರರಿಗಾದರೋ ಕೃಪಾಶೀರ್ವಾದವನ್ನು ಅನುಗ್ರಹಿಸುವನು.


ಅಪರಾಧಿಗೆ ಪೆಟ್ಟಿನ ಶಿಕ್ಷೆ ತೀರ್ಮಾನವಾದರೆ ನ್ಯಾಯಾಧಿಪತಿ ಅವನನ್ನು ಮಲಗಿಸಿ, ಅವನ ಅಪರಾಧಕ್ಕೆ ಅನುಸಾರವಾಗಿ ಪೆಟ್ಟುಗಳನ್ನು ತನ್ನ ಮುಂದೆಯೇ ಹೊಡಿಸಿ ಲೆಕ್ಕಿಸಬೇಕು.


ದುರ್ಜನರ ಆಲೋಚನೆಯಂತೆ ನಡೆಯದೆ I ಪಾಪಾತ್ಮರ ಪಥದಲಿ ಕಾಲೂರದೆ I ಧರ್ಮನಿಂದಕರ ಕೂಟದಲಿ ಕೂರದೆ II


ಎಲೀಷನು ಅವರ ಕಡೆಗೆ ತಿರುಗಿ, ಸರ್ವೇಶ್ವರನ ಹೆಸರಿನಲ್ಲಿ ಅವರನ್ನು ಶಪಿಸಿದನು. ಕೂಡಲೆ ಕಾಡಿನಿಂದ ಎರಡು ಹೆಣ್ಣುಕರಡಿಗಳು ಬಂದು ಆ ಹುಡುಗರಲ್ಲಿ ನಾಲ್ವತ್ತೆರಡು ಮಂದಿಯನ್ನು ಸೀಳಿಬಿಟ್ಟವು.


“ಮೂಢರೇ, ಎಂದಿನ ತನಕ ಮೂಢರಾಗಿರಲಾಶಿಸುವಿರಿ? ಕುಚೋದ್ಯಗಾರರೇ, ಎಷ್ಟುಕಾಲ ಕುಚೋದ್ಯಗಾರರಾಗಿರಲಿಚ್ಚಿಸುವಿರಿ? ಮೂರ್ಖರೇ, ಎಷ್ಟರವರೆಗೆ ತಿಳುವಳಿಕೆಯನ್ನು ಹಗೆಮಾಡುವಿರಿ?


ಆದುದರಿಂದ ಬಿರುಗಾಳಿಯಂತೆ ನಿಮಗೆ ಅಪಾಯಬಂದಾಗ, ತುಫಾನಿನಂತೆ ನಿಮಗೆ ಆಪತ್ತು ಬಂದೊದಗಿದಾಗ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು