Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 16:28 - ಕನ್ನಡ ಸತ್ಯವೇದವು C.L. Bible (BSI)

28 ತುಂಟನು ಜಗಳವನ್ನು ಹುಟ್ಟಿಸುತ್ತಾನೆ; ಚಾಡಿಕೋರನು ಮಿತ್ರರನ್ನು ಬೇರ್ಪಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ತುಂಟನು ಜಗಳ ಬಿತ್ತುತ್ತಾನೆ, ಚಾಡಿಕೋರನು ಮಿತ್ರರನ್ನು ಅಗಲಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ತುಂಟನು ಜಗಳ ಬಿತ್ತುತ್ತಾನೆ; ಚಾಡಿಕೋರನು ವಿುತ್ರರನ್ನು ಅಗಲಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಕೆಡುಕನು ಜಗಳ ಎಬ್ಬಿಸುವನು; ಗಾಳಿಸುದ್ದಿಯನ್ನು ಹಬ್ಬಿಸುವವನು ಆಪ್ತಸ್ನೇಹಿತರಲ್ಲಿ ಒಡಕು ಉಂಟುಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಮೂರ್ಖನು ಜಗಳವನ್ನು ಬಿತ್ತುತ್ತಾನೆ. ಚಾಡಿಕೋರನು ಪ್ರಮುಖ ಸ್ನೇಹಿತರನ್ನು ಅಗಲಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 16:28
18 ತಿಳಿವುಗಳ ಹೋಲಿಕೆ  

ತಪ್ಪನ್ನು ಮನ್ನಿಸುವವನು ಪ್ರೀತಿಯನ್ನು ಅರಸುತ್ತಾನೆ; ತಪ್ಪನ್ನು ಎತ್ತಿ ಆಡುವವನು ಆಪ್ತನನ್ನೂ ಕಳೆದುಕೊಳ್ಳುತ್ತಾನೆ.


ಸಕಲ ವಿಧವಾದ ಅನ್ಯಾಯ, ಅಕ್ರಮ, ದುರಾಶೆ, ದುರ್ನಡತೆ ಅವರಲ್ಲಿ ತುಂಬಿಕೊಂಡವು. ಮತ್ಸರ, ಕೊಲೆ, ಕಲಹ, ಕಪಟತನ, ಹಗೆತನ, ಇವೆಲ್ಲವೂ ಅವರಲ್ಲಿ ತುಂಬಿಹೋಗಿವೆ.


ಚಾಡಿಕೋರನ ಮಾತುಗಳು ರುಚಿಕರವಾದ ತುತ್ತುಗಳು; ಅವು ಅಡಿಹೊಟ್ಟೆಗೆ ಇಳಿಯುವ ಕವಳಗಳು.


ಉಗ್ರಕೋಪಿ ವ್ಯಾಜ್ಯವೆಬ್ಬಿಸುತ್ತಾನೆ; ದೀರ್ಘಶಾಂತನು ಜಗಳ ತೀರಿಸುತ್ತಾನೆ.


ಅವನ ಮನದಲ್ಲಿರುವುದು ಮೂರ್ಖತನ; ಅವನು ಸತತ ಕಲ್ಪಿಸುವುದು ಕೆಡುಕುತನ. ಅವನು ಬಿತ್ತನೆ ಮಾಡುವುದು ಕಾಳಗ, ಕದನ.


ನಾನು ನಿಮ್ಮಲ್ಲಿ ಬಂದಾಗ ಒಂದು ವೇಳೆ ನೀವು ನನ್ನ ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲವೇನೋ ಮತ್ತು ನಿಮ್ಮ ನಿರೀಕ್ಷೆಗೆ ತಕ್ಕಂತೆ ನಾನು ಕಾಣಿಸುವುದಿಲ್ಲವೇನೋ ಎಂಬ ಶಂಕೆ ನನಗಿದೆ. ನಿಮ್ಮಲ್ಲಿ ಜಗಳ, ದ್ವೇಷ, ಅಸೂಯೆ, ಸ್ವಾರ್ಥ, ಚಾಡಿಮಾತು, ಹರಟೆ, ಅಹಂಕಾರ, ಅನೀತಿ - ಇವುಗಳು ಇರಬಹುದೇನೋ ಎಂಬ ದಿಗಿಲೂ ನನಗಿದೆ.


ಹಾಲು ಕಡೆಯುವುದರಿಂದ ಬೆಣ್ಣೆ; ಮೂಗು ಹಿಂಡುವುದರಿಂದ ರಕ್ತ; ಕೋಪ ಎಬ್ಬಿಸುವುದರಿಂದ ಜಗಳ.


“ನಿಮಗೆ ನಾನು ಕೇಡುಮಾಡಬೇಕೆಂದಿದ್ದೇನೆಂದು ಹೇಳುವವರ ಮಾತಿಗೆ ನೀವು ಕಿವಿಗೊಡಬೇಡಿ.


ಕೋಪಿಷ್ಠನು ಜಗಳವೆಬ್ಬಿಸುವನು; ಕ್ರೋಧಶೀಲನು ದೋಷಭರಿತನು.


ನೀಚನು ಕೇಡೆಂಬ ಗುಳಿಯನ್ನು ತೋಡುತ್ತಾನೆ; ಸುಡುವ ಬೆಂಕಿಯ ಜ್ಞಾಲೆ ಅವನ ನಾಲಿಗೆ.


ಹಿಂಸಾತ್ಮಕನು ನೆರೆಯವನನ್ನು ಮರುಳುಗೊಳಿಸುತ್ತಾನೆ; ಅವನನ್ನು ದುರ್ಮಾರ್ಗಕ್ಕೆ ಎಳೆಯುತ್ತಾನೆ.


ಮಿತ್ರನ ಪ್ರೀತಿ ನಿರಂತರ; ಕಷ್ಟಕ್ಕಾದವನೆ ಹುಟ್ಟುನಂಟ.


ಕಲಹವೆಬ್ಬಿಸುವುದು ಬುದ್ಧಿಹೀನನ ತುಟಿ; ಪೆಟ್ಟಿಗಾಗಿ ಕೂಗಿಕೊಳ್ಳುವುದು ಅವನ ಬಾಯಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು