Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 16:24 - ಕನ್ನಡ ಸತ್ಯವೇದವು C.L. Bible (BSI)

24 ಸವಿನುಡಿಯು ಜೇನಿನ ಕೊಡವು; ಅದು ಆತ್ಮಕ್ಕೆ ಇಂಪು, ದೇಹಕ್ಕೆ ತಂಪು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಸವಿನುಡಿಯು ಜೇನುಕೊಡ, ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಸವಿನುಡಿಯು ಜೇನುಕೊಡ; ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಸವಿನುಡಿಗಳು ಜೇನಿನಂತಿವೆ. ಅವು ಸ್ವೀಕಾರಕ್ಕೆ ಸುಲಭ; ಆರೋಗ್ಯಕ್ಕೆ ಉಪಯುಕ್ತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ವಿನಯದ ಮಾತುಗಳು ಜೇನುಗೂಡು ಪ್ರಾಣಕ್ಕೆ ಮಧುರವೂ, ಎಲುಬುಗಳಿಗೆ ಕ್ಷೇಮವೂ ಆಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 16:24
18 ತಿಳಿವುಗಳ ಹೋಲಿಕೆ  

ಕತ್ತಿ ಇರಿತದಂತೆ ದುಡುಕನ ಮಾತು; ಹುಣ್ಣಿಗೆ ಮದ್ದುಹಾಕಿದಂತೆ ಜ್ಞಾನಿಗಳ ಮಾತು.


ಕಂಡುಹಿಡಿಯಬಲ್ಲವನಿಗೆ ಅವು ಜೀವದಾಯಕ; ಇಡೀ ದೇಹಕ್ಕೆ ಅವು ಆರೋಗ್ಯಕರ.


ಆಗ ನಿನಗೆ ದೇಹಾರೋಗ್ಯ ದೊರಕುವುದು, ನಿನ್ನ ಎಲುಬುಗಳಿಗೆ ಶಕ್ತಿಸಾರತ್ವ ಸಿಗುವುದು.


ನಿನ್ನ ಬಾಯಿಂದ ಹಿತೋಕ್ತಿಗಳು ಬಂದರೆ ಸಂತೋಷ ನನ್ನ ಅಂತರಾತ್ಮಕ್ಕೆ.


ತೈಲ, ಸುಗಂಧ ದ್ರವ್ಯಗಳು ಮನೋಹರ, ಮಿತ್ರನ ಆದರಣೆ, ಸಲಹೆ ಅತಿ ಮಧುರ.


ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ I ಜೇನುತುಪ್ಪಕ್ಕಿಂತ ಸಿಹಿ ನನ್ನ ಬಾಯಿಗೆ II


ಅಪೇಕ್ಷಣೀಯವಾದುವವು ಚಿನ್ನ ಅಪರಂಜಿಗಿಂತ I ಅತಿಮಧುರವಾದುವು ಅಪ್ಪಟ ಜೇನುತುಪ್ಪಕ್ಕಿಂತ II


ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ?


ದುರುಳರ ಕುಯುಕ್ತಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರ ಸುಸೂಕ್ತಿ ಆತನಿಗೆ ಪ್ರಿಯ.


ನನ್ನ ಉಪದೇಶ ಹಸಿಹುಲ್ಲಿನ ಮೇಲೆ ಮೆಲ್ಲನೆ ಸುರಿವ ತುಂತುರುಗಳಂತೆ ನನ್ನ ಬೋಧೆ ಕಾಯಿಪಲ್ಯಗಳ ಮೇಲೆ ಮಂಜಿನಂತೆ ಬೀಳುವ ಹದಮಳೆಯಂತೆ.


ಸದುತ್ತರ ಕೊಡುವವನಿಗೆ ಎಷ್ಟೋ ಸಂತೋಷ; ಸಮಯೋಚಿತ ವಚನ ಎಷ್ಟೋ ಸ್ವಾರಸ್ಯ.


ನನ್ನ ವಧುವೇ, ಜೇನು ಸುರಿಯುತ್ತಿದೆ ನಿನ್ನ ತುಟಿಗಳಿಂದ ಹಾಲುಜೇನು ಬರುತ್ತಿದೆ ನಿನ್ನ ನಾಲಗೆಯಡಿಯಿಂದ ಲೆಬನೋನಿನ ಸುಗಂಧ ಸೂಸುತ್ತಿದೆ ನಿನ್ನ ಉಡುಪಿನಿಂದ.


ಹರ್ಷ ಹೃದಯ ಒಳ್ಳೆಯ ಔಷಧ; ಕುಗ್ಗಿದ ಮನದಿಂದ ಅಸ್ಥಿಪಂಜರ.


ಹಿತಕರವಾದ ವಚನಗಳನ್ನು ಅವನು ಹುಡುಕಿ ಆರಿಸಿದ; ಅವನಿಂದ ರಚಿತವಾದವು ಸರಿಯಾದುವು, ಸತ್ಯವಾದುವು.


ಅಂತೆಯೇ, ನಾನು ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ತೆಗೆದುಕೊಂಡು ತಿಂದೆ. ಅದು ನನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿತ್ತು. ಆದರೆ ಅದನ್ನು ತಿಂದಮೇಲೆ ನನ್ನ ಹೊಟ್ಟೆಯೆಲ್ಲಾ ಕಹಿಯಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು