Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 15:28 - ಕನ್ನಡ ಸತ್ಯವೇದವು C.L. Bible (BSI)

28 ಸಜ್ಜನರು ಸಮಾಲೋಚಿಸಿ ಉತ್ತರಿಸುತ್ತಾರೆ; ದುರ್ಜನರು ಕೆಟ್ಟದ್ದನ್ನು ಕಕ್ಕುತ್ತಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ, ದುಷ್ಟನ ಬಾಯಿ ಕೆಟ್ಟದ್ದನ್ನು ಕಾರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ; ದುಷ್ಟನ ಬಾಯಿ ಕೆಟ್ಟದ್ದನ್ನು ಕಕ್ಕುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಒಳ್ಳೆಯವರು ಎಚ್ಚರಿಕೆಯಿಂದ ಯೋಚಿಸಿ ಉತ್ತರ ಕೊಡುವರು. ದುಷ್ಟರಾದರೋ ಯೋಚಿಸದೆ ಮಾತಾಡುವರು; ಅದರಿಂದ ಜನರಿಗೆ ಕೇವಲ ತೊಂದರೆಯಷ್ಟೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ನೀತಿವಂತರ ಹೃದಯವು ಹೇಗೆ ಉತ್ತರಿಸಬೇಕೆಂದು ಯೋಚಿಸುತ್ತದೆ. ಆದರೆ ದುಷ್ಟರ ಬಾಯಿಯು ಕೆಟ್ಟವುಗಳನ್ನು ಹೊರಗೆಡವುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 15:28
17 ತಿಳಿವುಗಳ ಹೋಲಿಕೆ  

ಕ್ರಿಸ್ತಯೇಸುವನ್ನು ಪ್ರಭುವೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಾಪಿಸಿರಿ. ನಿಮ್ಮಲ್ಲಿರುವ ನಂಬಿಕೆ ನಿರೀಕ್ಷೆಯ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರಿಗೆ ತಕ್ಕ ಉತ್ತರ ಕೊಡಲು ಸರ್ವದಾ ಸಿದ್ಧರಾಗಿರಿ.


ಮೂಢನು ತನ್ನ ಕೋಪವನ್ನೆಲ್ಲ ವ್ಯಕ್ತಪಡಿಸುವನು; ಜ್ಞಾನಿ ತನ್ನ ಕೋಪವನ್ನು ತಡೆಹಿಡಿದು ಶಮನಗೊಳ್ಳುವನು.


ದುಡುಕಿ ಮಾತನಾಡಬೇಡ. ದೇವರ ಸನ್ನಿಧಿಯಲ್ಲಿ ಮಾತುಕೊಡಲು ಆತುರಪಡಬೇಡ. ದೇವರು ಇರುವುದು ಪರಲೋಕದಲ್ಲಿ, ನೀನಿರುವುದಾದರೋ ಭೂಲೋಕದಲ್ಲಿ. ಆದುದರಿಂದ ನಿನ್ನ ಮಾತುಗಳಿಗೆ ಮಿತಿಯಿರಲಿ.


ಜ್ಞಾನಿಗಳ ನಾಲಿಗೆ ತಿಳುವಳಿಕೆಯನ್ನು ಸಾರ್ಥಕಪಡಿಸುತ್ತದೆ; ಜ್ಞಾನಹೀನರ ಬಾಯಿ ಮೂರ್ಖತನವನ್ನು ಕಕ್ಕುತ್ತದೆ.


ಎಲೈ ವಿಷಸರ್ಪಗಳ ಪೀಳಿಗೆಯೇ, ಕೆಟ್ಟವರಾಗಿರುವ ನಿಮ್ಮ ಬಾಯಿಂದ ಒಳ್ಳೆಯ ಮಾತು ಬರಲು ಸಾಧ್ಯವೇ? ಹೃದಯದಲ್ಲಿ ತುಂಬಿತುಳುಕುವುದನ್ನೇ ನಾಲಿಗೆ ನುಡಿಯುತ್ತದೆ.


ನಿನ್ನ ಬಾಯಿ ಪಾಪಕ್ಕೆ ಕಾರಣ ಆಗದಂತೆ ನೋಡಿಕೊ. ಅದು ಅಜಾಗ್ರತೆಯಿಂದ ಆಯಿತೆಂದು ದೇವದೂತನ ಮುಂದೆ ನೆಪ ಹೇಳಬೇಡ. ದೇವರು ನಿನ್ನ ಮಾತಿಗೆ ಕೋಪಗೊಂಡು ನಿನ್ನ ಕೆಲಸವನ್ನು ಹಾಳುಮಾಡಿಯಾರು.


ದುಡುಕಿ ಮಾತಾಡುವವನನ್ನು ನೋಡು; ಅಂಥವನಿಗಿಂತಲು ಮೂಢನ ಸುಧಾರಣೆ ಹೆಚ್ಚು ಸಾಧ್ಯ.


ಜ್ಞಾನಿಯ ಹೃದಯದಿಂದ ಬಾಯಿಗೆ ಜಾಣತನ; ಅವನ ತುಟಿಗಳಿಗೆ ಕಲಿಕೆಯ ಚೂಟಿತನ.


ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಮೂಢನು ಮೂರ್ಖತನವನ್ನು ತೋರ್ಪಡಿಸುತ್ತಾನೆ.


ವಾಚಾಳಿಗೆ ಪಾಪ ತಪ್ಪದು; ಮೌನಿಗೆ ಜ್ಞಾನ ಕೆಡದು.


ದುರ್ಮಾರ್ಗಿಗಳ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡವರನ್ನು ಇವರು ಜಂಬದ ಸೊಕ್ಕುಮಾತುಗಳಿಂದ, ಮೂರ್ಖ ಹೇಳಿಕೆಗಳಿಂದ, ಭೋಗ-ವಿಲಾಸಗಳ ಬಲೆಯಿಂದ ವಶಪಡಿಸಿಕೊಳ್ಳುತ್ತಾರೆ.


ಅವರ ಬಾಯಿ ಬೊಗಳುವ ಮಾತುಗಳನು ಕೇಳು I ಅವರ ತುಟಿಗಳು ಹರಿತ ಕತ್ತಿಕಠಾರಿಗಳು I ನಮಗಾರು ಕಿವಿಗೊಡರೆಂಬುದೆ ಅವರ ಗೋಳು II


ಸಜ್ಜನರ ಬಾಯಲ್ಲಿ ಹಿತವಚನ; ದುರ್ಜನರ ಬಾಯಲ್ಲಿ ನೀಚವಚನ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು