Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 14:33 - ಕನ್ನಡ ಸತ್ಯವೇದವು C.L. Bible (BSI)

33 ಬುದ್ಧಿವಂತರ ಹೃದಯ ಜ್ಞಾನದ ಆಶ್ರಯ; ಬುದ್ಧಿಹೀನರ ಹೃದಯ ಜ್ಞಾನದ ಶೂನ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ವಿವೇಕಿಯ ಹೃದಯ ಜ್ಞಾನಾಶ್ರಯ, ಜ್ಞಾನಹೀನನ ಹೃದಯದಲ್ಲಿ ಅದು ಕಾಣದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ವಿವೇಕಿಯ ಹೃದಯ ಜ್ಞಾನಾಶ್ರಯ; ಜ್ಞಾನಹೀನನ ಒಳಗುಟ್ಟು ರಟ್ಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ವಿವೇಕಿಯು ಯಾವಾಗಲೂ ಜ್ಞಾನದ ಕಾರ್ಯಗಳನ್ನು ಆಲೋಚಿಸುವನು. ಮೂಢನಿಗಾದರೋ ಜ್ಞಾನದ ಬಗ್ಗೆ ಏನೂ ತಿಳಿಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ತಿಳುವಳಿಕೆಯುಳ್ಳವನ ಹೃದಯದಲ್ಲಿ ಜ್ಞಾನವು ನೆಲೆಯಾಗಿದೆ, ಆದರೆ ಮೂರ್ಖರಲ್ಲಿ ಜ್ಞಾನವು ಕಂಡುಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 14:33
10 ತಿಳಿವುಗಳ ಹೋಲಿಕೆ  

ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವುದು; ಜಾಣನು ನಿಂದೆಯನ್ನು ಮರೆಮಾಚುವನು.


ಬುದ್ಧಿತಪ್ಪಿ ತಿರುಗಾಡುವ ಹುಚ್ಚನು ದಾರಿಯಲ್ಲೆಲ್ಲಾ ತನ್ನ ಹುಚ್ಚುತನವನ್ನು ಪ್ರಕಟಮಾಡುತ್ತಾನೆ.


ಮೂಢನು ತನ್ನ ಕೋಪವನ್ನೆಲ್ಲ ವ್ಯಕ್ತಪಡಿಸುವನು; ಜ್ಞಾನಿ ತನ್ನ ಕೋಪವನ್ನು ತಡೆಹಿಡಿದು ಶಮನಗೊಳ್ಳುವನು.


ಸಜ್ಜನರು ಸಮಾಲೋಚಿಸಿ ಉತ್ತರಿಸುತ್ತಾರೆ; ದುರ್ಜನರು ಕೆಟ್ಟದ್ದನ್ನು ಕಕ್ಕುತ್ತಿರುತ್ತಾರೆ.


ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಮೂಢನು ಮೂರ್ಖತನವನ್ನು ತೋರ್ಪಡಿಸುತ್ತಾನೆ.


ಜಾಣನು ತನ್ನ ಜ್ಞಾನವನ್ನು ಮುಚ್ಚಿಡುವನು; ಮೂಢನು ತನ್ನ ಮೂರ್ಖತನವನ್ನು ಪ್ರಕಟಿಸುವನು.


ಜ್ಞಾನಿಗಳ ನಾಲಿಗೆ ತಿಳುವಳಿಕೆಯನ್ನು ಸಾರ್ಥಕಪಡಿಸುತ್ತದೆ; ಜ್ಞಾನಹೀನರ ಬಾಯಿ ಮೂರ್ಖತನವನ್ನು ಕಕ್ಕುತ್ತದೆ.


ಜ್ಞಾನ ಉದಯಿಸುವುದು ನಿನ್ನ ಹೃದಯದೊಳಗೆ, ತಿಳುವಳಿಕೆ ಬೆಳಗುವುದು ನಿನ್ನ ಆತ್ಮದೊಳಗೆ.


ಆಪತ್ಕಾಲ ಬಂದಾಗ ದುಷ್ಟನು ಹಾಳಾಗುತ್ತಾನೆ; ಮರಣವೇಳೆಯಲ್ಲೂ ನೀತಿವಂತ ನಂಬಿಕೆಯಿಂದಿರುತ್ತಾನೆ.


ಸದಾಚಾರದಿಂದ ನಾಡಿನ ಉನ್ನತಿ; ಅನಾಚಾರದಿಂದ ಅದರ ಅವನತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು