Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 13:19 - ಕನ್ನಡ ಸತ್ಯವೇದವು C.L. Bible (BSI)

19 ಇಷ್ಟಸಿದ್ಧಿ ಮನಸ್ಸಿಗೆ ಸಿಹಿ; ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಇಷ್ಟಸಿದ್ಧಿ ಮನಸ್ಸಿಗೆ ಸಿಹಿ, ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಇಷ್ಟಸಿದ್ಧಿ ಮನಸ್ಸಿಗೆ ಸಿಹಿ; ಕೆಟ್ಟದ್ದನ್ನು ಬಿಡುವದು ಮೂಢರಿಗೆ ಕಹಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಒಬ್ಬನು ತಾನು ಅಪೇಕ್ಷಿಸಿದ್ದನ್ನು ಪಡೆದುಕೊಂಡರೆ, ಅದರ ಮೇಲೆ ಅವನಿಗೆ ಬಹಳ ಇಷ್ಟವಿರುವುದು. ಮೂಢರು ಕೇಡಿಗೆ ವಿಮುಖರಾಗಲು ಅಸಹ್ಯಪಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಕನಸುಗಳು ನನಸಾಗುವುದನ್ನು ನೋಡುವುದು ಆಹ್ಲಾದಕರವಾಗಿರುತ್ತದೆ; ಕೆಟ್ಟತನದಿಂದ ತಿರುಗುವುದು ಮೂರ್ಖರಿಗೆ ಅಸಹ್ಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 13:19
17 ತಿಳಿವುಗಳ ಹೋಲಿಕೆ  

ಸಜ್ಜನರಿಗೆ ದುರ್ಮಾರ್ಗಿ ತಿರಸ್ಕೃತನು; ದುರ್ಜನರಿಗೆ ಸನ್ಮಾರ್ಗಿ ತಿರಸ್ಕೃತನು.


ಕೋರಿದ್ದು ತಡವಾದರೆ ಮನಸ್ಸಿಗೆ ತುಡಿತ; ಕೈಗೂಡಿದ ಇಷ್ಟಾರ್ಥ ಜೀವವೃಕ್ಷ.


ಆದರೆ ದೇವರು ಹಾಕಿದಂಥ ಸುಸ್ಥಿರವಾದ ಅಸ್ತಿವಾರವನ್ನು ಯಾರಿಂದಲೂ ಕದಲಿಸಲಾಗದು. ಅದರಲ್ಲಿ “ತನ್ನವರು ಯಾರು ಎಂದು ಪ್ರಭು ಅರಿತಿದ್ದಾರೆ; ಮತ್ತು ತಾನು ಪ್ರಭುವಿನವನೆಂದು ಹೇಳಿಕೊಳ್ಳುವವರೆಲ್ಲರೂ ದುರ್ಮಾರ್ಗದಿಂದ ದೂರವಿರಲಿ,” ಎಂದು ಲಿಖಿತವಾಗಿದೆ.


ಸಜ್ಜನರ ರಾಜಮಾರ್ಗ ಹಾನಿಗೆ ದೂರ; ಸನ್ನಡತೆಯುಳ್ಳವ ಪ್ರಾಣಸಂರಕ್ಷಕ.


ಅವರನ್ನು ಬಿಟ್ಟ ತುಸು ಹೊತ್ತಿನಲ್ಲೆ ನನ್ನ ಪ್ರಾಣಕಾಂತನನ್ನು ಕಂಡುಕೊಂಡೆ. ತಾಯ ಮನೆಗೆ, ನನ್ನ ಹೆತ್ತವಳ ಮನೆಗೆ ಕರೆದೊಯ್ದೆ ಕೈಯ ಬಿಡದೆಯೆ ಕರೆದುಕೊಂಡು ಹೋದೆ.


ಪ್ರೀತಿ ಸತ್ಯತೆಗಳಿಂದ ಪಾಪನಿವಾರಣೆ; ಸರ್ವೇಶ್ವರನ ಭಯಭಕ್ತಿಯಿಂದ ಹಾನಿ ನಿವಾರಣೆ.


ನೀನೇ ಬುದ್ಧಿವಂತನೆಂದು ಎಣಿಸದಿರು. ಸರ್ವೇಶ್ವರನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.


ಬಿಡು ಕೆಟ್ಟದನು, ಮಾಡು ಒಳ್ಳಿತನು I ಹುಡುಕು ಶಾಂತಿಯನು, ಬೆನ್ನಟ್ಟು ಅದನು II


ಬಳಿಕ ಮಾನವನಿಗೆ ಇಂತೆಂದನು: ‘ಸರ್ವೇಶ್ವರನಲ್ಲಿ ಭಯಭಕ್ತಿ ಇಡುವುದೇ ಸುಜ್ಞಾನ ದುಷ್ಟತನವನ್ನು ಬಿಟ್ಟುಬಿಡುವುದೇ ವಿವೇಕ’.”


‘ನಾನು ಕಣ್ಣಾರೆ ಕಾಣುವಂತೆ ಇಂದು ನನ್ನ ಸಿಂಹಾಸನಕ್ಕೆ ಒಬ್ಬ ಉತ್ತರಾಧಿಕಾರಿಯನ್ನು ದಯಪಾಲಿಸಿದ ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ!’ ಎಂದು ಹೇಳಿದ್ದಾನೆ,” ಎಂದನು.


ಕೆಟ್ಟದನು ಬಿಡು, ಒಳ್ಳೆಯದನು ಮಾಡು I ಸಿರಿನಾಡಿನಲಿ ಚಿರಕಾಲ ಬಾಳು II


ಶಿಕ್ಷೆಯನ್ನು ಉಪೇಕ್ಷಿಸುವವನಿಗೆ ಕಾದಿದೆ ಬಡತನ ಹಾಗು ಅವಮಾನ; ಗದರಿಕೆಯನ್ನು ಗಮನಿಸುವವ ಹೊಂದುವನು ಸನ್ಮಾನ.


ಸುಜ್ಞಾನಿಗಳ ಸಹವಾಸದಿಂದ ಜನರು ಸುಜ್ಞಾನಿಗಳಾಗುವರು; ಅಜ್ಞಾನಿಗಳ ಒಡನಾಟದಿಂದ ಸಂಕಟಪಡುವರು.


ಕೊಲೆಪಾತಕರು ನೀತಿವಂತನನ್ನು ದ್ವೇಷಿಸುವರು; ಅಂಥವನ ಪ್ರಾಣಕ್ಕೂ ಹೊಂಚುಹಾಕುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು