Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 12:7 - ಕನ್ನಡ ಸತ್ಯವೇದವು C.L. Bible (BSI)

7 ದುರ್ಜನರು ನೆಲಕ್ಕುರುಳಿ ನಿರ್ಮೂಲರಾಗುವರು; ಸಜ್ಜನರ ತಲೆಮಾರು ಸ್ಥಿರವಾಗಿ ನಿಲ್ಲುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ದುರ್ಜನರು ಕೆಡವಲ್ಪಟ್ಟು ನಿರ್ಮೂಲರಾಗುವರು, ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ದುರ್ಜನರು ಕೆಡವಲ್ಪಟ್ಟು ನಿರ್ಮೂಲರಾಗುವರು; ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ದುರ್ಜನರು ಸರ್ವನಾಶವಾಗುವರು; ಆದರೆ ಸಜ್ಜನರ ಕುಟುಂಬವು ಸ್ಥಿರವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ದುಷ್ಟರು ನೆಲಕ್ಕುರುಳಿ ನಿರ್ಮೂಲರಾಗುವರು, ಆದರೆ ನೀತಿವಂತರ ಮನೆಯು ಸ್ಥಿರವಾಗಿ ನಿಲ್ಲುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 12:7
20 ತಿಳಿವುಗಳ ಹೋಲಿಕೆ  

ದುಷ್ಟನಿಗೆ ದಂಡನೆ ಕಟ್ಟಿಟ್ಟ ಬುತ್ತಿ; ಶಿಷ್ಟ ಸಂತಾನಕ್ಕೆ ಸಿಗುವುದು ಮುಕ್ತಿ.


ಬಿರುಗಾಳಿ ಬೀಸಿದರೆ ದುರ್ಜನರು ಇಲ್ಲವಾಗುವರು; ಸಜ್ಜನರಾದರೋ ಸದಾಕಾಲ ಸ್ಥಿರವಾಗಿ ನಿಲ್ಲುವರು.


ದುರ್ಜನರು ನಿರಾಶೆಯಿಂದ ಕಂಗೆಡುವರು ಪ್ರಾಣಬಿಡಬೇಕೆಂಬುದೇ ಅವರ ಆಶೆಯಾಗಿರುವುದು.”


ಅರಸನು ಎಸ್ತೇರಳಿಗೆ ತನ್ನ ಇಚ್ಛೆಯಂತೆ ಮಾಡಲು ಅಪ್ಪಣೆಕೊಟ್ಟನು. ಕೂಡಲೆ ಇದಕ್ಕೆ ಸಂಬಂಧಪಟ್ಟ ರಾಜಾಜ್ಞೆ ಶೂಷನ್ ನಗರದಲ್ಲಿ ಪ್ರಕಟವಾಯಿತು. ಹಾಮಾನನ ಹತ್ತುಮಂದಿ ಮಕ್ಕಳ ಶವಗಳನ್ನು ಗಲ್ಲಿಗೇರಿಸಲಾಯಿತು.


‘ಸರ್ವಶಕ್ತರಾದ ಸರ್ವೆಶ್ವರ, ಇಸ್ರಯೇಲರ ದೇವರು,’ ಎಂಬ ತಮ್ಮ ನಾಮಧೇಯಗಳಿಗೆ ಸದಾಕಾಲವೂ ಮಹಿಮೆ ಉಂಟಾಗಲಿ! ತಮ್ಮ ದಾಸ ದಾವೀದನ ಮನೆತನವು ನಿಮ್ಮ ಸನ್ನಿಧಿಯಲ್ಲಿ ಸ್ಥಿರವಾಗಿರಲಿ.


ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು.”


ಗರ್ವಿಷ್ಠನ ಮನೆಯನ್ನು ಸರ್ವೇಶ್ವರ ಕೆಡವಿಬಿಡುವನು; ವಿಧವೆಯ ಎಲ್ಲೆ ಮೇರೆಯನ್ನು ಸುಭದ್ರಪಡಿಸುವನು.


ದುಷ್ಟರ ಮನೆಮಠ ನಿರ್ಮೂಲವಾಗುವುದು; ಸಜ್ಜನರ ಗುಡಾರ ಉದ್ಧಾರವಾಗುವುದು.


ಬುದ್ಧಿವಂತೆ ತನ್ನ ಮನೆಯನ್ನು ಕಟ್ಟೆಬ್ಬಿಸುತ್ತಾಳೆ; ಬುದ್ಧಿಹೀನೆ ಅದನ್ನು ಕೈಯಿಂದ ಕೆಡವಿಹಾಕುತ್ತಾಳೆ.


ದುರುಳನು ಕಾಣದೆ ಹೋಗುವನು ಕೊಂಚಕಾಲದೊಳು I ಹುಡುಕಿದರು ಕಾಣಸಿಗನಾಗ ಊರು ಕೇರಿಗಳೊಳು II


ದುಷ್ಕಾರ್ಯಗಳು ಆತನಿಗೆ ತಿಳಿದಿರುವ ಕಾರಣ ಇರುಳಲ್ಲೇ ದುರುಳರನು ಕೆಡವಿ ನಾಶಕ್ಕೆ ಗುರಿಮಾಡುವನು.


ಬುದ್ಧಿವಂತನನ್ನು ಅವರ ಬುದ್ಧಿಗೆ ತಕ್ಕಂತೆ ಜನ ಹೊಗಳುವರು; ವಕ್ರಬುದ್ಧಿಯುಳ್ಳವನನ್ನಾದರೊ ಅವರು ತೆಗಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು