Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 12:26 - ಕನ್ನಡ ಸತ್ಯವೇದವು C.L. Bible (BSI)

26 ನೀತಿವಂತ ನೆರೆಯವನಿಗೆ ದಾರಿತೋರಿಸುವನು; ಅನೀತಿವಂತನು ಅವನಿಗೆ ದಾರಿ ತಪ್ಪಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಸನ್ಮಾರ್ಗಿಯು ನೆರೆಯವನಿಗೆ ಮಾರ್ಗತೋರಿಸುವನು, ದುರ್ಮಾರ್ಗಿಯು ಮಾರ್ಗತಪ್ಪಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಸನ್ಮಾರ್ಗಿಯು ನೆರೆಯವನಿಗೆ ಮಾರ್ಗ ತೋರಿಸುವನು; ದುರ್ಮಾರ್ಗಿಯು ಮಾರ್ಗತಪ್ಪಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಸನ್ಮಾರ್ಗಿಯು ತನ್ನ ನೆರೆಯವನಿಗೆ ಒಳ್ಳೆಯ ಮಾರ್ಗವನ್ನು ತೋರಿಸುತ್ತಾನೆ; ದುರ್ಮಾರ್ಗಿಯು ಬೇರೆಯವರನ್ನು ದಾರಿ ತಪ್ಪಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ನೀತಿವಂತರು ತಮ್ಮ ಸ್ನೇಹಿತರನ್ನು ಎಚ್ಚರಿಕೆಯಿಂದ ಆರಿಸುತ್ತಾರೆ, ಆದರೆ ದುಷ್ಟರ ಮಾರ್ಗವು ಅವರನ್ನು ತಪ್ಪು ದಾರಿಗೆ ಎಳೆಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 12:26
16 ತಿಳಿವುಗಳ ಹೋಲಿಕೆ  

ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸಬೇಕೆಂದಿರುವವರನ್ನು ಕುರಿತು ಇದನ್ನು ನಿಮಗೆ ಬರೆದಿದ್ದೇನೆ.


ಹಿಡಿದು ಮಾತಾಡುವವನು ಜ್ಞಾನಿ; ಶಾಂತ ಗುಣವುಳ್ಳವನು ವಿವೇಕಿ.


ಮಾತಿನ ದೋಷದಿಂದ ಕೆಡುಕನು ಬೋನಿಗೆ ಬೀಳುವನು; ನೀತಿವಂತನು ಆಪತ್ತಿನಿಂದ ತಪ್ಪಿಸಿಕೊಳ್ಳುವನು.


ಸಮಸ್ತ ಜಗತ್ತನ್ನೂ ವಂಚಿಸುತ್ತಿದ್ದ ಆ ಮಹಾಘಟಸರ್ಪವನ್ನು ಭೂಮಿಗೆ ತಳ್ಳಲಾಯಿತು. ಈ ಪುರಾತನ ಸರ್ಪಕ್ಕೆ ‘ಪಿಶಾಚಿ’ ಎಂತಲೂ ‘ಸೈತಾನ’ ಎಂತಲೂ ಹೆಸರು. ಅದರ ದೂತರನ್ನು ಅದರೊಡನೆ ತಳ್ಳಲಾಯಿತು.


ಮೊದಲನೆಯ ಮೃಗದ ಎದುರಿನಲ್ಲಿ ಪವಾಡಗಳನ್ನೆಸಗುವ ಅನುಮತಿ ಇದ್ದುದರಿಂದ ಅದು ಭೂನಿವಾಸಿಗಳನ್ನು ಮರುಳುಗೊಳಿಸಿತು. ಖಡ್ಗದಿಂದ ಗಾಯಗೊಂಡಿದ್ದರೂ ಸಾಯದೆ ಬದುಕಿದ್ದ ಮೃಗದ ಗೌರವಾರ್ಥ ಒಂದು ವಿಗ್ರಹವನ್ನು ನಿರ್ಮಿಸಬೇಕೆಂದು ಭೂನಿವಾಸಿಗಳಿಗೆ ಅದು ವಿಧಿಸಿತು.


ಸಂತರು ನಾಡಿಗೆ ತಿಲಕವು I ಅವರಲ್ಲಿದೆ ಎನಗೆ ಒಲವು II


ಚಿಂತೆ ಮನಸ್ಸನ್ನು ಕುಗ್ಗಿಸುತ್ತದೆ; ಸವಿಮಾತು ಅದನ್ನು ಹಿಗ್ಗಿಸುತ್ತದೆ.


ಮೈಗಳ್ಳನು ಬೇಟೆಯಾಡಿದ್ದನ್ನೂ ಬೇಯಿಸನು; ಚೂಟಿಯಾದವನ ಪಾಲಿಗೆ ಬರುವುದು ಸಂಪತ್ತು.


ಹಿಂಸಾತ್ಮಕನು ನೆರೆಯವನನ್ನು ಮರುಳುಗೊಳಿಸುತ್ತಾನೆ; ಅವನನ್ನು ದುರ್ಮಾರ್ಗಕ್ಕೆ ಎಳೆಯುತ್ತಾನೆ.


ಕೆಟ್ಟದ್ದನ್ನು ಕಲ್ಪಿಸುವವರು ಮಾರ್ಗಭ್ರಷ್ಟರು; ಒಳ್ಳೆಯದನ್ನು ಕಲ್ಪಿಸುವವರು ಮರ್ಯಾದಸ್ಥರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು