Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 12:17 - ಕನ್ನಡ ಸತ್ಯವೇದವು C.L. Bible (BSI)

17 ಸತ್ಯವಾದಿ ಪ್ರಾಮಾಣಿಕ ಸಾಕ್ಷಿ; ಸುಳ್ಳು ಸಾಕ್ಷಿ ಕಪಟ ವಾಚಾಳಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಸತ್ಯವನ್ನಾಡುವವನು ನ್ಯಾಯವನ್ನು ತೋರ್ಪಡಿಸುವನು, ಸುಳ್ಳುಸಾಕ್ಷಿಯು ಅಸತ್ಯವನ್ನು ನುಡಿಯುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಸತ್ಯವನ್ನಾಡುವವನು ನ್ಯಾಯವನ್ನು ತೋರ್ಪಡಿಸುವನು; ಸುಳ್ಳು ಸಾಕ್ಷಿಯು ಅಸತ್ಯಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಸತ್ಯಸಾಕ್ಷಿಯು ನ್ಯಾಯವನ್ನು ಪ್ರತಿಪಾದಿಸುವನು. ಆದರೆ ಸುಳ್ಳುಸಾಕ್ಷಿಯು ಅನ್ಯಾಯವನ್ನು ಪ್ರಕಟಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಒಬ್ಬ ಪ್ರಾಮಾಣಿಕ ಸಾಕ್ಷಿ ಸತ್ಯವನ್ನು ಹೇಳುತ್ತಾನೆ, ಆದರೆ ಸುಳ್ಳುಸಾಕ್ಷಿಯು ಸುಳ್ಳನ್ನು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 12:17
15 ತಿಳಿವುಗಳ ಹೋಲಿಕೆ  

ಸತ್ಯವಾಡುವವನ ಸಾಕ್ಷಿ ಪ್ರಾಣಕ್ಕೆ ರಕ್ಷಣೆ; ಸುಳ್ಳಾಡುವವನ ಮಾತು ಬರೀ ವಂಚನೆ.


ಸತ್ಯಸಾಕ್ಷಿ ಸುಳ್ಳಾಡದ ವ್ಯಕ್ತಿ; ಸುಳ್ಳು ಸಾಕ್ಷಿ ಅಬದ್ಧಪ್ರಿಯ ವ್ಯಕ್ತಿ.


ನೆರೆಯವನಿಗೆ ವಿರುದ್ಧ ಆಧಾರವಿಲ್ಲದ ಸಾಕ್ಷಿಹೇಳಬೇಡ; ಮಾತಿನಲ್ಲಿ ಅವನಿಗೆ ಮೋಸಮಾಡಬೇಡ.


ಹೃದಯದಿಂದ ದುರಾಲೋಚನೆ, ಕೊಲೆ, ವ್ಯಭಿಚಾರ, ಅನೈತಿಕತೆ, ಕಳ್ಳತನ, ಸುಳ್ಳುಸಾಕ್ಷಿ, ಅಪದೂರು, ಇವು ಹೊರಬರುತ್ತವೆ.


ಸುಳ್ಳು ಸಾಕ್ಷಿ ಹೇಳುವವನೇ ಅಳಿದುಹೋಗುವನು; ಕೇಳಿದ್ದನ್ನೆ ಹೇಳುವವನ ಸಾಕ್ಷಿ ಅಳಿಯದೆ ಉಳಿಯುವುದು.


ನೀಚಸಾಕ್ಷಿ ನ್ಯಾಯತೀರ್ಪನ್ನು ಮರ್ಯಾದಿಸನು; ದುಷ್ಟಸಾಕ್ಷಿ ದ್ರೋಹವನ್ನೂ ನುಂಗಿಬಿಡುವನು.


ಕಳ್ಳಸಾಕ್ಷಿ ದಂಡನೆಯನ್ನು ಪಡೆಯದಿರನು; ಸುಳ್ಳಾಡುವವನು ಅದನ್ನು ತಪ್ಪಿಸಿಕೊಳ್ಳಲಾರನು.


ಹಾಗೆ ಉತ್ತರ ಕೊಡುವಾಗ ಮರ್ಯಾದೆಯಿಂದಲೂ ಶಾಂತಿಸಮಾಧಾನದಿಂದಲೂ ಮಾತನಾಡಿ. ನಿಮ್ಮ ಮನಸ್ಸಾಕ್ಷಿ ಶುದ್ಧವಾಗಿರಲಿ. ಆಗ ಉತ್ತಮವಾದ ನಿಮ್ಮ ಕ್ರಿಸ್ತೀಯ ವರ್ತನೆಯನ್ನು ಕಂಡು ದೂಷಿಸಿದವರು, ನಿಮ್ಮನ್ನು ನಿಂದಿಸಿದ್ದಕ್ಕಾಗಿ ತಾವೇ ನಾಚಿಕೆಪಡುವರು.


ಕೆಲವು ಸುಳ್ಳುಸಾಕ್ಷಿಗಳನ್ನು ನೇಮಿಸಿಕೊಂಡು ಅವರಿಂದ, ‘ಇವನು ಯಾವಾಗಲೂ ನಮ್ಮ ಪವಿತ್ರದೇವಾಲಯದ ವಿರುದ್ಧ ಹಾಗೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧ ಮಾತನಾಡುತ್ತಾನೆ.


ಇತ್ತ ಮುಖ್ಯಯಾಜಕರೂ ಉಚ್ಛನ್ಯಾಯಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಸುಳ್ಳುಸಾಕ್ಷಿಯನ್ನು ಹುಡುಕುತ್ತಿದ್ದರು.


ಮೂರ್ಖನ ಸಿಟ್ಟು ತಟ್ಟನೆ ರಟ್ಟಾಗುವುದು; ಜಾಣನು ನಿಂದೆಯನ್ನು ಮರೆಮಾಚುವನು.


ಕತ್ತಿ ಇರಿತದಂತೆ ದುಡುಕನ ಮಾತು; ಹುಣ್ಣಿಗೆ ಮದ್ದುಹಾಕಿದಂತೆ ಜ್ಞಾನಿಗಳ ಮಾತು.


“ನೀವು ಮಾಡಬೇಕಾದುದು ಏನೆಂದರೆ: ಪ್ರತಿಯೊಬ್ಬನು ತನ್ನ ನೆರೆಯವನೊಡನೆ ಸತ್ಯವನ್ನೇ ಆಡಲಿ. ನ್ಯಾಯಾಲಯಗಳಲ್ಲಿ ನಿಮ್ಮ ತೀರ್ಪು ನ್ಯಾಯಸಮ್ಮತವಾಗಿರಲಿ, ಶಾಂತಿಯ ಸಾಧನ ಆಗಿರಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು