Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 12:11 - ಕನ್ನಡ ಸತ್ಯವೇದವು C.L. Bible (BSI)

11 ಉತ್ತು ವ್ಯವಸಾಯ ಮಾಡುವವನು ಹೊಟ್ಟೆತುಂಬ ಉಣ್ಣುವನು; ವ್ಯರ್ಥಕಾರ್ಯಗಳಲ್ಲಿ ಆಸಕ್ತಿಯುಳ್ಳವನು ಮತಿಹೀನನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು, ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು; ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ತನ್ನ ಜಮೀನಿನಲ್ಲಿ ದುಡಿಯುವ ರೈತನಿಗೆ ಸಾಕಷ್ಟು ಆಹಾರವಿರುವುದು. ಆದರೆ ಮೂಢನು ಪ್ರಯೋಜನವಿಲ್ಲದ ಸಂಗತಿಗಳಲ್ಲಿ ತನ್ನ ಸಮಯವನ್ನು ಹಾಳುಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ತನ್ನ ಹೊಲವನ್ನು ವ್ಯವಸಾಯ ಮಾಡುವವನು ಆಹಾರದಿಂದ ತೃಪ್ತಿಹೊಂದುವನು, ಆದರೆ ವ್ಯರ್ಥ ಕಾರ್ಯವನ್ನು ಹಿಂಬಾಲಿಸುವವನು ವಿವೇಕಶೂನ್ಯನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 12:11
23 ತಿಳಿವುಗಳ ಹೋಲಿಕೆ  

ದುಡಿದು ಹೊಲ ಗೇಯುವವನಿಗೆ ಹೊಟ್ಟೆ ತುಂಬ ಅನ್ನ; ವ್ಯರ್ಥಕಾರ್ಯಗಳಲ್ಲಿ ಆಸಕ್ತನಾದವನಿಗೆ ಬೇಕಾದಷ್ಟು ಬಡತನ.


ದುಡಿಮೆಯಿಂದ ಸದಾ ಲಾಭವುಂಟು; ಬರಿ ಮಾತಿನಿಂದ ಬಡತನ ಬರುವುದುಂಟು.


ನಿನ್ನ ಕೈ ಕೆಸರಾದರೆ ಬಾಯಿ ಮೊಸರಾಗುವುದು I ಧನ್ಯನಾಗುವೆ ನೀನು; ನಿನಗೆ ಶುಭವಾಗುವುದು II


ಕಳ್ಳತನ ಮಾಡುವವನು ಕಳ್ಳತನವನ್ನು ಬಿಟ್ಟುಬಿಡಲಿ; ಶ್ರಮಪಟ್ಟು ದುಡಿದು ಸಂಪಾದಿಸಲಿ. ಆಗ ತನ್ನ ಪ್ರಾಮಾಣಿಕ ದುಡಿಮೆಯಿಂದ ಕಷ್ಟದಲ್ಲಿರುವವರಿಗೆ ನೆರವು ನೀಡಲು ಸಾಧ್ಯವಾಗುವುದು.


ಪುಕ್ಕಟೆಯಾಗಿ ನಾವು ಯಾರ ಅನ್ನವನ್ನೂ ಉಣ್ಣಲಿಲ್ಲ. ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳೂ ನಾವೇ ಕಷ್ಟಪಟ್ಟು ದುಡಿದಿದ್ದೇವೆ.


ಮೂಢರೇ, ನಿಮ್ಮ ಮೂಢತ್ವವನ್ನು ಬಿಟ್ಟುಬಾಳಿರಿ, ವಿವೇಕ ಮಾರ್ಗದಲ್ಲಿ ನೆಟ್ಟಗೆ ನಡೆಯಿರಿ,” ಎಂದು ಪ್ರಬೋಧಿಸುತ್ತಾಳೆ.


ಎತ್ತುಗಳಿಲ್ಲದಿರುವಾಗ ಗೋದಲಿ ಶುದ್ಧ; ಆದರೆ ಎತ್ತಿನ ಶಕ್ತಿಯಿಂದಲೇ ಬೆಳೆಯ ಉತ್ಪನ್ನ.


ಜನಸಾಮಾನ್ಯರ ನಡುವೆ, ಯೌವನಸ್ಥರ ಮಧ್ಯೆ ಮತಿಗೆಟ್ಟ ಯುವಕನೊಬ್ಬ ನಡೆವುದನ್ನು ನಾನು ಕಂಡೆ.


ಸುಜ್ಞಾನಿಗಳ ಸಹವಾಸದಿಂದ ಜನರು ಸುಜ್ಞಾನಿಗಳಾಗುವರು; ಅಜ್ಞಾನಿಗಳ ಒಡನಾಟದಿಂದ ಸಂಕಟಪಡುವರು.


ನೀನುತ್ಪತ್ತಿಯಾದ ಮಣ್ಣಿಗೆ ಮರಳಿ ಸೇರುವ ತನಕ ಗಳಿಸಬೇಕು ಕವಳವನ್ನು ನೆತ್ತಿಬೆವರಿಡುತ. ಮಣ್ಣಿನಿಂದಲೇ ಬಂದವನು ನೀನು ಮರಳಿ ಮಣ್ಣಿಗೆ ಸೇರತಕ್ಕವನು."


ವ್ಯಭಿಚಾರಿಯು ಕೇವಲ ಬುದ್ಧಿಶೂನ್ಯನು; ತನ್ನೀ ಕೃತ್ಯದಿಂದ ಸ್ವನಾಶಮಾಡಿಕೊಳ್ಳುವನು.


“ಮುಗ್ಧಜೀವಿಗಳು ಯಾರಾದರೂ ಇದ್ದರೆ ಬರಲಿ ಇತ್ತ” ಎಂದು ಕರೆವಳು.


ಅಜ್ಞಾನವೆಂಬುವಳಾದರೊ ಕೂಗಾಟಗಾರ್ತಿ, ಏನೂ ತಿಳಿಯದ ಮೂಢ ಸ್ತ್ರೀ.


ದುಷ್ಟರ ಕೂಟದಲಿ ನಾ ಕೂರುವವನಲ್ಲ I ಕಪಟಿಗಳ ಸಂಘವನು ನಾ ಸೇರುವವನಲ್ಲ II


ಅದು ಮಾತ್ರವಲ್ಲ, ಬಾಳ್ ಬೆರೀತಿನ ದೇವಸ್ಥಾನದಿಂದ ಎಪ್ಪತ್ತು ಬೆಳ್ಳಿನಾಣ್ಯಗಳನ್ನು ಅವನಿಗೆ ಕೊಟ್ಟರು. ಅವನು ಈ ಹಣದಿಂದ ಕೆಲವು ಮಂದಿ ಪುಂಡಪೋಕರಿಗಳನ್ನು ಕೂಡಿಸಿ, ಅವರ ನಾಯಕನಾಗಿ ಹೊರಟು,


ನಿರರ್ಥಕ ವಿಗ್ರಹಗಳನಾರಾಧಿಪ ಜನರು ತೊರೆದಿಹರು ಹಾರ್ದಿಕ ಭಕ್ತಿಯನು


ನಿನ್ನ, ನಿನ್ನ ಮನೆಯವರ ಊಟ ತಿಂಡಿಗೆ, ನಿನ್ನ ದಾಸಿಯರ ಜೀವನಕ್ಕೆ ಮೇಕೆಗಳ ಹಾಲೇ ಸಾಕು.


ಬಡವರಿಗೆ ಬಂಜರುಭೂಮಿಯೂ ಬೆಳೆಯನ್ನೀಯುವುದುಂಟು; ಭಂಡತನ ಇರುವಲ್ಲಿ ಅದು ಕೂಡ ಹಾಳಾಗುವುದುಂಟು.


ನಿದ್ದೆಯಲ್ಲೆ ನಿರತನಾಗಿರಬೇಡ, ಬಡವನಾಗಿ ಬಿಡುವೆ. ಕಣ್ಣು ತೆರೆದು ದುಡಿ, ಹೊಟ್ಟೆತುಂಬ ಊಟ ಪಡೆವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು