Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 11:5 - ಕನ್ನಡ ಸತ್ಯವೇದವು C.L. Bible (BSI)

5 ನಿರ್ದೋಷಿಯ ಮಾರ್ಗ ಸರಾಗ; ದುಷ್ಟತನದಿಂದ ದುರುಳನ ಪತನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನಿರ್ದೋಷಿಯ ಧರ್ಮವು ಅವನ ಮಾರ್ಗವನ್ನು ಸರಾಗಮಾಡುವುದು, ದುಷ್ಟನು ತನ್ನ ದೋಷದಿಂದಲೇ ಬಿದ್ದುಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ನಿರ್ದೋಷಿಯ ಧರ್ಮವು ಅವನ ಮಾರ್ಗವನ್ನು ಸರಾಗಮಾಡುವದು; ದೋಷಿಯು ತನ್ನ ದೋಷದಿಂದಲೇ ಬಿದ್ದುಹೋಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನೀತಿವಂತನು ಯಥಾರ್ಥನಾಗಿದ್ದರೆ ಅವನ ಜೀವನವು ಸರಾಗವಾಗಿರುವುದು. ಆದರೆ ಕೆಡುಕನು ತನ್ನ ಕೆಟ್ಟಕಾರ್ಯಗಳಿಂದ ನಾಶವಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ನಿಷ್ಕಳಂಕರ ನೀತಿಯು ಅವರ ಮಾರ್ಗವನ್ನು ಸರಾಗ ಮಾಡುವುದು; ಆದರೆ ದುಷ್ಟರು ತಮ್ಮ ದುಷ್ಟತ್ವದಿಂದಲೇ ಬೀಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 11:5
19 ತಿಳಿವುಗಳ ಹೋಲಿಕೆ  

ದುರುಳನನ್ನು ಅವನ ದ್ರೋಹಗಳೆ ಆಕ್ರಮಿಸುತ್ತವೆ; ಅವನ ಪಾಪಪಾಶಗಳೇ ಅವನನ್ನು ಬಂಧಿಸುತ್ತವೆ.


ಸಜ್ಜನರಿಗೆ ಸರಳತೆ ಮಾರ್ಗದರ್ಶನ, ದುರ್ಜನರಿಗೆ ಅವರ ವಕ್ರತೆ ಸಂಹಾರಕ.


ನಿನ್ನ ನಡತೆಯಲ್ಲೆಲ್ಲಾ ನಿವೇದಿಸು ಆತನನ್ನು, ಆಗ ಸರಾಗಮಾಡುವನು ನಿನ್ನ ಮಾರ್ಗವನ್ನು.


ಅಹೀತೋಫೆಲನು ತನ್ನ ಆಲೋಚನೆ ನಡೆಯಲಿಲ್ಲವೆಂದು ತಿಳಿದು, ಕತ್ತೆಗೆ ತಡಿಹಾಕಿಸಿ ಕುಳಿತುಕೊಂಡು ತನ್ನ ಊರಿಗೆ ಹೋಗಿದ್ದನು. ಮನೆಯ ವ್ಯವಸ್ಥೆಮಾಡಿ ಅನಂತರ ಉರ್ಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು.


ಬೆನ್ಯಾಮೀನ್ಯರು ಹಿಂದಿರುಗಿ ನೋಡಿ ತಮ್ಮ ಪಟ್ಟಣ ಅಗ್ನಿಗೆ ಆಹುತಿ ಆದದ್ದನ್ನು ಕಂಡು ತಮಗೆ ಅಪಾಯ ಪ್ರಾಪ್ತ ಆಯಿತೆಂದು ಕಳವಳಗೊಂಡರು.


ದುಷ್ಟತನದಿಂದ ಯಾವನೂ ಸ್ಥಿರತೆಯನ್ನು ಗಳಿಸಿಲ್ಲ; ಶಿಷ್ಟನ ಬೇರನ್ನು ಯಾರೂ ಕದಲಿಸುವಂತಿಲ್ಲ.


ದುಷ್ಟನ ಮುಖದಲ್ಲಿ ಹಟಭಾವನೆ; ಸಜ್ಜನನ ನಡತೆಯಲ್ಲಿ ಸದೃಢತೆ.


ಅವನ ಬಿರುಸಾದ ಹೆಜ್ಜೆಗಳು ಜಡವಾಗುವುವು ಅವನು ಹಾಕಿದ ಯೋಜನೆಗಳು ಅವನನ್ನೆ ಕೆಡವಿಹಾಕುವುವು.


ಇಂಥವರು ಹೊಂಚುಹಾಕುವುದು ಸ್ವಹತ್ಯಕ್ಕೇ, ಬಲೆ ಒಡ್ಡುವುದು ಸ್ವಂತ ಪ್ರಾಣನಾಶಕ್ಕೆ.


ನೀತಿ ಕಾಪಾಡುವುದು ನಿರ್ದೋಷಿಯನ್ನು; ಅನೀತಿ ಕೆಡವಿಬಿಡುವುದು ಪಾಪಿಯನ್ನು.


ಆಪತ್ಕಾಲ ಬಂದಾಗ ದುಷ್ಟನು ಹಾಳಾಗುತ್ತಾನೆ; ಮರಣವೇಳೆಯಲ್ಲೂ ನೀತಿವಂತ ನಂಬಿಕೆಯಿಂದಿರುತ್ತಾನೆ.


ಸೋಮಾರಿಯ ದಾರಿ ಮುಳ್ಳಿನ ಬೇಲಿ; ಸಜ್ಜನರ ಮಾರ್ಗ ರಾಜಬೀದಿ.


ಸನ್ಮಾರ್ಗಿಗಳಿಗೆ ಸಂರಕ್ಷಣೆ, ದುರ್ಮಾರ್ಗಿಗಳಿಗೆ ಪತನ ತಟ್ಟನೆ.


ನೇರವಾಗಿದೆ ಸಜ್ಜನನ ದಾರಿ ಸುಗಮವಾಗಿದೆ ನಿನ್ನಿಂದ ಆತನ ಹಾದಿ.


ಇಸ್ರಯೇಲಿನ ಅಹಂಕಾರವೇ ಅದಕ್ಕೆ ವಿರುದ್ಧ ಸಾಕ್ಷಿ ನುಡಿಯುತ್ತದೆ. ಇಸ್ರಯೇಲ್ ಮತ್ತು ಎಫ್ರಯಿಮ್ ತಮ್ಮ ದುರ್ಮಾರ್ಗದಲ್ಲಿ ಮುಗ್ಗರಿಸಿ ಬೀಳುತ್ತವೆ. ಜುದೇಯವೂ ಅದರಂತೆಯೇ ಬೀಳಲಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು