Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 11:20 - ಕನ್ನಡ ಸತ್ಯವೇದವು C.L. Bible (BSI)

20 ವಕ್ರಹೃದಯರು ಸರ್ವೇಶ್ವರನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ಕೃಪೆಗೆ ಪಾತ್ರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ವಕ್ರಹೃದಯರು ಯೆಹೋವನಿಗೆ ಅಸಹ್ಯರು, ಸನ್ಮಾರ್ಗಿಗಳು ಆತನ ದಯೆಗೆ ಪಾತ್ರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ವಕ್ರಹೃದಯರು ಯೆಹೋವನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ದಯೆಗೆ ಆಸ್ಪದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಕೆಡುಕರು ಯೆಹೋವನಿಗೆ ಅಸಹ್ಯರು. ಆದರೆ ಸನ್ಮಾರ್ಗಿಗಳು ಆತನ ಮೆಚ್ಚಿಕೆಗೆ ಪಾತ್ರರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ವಕ್ರ ಹೃದಯವುಳ್ಳವರು ಯೆಹೋವ ದೇವರಿಗೆ ಅಸಹ್ಯವಾದವರು, ಆದರೆ, ಸನ್ಮಾರ್ಗದಲ್ಲಿ ಯಥಾರ್ಥವಾಗಿ ಇರುವವರಲ್ಲಿ ಅವರು ಆನಂದಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 11:20
20 ತಿಳಿವುಗಳ ಹೋಲಿಕೆ  

ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು I ದೋಷರಹಿತ ಮಾರ್ಗದಲಿ ನಡೆವವರು ಧನ್ಯರು II


ನನ್ನ ದೇವರೇ, ನೀವು ಹೃದಯವನ್ನು ಪರೀಕ್ಷಿಸುವವರು ಹಾಗೂ ಯಥಾರ್ಥಚಿತ್ತರನ್ನು ಮೆಚ್ಚುವವರು ಎಂಬುವುದನ್ನು ನಾನು ಬಲ್ಲೆ. ನಾನಿದನ್ನೆಲ್ಲಾ ಅರ್ಪಿಸಿರುವುದು ಶುದ್ಧಮನಸ್ಸಿನಿಂದಲೇ, ಸ್ವಂತ ಇಷ್ಟದಿಂದಲೇ. ಇಲ್ಲಿ ಕೂಡಿರುವ ನಿಮ್ಮ ಪ್ರಜೆಗಳೂ ಸ್ವಂತ ಇಷ್ಟದಿಂದಲೇ ನಿಮಗೆ ಕಾಣಿಕೆಗಳನ್ನು ಅರ್ಪಿಸಿದ್ದಾರೆ ಎಂದು ನೋಡಿ ಸಂತೋಷಿಸುತ್ತೇನೆ.


ದುಷ್ಟನ ಮುಖದಲ್ಲಿ ಹಟಭಾವನೆ; ಸಜ್ಜನನ ನಡತೆಯಲ್ಲಿ ಸದೃಢತೆ.


ಅವನ ಮನದಲ್ಲಿರುವುದು ಮೂರ್ಖತನ; ಅವನು ಸತತ ಕಲ್ಪಿಸುವುದು ಕೆಡುಕುತನ. ಅವನು ಬಿತ್ತನೆ ಮಾಡುವುದು ಕಾಳಗ, ಕದನ.


ಸಜ್ಜನರ ರಾಜಮಾರ್ಗ ಹಾನಿಗೆ ದೂರ; ಸನ್ನಡತೆಯುಳ್ಳವ ಪ್ರಾಣಸಂರಕ್ಷಕ.


ದುರುಳರು ಅರ್ಪಿಸುವ ಬಲಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರು ಮಾಡುವ ಪ್ರಾರ್ಥನೆ ಆತನಿಗೆ ಪ್ರಿಯ.


ನೀತಿ ಕಾಪಾಡುವುದು ನಿರ್ದೋಷಿಯನ್ನು; ಅನೀತಿ ಕೆಡವಿಬಿಡುವುದು ಪಾಪಿಯನ್ನು.


ಮಿಥ್ಯವಾದಿಗಳು ಸರ್ವೇಶ್ವರನಿಗೆ ಹೇಸು; ಸತ್ಯವಾದಿಗಳು ಆತನಿಗೆ ಲೇಸು.


ಕುಚೋದ್ಯಗಾರರನ್ನು ಶಿಕ್ಷಿಸುವವನು ತನ್ನನ್ನೆ ಅಪಮಾನಕ್ಕೆ ಗುರಿಮಾಡಿಕೊಳ್ಳುತ್ತಾನೆ. ದುಷ್ಟನನ್ನು ಗದರಿಸುವವನು ತನಗೇ ಕಳಂಕ ತಂದುಕೊಳ್ಳುತ್ತಾನೆ.


ದೈವಭಯದಿಂದ ಹುಟ್ಟುತ್ತದೆ ಪಾಪದ್ವೇಷ; ಗರ್ವ, ಅಹಂಕಾರ, ದುರಾಚಾರ, ಕಪಟ ಭಾಷಣ ನನಗೆ ಅಸಹ್ಯ.


ಭಜಿಸುವರು ಸಜ್ಜನರು ನಿನ್ನಾ ಸಿರಿನಾಮವನು I ಬಾಳ್ವರು ಸುಮನಸ್ಕರು ಬಿಡದೆ ನಿನ್ನ ಸನ್ನಿಧಿಯನು II


ಅಂತರಂಗ ಶುದ್ಧಿಯನು ನೀ ಬಯಸುತಿ I ಅಂತರ್ಯ ಜ್ಞಾನವನು ಉದಯಗೊಳಿಸುತಿ II


ಸತ್ಯಸ್ವರೂಪನಾದ ಪ್ರಭು ಸತ್ಯ ಪ್ರಿಯನು I ಸತ್ಪುರುಷನು ಸೇರುವನು ಆತನ ಸನ್ನಿಧಿಯನು II


ನನ್ನ ಬಿಟ್ಟು ತೊಲಗಲಿ ಮೂರ್ಖತನ I ನನಗೆ ಹತ್ತದೆಯಿರಲಿ ಕೆಟ್ಟತನ II


ವಕ್ರಬುದ್ಧಿಯವನು ಸರ್ವೇಶ್ವರನಿಗೆ ಅಸಹ್ಯನು, ಸತ್ಯಸಂಧರು ಆತನಿಗೆ ಪ್ರೀತಿಪಾತ್ರರು.


ದುಷ್ಟನಿಗೆ ದಂಡನೆ ಕಟ್ಟಿಟ್ಟ ಬುತ್ತಿ; ಶಿಷ್ಟ ಸಂತಾನಕ್ಕೆ ಸಿಗುವುದು ಮುಕ್ತಿ.


ಪಾಪಪರಿಹಾರವನ್ನು ಪರಿಹಾಸ್ಯಮಾಡುತ್ತಾರೆ ಮೂರ್ಖರು; ಪಾಪಕ್ಷಮೆಯನ್ನು ಕೋರುತ್ತಾರೆ ಸತ್ಪುರುಷರು.


ದುರುಳರ ಕುಯುಕ್ತಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರ ಸುಸೂಕ್ತಿ ಆತನಿಗೆ ಪ್ರಿಯ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು