Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 10:28 - ಕನ್ನಡ ಸತ್ಯವೇದವು C.L. Bible (BSI)

28 ಸಜ್ಜನರ ನಂಬಿಕೆ ಆನಂದಕರ; ದುರ್ಜನರ ನಿರೀಕ್ಷೆ ವಿನಾಶಕರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಶಿಷ್ಟನ ನಂಬಿಕೆಗೆ ಆನಂದವು ಫಲ, ದುಷ್ಟನ ನಿರೀಕ್ಷೆ ನಿಷ್ಫಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಶಿಷ್ಟನ ನಂಬಿಕೆಗೆ ಆನಂದವು ಫಲ; ದುಷ್ಟನ ನಿರೀಕ್ಷೆ ನಿಷ್ಫಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಒಳ್ಳೆಯವರ ನಿರೀಕ್ಷೆಗೆ ಸಂತೋಷವೇ ಫಲಿತಾಂಶ. ಕೆಟ್ಟವರ ನಿರೀಕ್ಷೆಗೆ ಶೂನ್ಯವೇ ಫಲಿತಾಂಶ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ನೀತಿವಂತರ ನಿರೀಕ್ಷೆಯು ಆನಂದಕರವಾಗಿರುವುದು; ಆದರೆ ದುಷ್ಟರ ನಿರೀಕ್ಷೆಯು ನಾಶವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 10:28
15 ತಿಳಿವುಗಳ ಹೋಲಿಕೆ  

ಭರವಸೆಯ ಮೂಲವಾಗಿರುವ ದೇವರಲ್ಲಿರುವ ನಮ್ಮ ವಿಶ್ವಾಸದ ಮೂಲಕ ಲಭಿಸುವ ಆನಂದವನ್ನೂ ಶಾಂತಿಸಮಾಧಾನವನ್ನೂ ನಿಮಗೆ ಸಮೃದ್ಧಿಯಾಗಿ ದಯಪಾಲಿಸಲಿ. ನಿಮ್ಮ ಭರವಸೆ ಪವಿತ್ರಾತ್ಮ ಅವರ ಪ್ರಭಾವದಿಂದ ಪ್ರವರ್ಧಿಸುವಂತಾಗಲಿ.


ದೇವರನ್ನು ಮರೆಯುವವರೆಲ್ಲರ ಗತಿ ಇದುವೆ ಭಕ್ತಿಹೀನನ ನಿರೀಕ್ಷೆ ನಿರರ್ಥಕವೆ.


ದುರುಳನೊಂದಿಗೆ ಸಾಯುವುದು ಅವನ ನಿರೀಕ್ಷೆ; ಅಳಿವುದು ಸಾಮರ್ಥ್ಯದ ಮೇಲಿಟ್ಟ ಅವನ ನಂಬಿಕೆ.


ನಮ್ಮನ್ನು ಪ್ರೀತಿಸಿ ನಿತ್ಯಾದರಣೆಯನ್ನೂ ಉತ್ತಮ ನಿರೀಕ್ಷೆಯನ್ನೂ ಅನುಗ್ರಹವಾಗಿ ಕೊಟ್ಟಿರುವ ನಮ್ಮ ಪ್ರಭುವಾದ ಯೇಸುಕ್ರಿಸ್ತರು ಹಾಗೂ ಪಿತನಾದ ದೇವರು ನಿಮ್ಮ ಹೃನ್ಮನಗಳನ್ನು ಉತ್ತೇಜನಗೊಳಿಸಲಿ.


ನಂಬಿಕೆ ನಿರೀಕ್ಷೆಯನ್ನು ಹೊಂದಿರುವ ನೀವು ಉಲ್ಲಾಸದಿಂದಿರಿ. ಸಂಕಟ ಬಂದಾಗ ಸಹನೆಯಿಂದಿರಿ. ಬೇಸರಗೊಳ್ಳದೆ ಪ್ರಾರ್ಥನೆಮಾಡಿರಿ.


ವಿಶ್ವಾಸದ ಮೂಲಕ ನಾವು ದೈವಾನುಗ್ರಹವನ್ನು ಸವಿಯುವಂತೆ ಯೇಸುಕ್ರಿಸ್ತರು ದಾರಿ ತೋರಿಸಿದರು. ನಾವೀಗ ನೆಲೆಗೊಂಡಿರುವುದು ಆ ಅನುಗ್ರಹದಲ್ಲಿಯೇ. ಆದ್ದರಿಂದಲೇ, ದೇವರ ಮಹಿಮೆಯಲ್ಲಿ ನಾವೂ ಪಾಲುಗೊಳ್ಳುತ್ತೇವೆಂಬ ಭರವಸೆಯಿಂದ ಹೆಮ್ಮೆಪಡುತ್ತೇವೆ.


ಆಪತ್ಕಾಲ ಬಂದಾಗ ದುಷ್ಟನು ಹಾಳಾಗುತ್ತಾನೆ; ಮರಣವೇಳೆಯಲ್ಲೂ ನೀತಿವಂತ ನಂಬಿಕೆಯಿಂದಿರುತ್ತಾನೆ.


ಇದನು ಕಂಡು ಕೆರಳುವನಾ ದುರುಳನು I ಹೊಂದುವನು ಈ ಪರಿ ಆಶಾಭಂಗವನು I ಹಲ್ಲು ಕಡಿಯುತ ಅವನು ಹಾಳಾಗುವನು II


ದುರ್ಜನರು ನಿರಾಶೆಯಿಂದ ಕಂಗೆಡುವರು ಪ್ರಾಣಬಿಡಬೇಕೆಂಬುದೇ ಅವರ ಆಶೆಯಾಗಿರುವುದು.”


ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ I ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ II


ಸಜ್ಜನರ ಕೋರಿಕೆ ಕಲ್ಯಾಣ ಸಾಧಕ; ದುರ್ಜನರ ನಿರೀಕ್ಷೆ ಕೋಪಾಗ್ನಿ ಸಾಧಕ.


ಗಾಯನ ಮಾಡಿರಿ ದೇವನಿಗೆ, ಕೊಂಡಾಡಿರಿ ಆತನ ನಾಮವನು I ಮೇಘಾರೂಢನಾಗಿ ಬರುವವಗೆ ಸಿದ್ಧಮಾಡಿರಿ ರಾಜಮಾರ್ಗವನು I “ಪ್ರಭು” ಆತನ ನಾಮಧೇಯ, ಹರ್ಷದಿ ಸೇರಿರಿ ಆತನ ಸನ್ನಿಧಿಯನು II


ಕೆಟ್ಟವನು ತನ್ನ ಪಾಪಪಾಶದಲ್ಲೆ ಸಿಕ್ಕಿಬೀಳುವನು; ಒಳ್ಳೆಯವನು ಉಲ್ಲಾಸದಿಂದ ಹಾಡಿ ಹರ್ಷಿಸುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು