Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 9:8 - ಕನ್ನಡ ಸತ್ಯವೇದವು C.L. Bible (BSI)

8 ಶತ್ರುಗಳು ಅತ್ತ ಕಾಲಿಡದಂತೆ ನನ್ನ ಆಲಯದ ಸುತ್ತಲು ಪಾಳೆಯಹಾಕಿ ಕಾವಲಿರುವೆನು. ಯಾವ ಬಾಧಕನೂ ನನ್ನ ಜನರ ಮೇಲೆ ಧಾಳಿಮಾಡದಂತೆ ನಾನೇ ಕಣ್ಣಿಟ್ಟು ನೋಡಿಕೊಳ್ಳುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಯಾರೂ ಹಾದುಹೋಗದಂತೆ ನನ್ನ ಆಲಯದ ಸುತ್ತಲು ಪಾಳೆಯನ್ನು ಹಾಕಿ ಕಾವಲಾಗಿರುವೆನು; ಇನ್ನು ಮುಂದೆ ಯಾವ ಬಾಧಕನೂ ನನ್ನ ಜನರ ಮೇಲೆ ದಾಳಿಮಾಡುವುದಿಲ್ಲ; ಏಕೆಂದರೆ ಈಗ ನಾನು ಕಣ್ಣಿಟ್ಟು ನೋಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಯಾರೂ ಹಾದುಹೋಗಿ ಬಾರದಂತೆ ನನ್ನ ಆಲಯದ ಸುತ್ತಲು ಪಾಳೆಯಹಾಕಿ ಕಾವಲಾಗಿರುವೆನು; ಇನ್ನು ಮುಂದೆ ಯಾವ ಬಾಧಕನೂ ನನ್ನ ಜನರ ಮೇಲೆ ಬೀಳನು; ಏಕಂದರೆ ಈಗ ನಾನು ಕಣ್ಣಿಟ್ಟು ನೋಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಶತ್ರುಸೈನ್ಯವು ಅದರೊಳಗಿಂದ ದಾಟಿಹೋಗಲು ನಾನು ಬಿಡೆನು. ಇನ್ನು ಮುಂದೆ ನನ್ನ ಜನರಿಗೆ ಅವರು ಹಾನಿಮಾಡದಂತೆ ಮಾಡುವೆನು. ಕಳೆದುಹೋದ ಸಮಯಗಳಲ್ಲಿ ಅವರೆಷ್ಟು ಸಂಕಟ ಅನುಭವಿಸಿದರೆಂದು ನನ್ನ ಸ್ವಂತ ಕಣ್ಣುಗಳಿಂದ ನೋಡಿರುತ್ತೇನೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಹೋಗುತ್ತಾ ಬರುತ್ತಾ ಇರುವವನ ನಿಮಿತ್ತವೂ, ಸೈನ್ಯದ ನಿಮಿತ್ತವೂ ನನ್ನ ಆಲಯದ ಹತ್ತಿರ ಪಾಳೆಯ ಮಾಡುತ್ತೇನೆ. ಇನ್ನು ಮೇಲೆ ಉಪದ್ರವ ಕೊಡುವವನು, ಅವರ ಮೇಲೆ ಹಾದು ಹೋಗುವುದಿಲ್ಲ. ಏಕೆಂದರೆ ಈಗ ನನ್ನ ಕಣ್ಣುಗಳಿಂದ ನೋಡುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 9:8
39 ತಿಳಿವುಗಳ ಹೋಲಿಕೆ  

ನ್ಯಾಯನೀತಿ ನಿನಗಾಧಾರ; ದೂರವಿರುವುದು ಹಿಂಸಾಚಾರ. ಭಯಭೀತಿಗೆ ನೀ ದೂರ, ಅವು ಬಾರವು ನಿನ್ನ ಹತ್ತಿರ.


ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು ನಿನ್ನ ದೇಶದಲಿ ನಾಶವಿನಾಶಗಳ ವಾರ್ತೆಯೇ ಕೇಳಿಬರದು ನಿನ್ನ ಪ್ರಾಂತ್ಯಗಳಲಿ. ಆಗ ಹೆಸರಿಡುವೆ ನಿನ್ನ ಪೌಳಿಗೋಡೆಗೆ ‘ದೈವಮುಕ್ತಿ’ ಎಂದು ನಿನ್ನೀ ಪುರದ್ವಾರಗಳಿಗೆ “ದೈವಸ್ತುತಿ’ ಎಂದು.


ಎಚ್ಚರಗೊಳ್ಳು, ಎಚ್ಚರಗೊಳ್ಳು ಓ ಸಿಯೋನೇ, ಶಕ್ತಿಶಾಲಿಯಾಗು ಪವಿತ್ರನಗರ ಜೆರುಸಲೇಮೆ. ಧರಿಸಿಕೊ ನಿನ್ನ ಚಂದದ ಉಡುಪನು ನಿನ್ನೊಳಗೆ ಪ್ರವೇಶಿಸರು ಇನ್ನು ಅಪವಿತ್ರರು, ಅನ್ಯಧರ್ಮೀಯರು.


ಅವರು ಬಂದು ಹಾಡುವರು ಸಿಯೋನ್ ಶಿಖರದಲ್ಲಿ ಬರುವರು ಪ್ರವಾಹ ಪ್ರವಾಹವಾಗಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕುರಿ, ಕುರಿಮರಿ, ಸರ್ವೇಶ್ವರನ ಈ ವರದಾನಗಳನ್ನು ಅನುಭವಿಸಲಿಕ್ಕಾಗಿ. ಹದವಾಗಿ ನೀರುಹಾಯಿಸಿದ ಉದ್ಯಾನವನದಂತೆ ಅವರ ಜೀವನ ಇನ್ನು ಅವರಿಗಿರದು ವ್ಯಸನ.


ಬೇರೂರಿಸುವೆನು ಅವರನು ಸ್ವಂತ ನಾಡಲಿ ಕೀಳರಾರೂ ಅವರನು ಅಲ್ಲಿಂದ ಮರಳಿ.” ಇದು ನಿನ್ನ ದೇವರಾದ ಸರ್ವೇಶ್ವರನ ನುಡಿ.


ಇನ್ನೆಂದಿಗೂ ಅವರಿಗೆ ವಿಮುಖನಾಗೆನು; ಇಸ್ರಯೇಲ್ ವಂಶದ ಮೇಲೆ ನನ್ನ ಆತ್ಮವನ್ನು ಸುರಿಸಿದ್ದೇನೆ; ಇದು ಸರ್ವೇಶ್ವರನಾದ ದೇವರ ನುಡಿ.”


ಅವಸರವಾಗಿ ನೀವು ಹೊರಡಬೇಕಿಲ್ಲ ನೆಗೆನೆಗೆದು ನೀವು ಓಡಬೇಕಿಲ್ಲ. ಹೋಗುವನು ಸರ್ವೇಶ್ವರ ನಿಮಗೆ ಮುಂಬಲವಾಗಿ, ನಿಮಗಿರುವನು ಇಸ್ರಯೇಲ್ ದೇವರು ಹಿಂಬಲವಾಗಿ.


ಹಕ್ಕಿಗಳು ಹಾರಾಡುತ್ತಾ ತನ್ನ ಮರಿಗಳನ್ನು ಕಾಪಾಡುವಂತೆ, ಸೇನಾಧೀಶ್ವರ ಸರ್ವೇಶ್ವರನಾದ ನಾನು ಜೆರುಸಲೇಮನ್ನು ಕಾಪಾಡುವೆನು. ಅದನ್ನು ಸಂರಕ್ಷಿಸಿ ಕಾಯುವೆನು, ಅಪಾಯದಿಂದ ತಪ್ಪಿಸುವೆನು.”


ದೀನದಲಿತರನಾತ ಉದ್ಧರಿಸಲಿ I ಬಡಬಗ್ಗರಿಗೆ ನ್ಯಾಯ ದೊರಕಿಸಲಿ I ಪ್ರಜಾಹಿಂಸಕರನು ಸದೆಬಡಿಯಲಿ II


ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು I ಕಾಯುವನು ಪ್ರಭುವಿನ ದೂತನೆ ಬಂದಿಳಿದು II


ಬಹುಶಃ ಸರ್ವೇಶ್ವರ ನನ್ನ ಕಷ್ಟವನ್ನು ನೋಡಿ ಈ ದಿನ ಶಾಪಕ್ಕೆ ಬದಲಾಗಿ ನನಗೆ ಶುಭವನ್ನು ಅನುಗ್ರಹಿಸಿಯಾರು,” ಎಂದು ಹೇಳಿದನು.


ಈಗ ಕೇಳು; “ಇಸ್ರಯೇಲರ ಮೊರೆ ನನಗೆ ಮುಟ್ಟಿದೆ. ಈಜಿಪ್ಟಿನವರು ಅವರಿಗೆ ಕೊಡುತ್ತಿರುವ ಉಪದ್ರವವನ್ನು ನಾನು ನೋಡಿದ್ದೇನೆ.


ಅವರು ದೇಶದಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ದೇವರ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಸ್ವರ್ಗದಿಂದ ಬೆಂಕಿ ಇಳಿದುಬಂದು ಅವರನ್ನು ದಹಿಸಿಬಿಟ್ಟಿತು.


ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆ ನನಗೆ ತಿಳಿದೇ ಇದೆ. ಅವರ ಗೋಳನ್ನು ಕೇಳಿ ಅವರನ್ನು ಬಿಡುಗಡೆಮಾಡಲು ಬಂದಿರುವೆನು. ಬಾ, ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುವೆನು,’ ಎಂದರು.


ಅದರಲ್ಲಿ ಜನರು ಸುರಕ್ಷಿತವಾಗಿ ವಾಸಿಸುವರು. ಇನ್ನು ಶಾಪಕ್ಕೆ ತುತ್ತಾಗದೆ ಜನರು ನೆಮ್ಮದಿಯಾಗಿ ನೆಲೆಗೊಂಡಿರುವರು.


ಅಂದು, ಸರ್ವೇಶ್ವರ ಜೆರುಸಲೇಮಿನ ನಿವಾಸಿಗಳನ್ನು ಕೋಟೆಯಂತೆ ಕಾಪಾಡುವರು. ಈ ಕಾರಣ, ಅವರಲ್ಲಿ ದುರ್ಬಲನು ದಾವೀದನಂತೆ ಬಲಾಢ್ಯನಾಗುವನು. ದಾವೀದನವಂಶ ದೇವದೂತರಂತೆ, ಹೌದು, ದೇವರಂತೆ, ಅವರಿಗೆ ಮುಂದಾಳಾಗುವುದು.


ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಬಂದು ಈಜಿಪ್ಟ್ ದೇಶದ ಮೇಲೆ ಮುತ್ತಿಗೆ ಹಾಕುವನು ಎಂಬುದಾಗಿ ಸರ್ವೇಶ್ವರನಿಂದ ಪ್ರವಾದಿ ಯೆರೆಮೀಯನಿಗೆ ಕೇಳಿ ಬಂದ ವಾಣಿ:


ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಈಜಿಪ್ಟಿನ ಅರಸನಾದ ಫರೋಹ ನೆಕೋವಿನ ಸೈನ್ಯವು ಯೂಫ್ರೆಟಿಸ್ ನದಿಯ ಬಳಿ ಕರ್ಕೆಮೀಷಿನಲ್ಲಿ ಇರುವಾಗ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಆ ಸೈನ್ಯದ ಮೇಲೆ ದಾಳಿಮಾಡಿದ ವಿಷಯ:


ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು : ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಾಕಾರ.


ಸಿಯೋನ್ ಪರ್ವತದ ಮೇಲೆಲ್ಲ, ಅಲ್ಲಿನ ಸಭಾಕೂಟಗಳ ಮೇಲೆಲ್ಲ ಹಗಲಲ್ಲಿ ಧೂಮಮೇಘವನ್ನು, ರಾತ್ರಿಯಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ದೇವರ ಮಹಿಮೆ ಛತ್ರಿಯಂತೆಯೂ ಚಪ್ಪರದಂತೆಯೂ ಎಲ್ಲರನ್ನು ಆವರಿಸುವುದು.


ಯೆಹೋಯಾಕೀಮನು ಅವನಿಗೆ ಅಧೀನನಾಗಿ ಮೂರು ವರ್ಷಗಳಾದ ನಂತರ ಅವನಿಗೆ ವಿರುದ್ಧ ದಂಗೆಯೆದ್ದನು.


ಅವನ ಕಾಲದಲ್ಲಿ ಈಜಿಪ್ಟಿನ ಅರಸ ಫರೋಹ ನೆಕೋ ಎಂಬವನು ಅಸ್ಸೀರಿಯದ ಅರಸನಿಗೆ ವಿರುದ್ಧ ಯುದ್ಧಮಾಡುವುದಕ್ಕಾಗಿ ಯೂಫ್ರಟಿಸ್ ನದಿಯ ಬಳಿಗೆ ಹೋದನು. ಅವನು ಅಲ್ಲಿಗೆ ಹೋಗುತ್ತಿರುವಾಗ ಯೋಷೀಯನು ಮೆಗಿದ್ದೋವಿನಲ್ಲಿ ಅವನನ್ನು ಎದುರುಗೊಂಡು, ಕೂಡಲೆ ಅವನಿಂದ ಹತನಾದನು.


ಆಗ ಸರ್ವೇಶ್ವರ, “ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಬಿಟ್ಟೀ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ ಅವರು ಇಟ್ಟ ಮೊರೆ ನನಗೆ ಕೇಳಿಸಿದೆ. ಅವರ ಕಷ್ಟದುಃಖವನ್ನೆಲ್ಲಾ ನಾನು ಬಲ್ಲೆ.


ಅವರು ಕಚ್ಚುವ ನಿಷಿದ್ಧ ಪದಾರ್ಥಗಳನ್ನು ಅವರ ಹಲ್ಲುಗಳಿಂದ ಕಿತ್ತುಹಾಕುವೆನು. ಅವರು ಸಹ ಇಸ್ರಯೇಲಿನ ದೇವರಿಗೆ ಮೀಸಲಾದ ಜನರಾಗುವರು; ಯೆಹೂದ್ಯ ಕುಲಗಳಲ್ಲಿ ಒಂದಾಗುವರು. ಎಕ್ರೋಮಿನವರು ಯೆಬೂಸಿಯರಂತೆ ಆಗುವರು.


ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು,’ ಎಂದಿದ್ದಾರೆ".


ಆಕಸ್ಮಿಕ ಅಪಾಯಕ್ಕೆ ನೀನು ಅಂಜಲಾರೆ, ದುರುಳರಿಗೆ ಬಂದೊದಗುವ ನಾಶಕ್ಕೆ ಹೆದರಲಾರೆ.


ಆಗ ಅವರ ಕುದುರೆಗಳೆಲ್ಲ ತಬ್ಬಿಬ್ಬಾಗುವಂತೆ ಮಾಡುವೆನು. ರಾಹುತರನ್ನು ದಿಗ್ಭ್ರಮೆಗೊಳಿಸುವೆನು. ಜುದೇಯ ಮನೆತನವನ್ನು ಕಟಾಕ್ಷಿಸಿ, ಇತರ ರಾಷ್ಟ್ರಗಳ ಕುದುರೆಗಳನ್ನೆಲ್ಲಾ ಕುರುಡಾಗಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು