Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 7:10 - ಕನ್ನಡ ಸತ್ಯವೇದವು C.L. Bible (BSI)

10 ಒಬ್ಬರಿಗೊಬ್ಬರು ಪ್ರೀತಿ ಕರುಣೆಯನ್ನು ತೋರಿಸಿರಿ. ವಿಧವೆಯರು, ಅನಾಥರು, ವಿದೇಶಿಯರು, ಬಡವರು, ಇವರಾರನ್ನೂ ಶೋಷಣೆಮಾಡಬೇಡಿ. ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಒಬ್ಬರಿಗೊಬ್ಬರು ಪ್ರೀತಿ, ಕರುಣೆಗಳನ್ನು ತೋರಿಸಿರಿ; ವಿಧವೆ, ಅನಾಥ, ವಿದೇಶಿ, ದರಿದ್ರರಿಗೂ ಅನ್ಯಾಯಮಾಡಬೇಡಿರಿ; ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಒಬ್ಬರಿಗೊಬ್ಬರು ಪ್ರೀತಿ ಕರುಣೆಗಳನ್ನು ತೋರಿಸಿರಿ; ವಿಧವೆ, ಅನಾಥ, ವಿದೇಶಿ, ದರಿದ್ರ, ಇವರಾರಿಗೂ ಅನ್ಯಾಯ ಮಾಡಬೇಡಿರಿ; ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ವಿಧವೆಯರಿಗೂ ಅನಾಥರಿಗೂ ಹಾನಿಮಾಡಬೇಡಿರಿ. ಅಪರಿಚಿತರಿಗೂ ಬಡವರಿಗೂ ಕೇಡುಮಾಡಬೇಡಿ. ಒಬ್ಬರಿಗೊಬ್ಬರು ಕೇಡುಮಾಡಲು ಯೋಚಿಸಲೂಬೇಡಿ!’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ವಿಧವೆಗೂ, ದಿಕ್ಕಿಲ್ಲದವನಿಗೂ, ಅನ್ಯನಿಗೂ, ಬಡವನಿಗೂ ಹಿಂಸಾಚಾರ ಮಾಡಬೇಡಿರಿ; ಯಾರೂ ತನ್ನ ಹೃದಯದಲ್ಲಿ ತನ್ನ ಸಹೋದರನ ಮೇಲೆ ಕೆಟ್ಟದ್ದನ್ನು ಕಲ್ಪಿಸದೆ ಇರಲಿ,’ ” ಎಂಬುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 7:10
38 ತಿಳಿವುಗಳ ಹೋಲಿಕೆ  

ಕೊಬ್ಬಿ ಮೆರೆಯುತ್ತಿದ್ದಾರೆ. ಕೆಟ್ಟ ಕಾರ್ಯಗಳಲ್ಲಂತೂ ನಿಸ್ಸೀಮರಾಗಿದ್ದಾರೆ. ಅನಾಥರ ಏಳಿಗೆಗಾಗಿ ಅವರ ಪಕ್ಷ ಹಿಡಿದು ವಾದಿಸುವುದಿಲ್ಲ. ದಿಕ್ಕಿಲ್ಲದವರಿಗೆ ನ್ಯಾಯ ದೊರಕಿಸುವುದಿಲ್ಲ.


ತನ್ನ ಸಹೋದರರನ್ನು ದ್ವೇಷಿಸುವವನು ಕೊಲೆಗಾರನೇ ಹೌದು. ಯಾವ ಕೊಲೆಗಾರನಲ್ಲೂ ನಿತ್ಯಜೀವ ಇರದೆಂದು ನೀವು ಬಲ್ಲಿರಿ.


ನಿಮ್ಮ ಹೊಲಗಳಲ್ಲಿ ದುಡಿದ ಆಳುಗಳ ಕೂಲಿಯನ್ನು ಮೋಸದಿಂದ ಹಿಡಿದಿಟ್ಟುಕೊಂಡಿದ್ದೀರಿ. ನೀವು ಕೊಡದ ಕೂಲಿಯೇ ನಿಮಗೆ ವಿರುದ್ಧವಾಗಿ ಕೂಗಿಕೊಳ್ಳುತ್ತಿದೆ. ಕೂಲಿಯಾಳುಗಳ ಗೋಳಾಟ ಸ್ವರ್ಗಸೇನಾಧೀಶ್ವರನಾದ ಪ್ರಭುವಿನ ಕಿವಿಗೂ ಬಿದ್ದಿದೆ.


ನಿನ್ನ ಅಧಿಪತಿಗಳೇ ದ್ರೋಹಿಗಳಾಗಿದ್ದಾರೆ, ಕಳ್ಳರ ಗೆಳೆಯರಾಗಿದ್ದಾರೆ. ಎಲ್ಲರೂ ಲಂಚಕೋರರಾಗಿದ್ದಾರೆ. ಕಪ್ಪಕಾಣಿಕೆಗಳಿಗೆ ಕೈಯೊಡ್ಡುತ್ತಾರೆ. ಆದರೆ ಅನಾಥರ ಪರವಾಗಿ ವಾದಿಸುವುದಿಲ್ಲ. ವಿಧವೆಯರ ವ್ಯಾಜ್ಯವನ್ನು ತೀರಿಸುವುದಿಲ್ಲ.


ದೀನದಲಿತರನಾತ ಉದ್ಧರಿಸಲಿ I ಬಡಬಗ್ಗರಿಗೆ ನ್ಯಾಯ ದೊರಕಿಸಲಿ I ಪ್ರಜಾಹಿಂಸಕರನು ಸದೆಬಡಿಯಲಿ II


ತಂತ್ರೋಪಾಯಗಳ ಕಲ್ಪಿಸಿದರೂ ನಡೆಯದು I ಕೇಡನು ನಿನಗೆ ಬಗೆದರೂ ಅದು ಕೈಗೂಡದು II


ಕಳ್ಳರು, ಲೋಭಿಗಳು, ಕುಡುಕರು, ಪರನಿಂದಕರು, ಸುಲಿಗೆಗಾರರು - ಇವರಾರೂ ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲ.


“ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಸ್ವರ್ಗಸಾಮ್ರಾಜ್ಯದ ದ್ವಾರಗಳನ್ನು ಮಾನವರಿಗೆ ಮುಚ್ಚಿದ್ದೀರಿ. ನೀವೂ ಪ್ರವೇಶಿಸುವುದಿಲ್ಲ, ಒಳಕ್ಕೆ ಪ್ರವೇಶಿಸಲು ಯತ್ನಿಸುವವರನ್ನೂ ಬಿಡುವುದಿಲ್ಲ.


“ಮಾಟಗಾರರಿಗೆ, ಸೂಳೆಗಾರರಿಗೆ, ಸುಳ್ಳು ಹೇಳುವವರಿಗೆ, ಕೂಲಿಹಿಡಿದು ಕಾರ್ಮಿಕರನ್ನು ಮೋಸಗೊಳಿಸುವವರಿಗೆ, ವಿಧವೆಯರನ್ನು ಮತ್ತು ಅನಾಥರನ್ನು ಬಾಧಿಸುವವರಿಗೆ, ಪ್ರವಾಸಿಗಳಿಗೆ ಅನ್ಯಾಯ ಮಾಡುವವರಿಗೆ - ಅಂತೂ ನನಗಂಜದ ಎಲ್ಲರಿಗೆ, ಬೇಗನೆ ನ್ಯಾಯತೀರಿಸಿ, ದಂಡನೆ ವಿಧಿಸಲು ನಾನು ಬರುವೆನು,” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.


ನಿಮ್ಮಲ್ಲಿ ಯಾರೂ ನೆರೆಯವನಿಗೆ ಕೇಡು ಬಗೆಯದಿರಲಿ. ಸುಳ್ಳುಸಾಕ್ಷ್ಯಕ್ಕೆ ಎಂದೂ ಸಂತೋಷಿಸಬೇಡಿ. ಇದೆಲ್ಲ ನನಗೆ ಅಸಹ್ಯ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.


ಸಮಾರ್ಯದ ಗುಡ್ಡಗಳ ಮೇಲೆ ಮೇದು, ಬಾಷಾನಿನ ಕೊಬ್ಬಿನ ಕಾಮಧೇನುಗಳಂತಿರುವ ಮಹಿಳೆಯರೇ, ಕೇಳಿ: ಬಡವರನ್ನು ಹಿಂಸಿಸಿ, ದಿಕ್ಕಿಲ್ಲದವರನ್ನು ಶೋಷಿಸಿ, ನಿಮ್ಮ ಪತಿರಾಯರಿಗೆ, “ಮದ್ಯ ತರಿಸಿರಿ, ಕುಡಿಯೋಣ” ಎಂದು ಹೇಳುವವರೇ, ಇದನ್ನು ಕೇಳಿ:


ಜನಸಾಮಾನ್ಯರೂ ಹಿಂಸಿಸಿ ಸೂರೆಮಾಡಿದ್ದಾರೆ, ದೀನದರಿದ್ರರನ್ನು ಬಾಧಿಸಿದ್ದಾರೆ, ವಿದೇಶಿಗಳನ್ನು ಅನ್ಯಾಯವಾಗಿ ನಸುಕಿಬಿಟ್ಟಿದ್ದಾರೆ.


“ನಿನ್ನವರು ರಕ್ತ ಸುರಿಸುವುದಕ್ಕೆ ಲಂಚಪಡೆದಿದ್ದಾರೆ; ನಿನ್ನವರು ಸಾಲಕ್ಕೆ ಬಡ್ಡಿ ತೆಗೆದುಕೊಂಡು, ಲಾಭಕ್ಕೆ ಹಣಕೊಟ್ಟು ತಮ್ಮ ನೆರೆಯವರನ್ನು ಬಾಧಿಸಿ, ಸುಲಿಗೆಮಾಡಿ, ನನ್ನನ್ನು ಮರೆತೇಬಿಟ್ಟಿದ್ದಾರೆ; ಇದು ಸರ್ವೇಶ್ವರನಾದ ದೇವರ ನುಡಿ.


ನಿನ್ನವರು ತಾಯಿತಂದೆಗಳನ್ನು ತುಚ್ಛೀಕರಿಸಿದ್ದಾರೆ, ನಿನ್ನವರು ವಿದೇಶಿಯರನ್ನು ಬಾದಿಸಿದ್ದಾರೆ, ನಿನ್ನವರು ಅನಾಥರನ್ನೂ ವಿಧವೆಯರನ್ನೂ ಹಿಂಸಿಸಿದ್ದಾರೆ.


ಆಗ ಜನರು, “ಬನ್ನಿ, ಈ ಯೆರೆಮೀಯನ ವಿರುದ್ಧ ಒಳಸಂಚುಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ,” ಎಂದುಕೊಂಡರು.


ಕೇಡನ್ನು ಬಗೆಯಬೇಡ ನೆರೆಯವನಿಗೆ, ಪಕ್ಕದಲ್ಲೆ ನಂಬಿಕೆಯಿಂದ ವಾಸಿಸುವವನಿಗೆ.


ಕೇಡನು ಕಲ್ಪಿಸುತ್ತಾರವರು ಮನದೊಳು I ಕಲಹವೆಬ್ಬಿಸುತ್ತಾರೆ ಯಾವಾಗಲೂ II


“ಅವರು, ‘ಪರದೇಶಿ, ತಾಯಿತಂದೆ ಇಲ್ಲದ ವ್ಯಕ್ತಿ, ಇವರ ವ್ಯಾಜ್ಯದಲ್ಲಿ ನ್ಯಾಯಬಿಟ್ಟು ತೀರ್ಪು ಹೇಳಿದವನು ಶಾಪಗ್ರಸ್ತ,’ ಎನ್ನಲು ಜನರೆಲ್ಲರು, ‘ಆಮೆನ್’, ಎನ್ನಬೇಕು


“ಪರದೇಶೀಯರನ್ನು ಪೀಡಿಸಬಾರದು. ನೀವು ಕೂಡ ಈಜಿಪ್ಟಿನಲ್ಲಿ ಪರದೇಶೀಯರಾಗಿದ್ದಿರಲ್ಲವೆ? ಅಂಥವರ ಮನೋವ್ಯಥೆ ನಿಮಗೆ ಗೊತ್ತೇ ಇದೆ.


ಆಲೋಚಿಸುತ್ತಿಹನು ಅಕ್ರಮವನು ಹಾಸಿಗೆಯಿಂದಲೆ I ಹೇಸನು ದುಷ್ಕೃತ್ಯಕ್ಕೆ, ಮುನ್ನುಗ್ಗುವನು ದುರ್ಮಾರ್ಗದಲೆ II


ಅನ್ಯರನ್ನಾಗಲಿ, ಅನಾಥರನ್ನಾಗಲಿ, ವಿಧವೆಯರನ್ನೇ ಆಗಲಿ ಶೋಷಣೆಗೆ ಗುರಿಪಡಿಸಬೇಡಿ! ಇಲ್ಲೆಲ್ಲೂ ನಿರ್ದೋಷಿಗಳ ರಕ್ತವನ್ನು ಸುರಿಸಬೇಡಿ. ನಿಮಗೆ ಹಾನಿಕರವಾದ ಅನ್ಯದೇವತಾ ಭಕ್ತಿಯನ್ನು ಬಿಟ್ಟುಬಿಡಿ.


‘ದಾವೀದ ಮನೆತನದವರೇ, ಸರ್ವೇಶ್ವರನ ಮಾತಿದು: ಮುಂಜಾನೆಯೆ ನ್ಯಾಯನೀತಿಯನ್ನು ಪರಿಪಾಲಿಸಿರಿ; ವಂಚಿತರನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ. ಇಲ್ಲವಾದರೆ ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ಕೋಪಾಗ್ನಿಯು ಜ್ವಾಲೆಯಂತೆ ಭುಗಿಲೇಳುವುದು, ಅದರ ಕಿಚ್ಚನ್ನು ಮುಚ್ಚಿಡಲು ಯಾರಿಂದಲೂ ಆಗದು.


ನೀನು ನಿನ್ನ ಅನಾಥರನ್ನು ನನಗೆ ಬಿಡು. ನಾನೇ ಅವರನ್ನು ನೋಡಿಕೊಳ್ಳುತ್ತೇನೆ. ನಿನ್ನ ವಿಧವೆಯರು ನನ್ನಲ್ಲಿ ಭರವಸೆ ಇಡಲಿ.”


ದೀನದಲಿತರನ್ನು ಹಿಂಸಿಸಿ, ಜನರ ಸೊತ್ತನ್ನು ಅಪಹರಿಸಿ, ಸಾಲಗಾರನ ಒತ್ತೆಯನ್ನು ಬಿಗಿಹಿಡಿದು, ವಿಗ್ರಹಗಳ ಕಡೆಗೆ ಕಣ್ಣೆತ್ತಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು