Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 6:12 - ಕನ್ನಡ ಸತ್ಯವೇದವು C.L. Bible (BSI)

12 ಮತ್ತು ಅವನಿಗೆ ಹೀಗೆಂದು ಹೇಳು: ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: ಮೊಳಕೆಯೆಂಬ ಪುರುಷನು ಮೂಡುವನು! ಆತನು ಇದ್ದ ಸ್ಥಳದಲ್ಲಿಯೇ ಅರಳಿ ಸರ್ವೇಶ್ವರನ ಆಲಯವನ್ನು ಕಟ್ಟಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅವನಿಗೆ ಹೀಗೆ ಹೇಳು, “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ಇಗೋ, ಮೊಳಿಕೆಯೆಂಬ ಪುರುಷನು! ಅವನು ಇದ್ದಲ್ಲಿಯೇ ವೃದ್ಧಿಯಾಗಿ, ಯೆಹೋವನ ಆಲಯವನ್ನು ಕಟ್ಟಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅವನಿಗೆ ಹೀಗೆ ಹೇಳು - ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಇಗೋ, ಮೊಳಿಕೆಯೆಂಬ ಪುರುಷನು! ಅವನು ಇದ್ದಲ್ಲಿಯೇ ವೃದ್ಧಿಯಾಗಿ ಯೆಹೋವನ ಆಲಯವನ್ನು ಕಟ್ಟಿಸುವನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ, “ಕೊಂಬೆ ಎಂಬ ಒಬ್ಬಾತನು ಇದ್ದಾನೆ. ಆತನು ಬೆಳೆದು ಬಲಿಷ್ಠನಾಗುವನು. ಆತನು ದೇವಾಲಯವನ್ನು ಕಟ್ಟುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಅವನಿಗೆ ಹೇಳತಕ್ಕದ್ದೇನೆಂದರೆ: ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ರೆಂಬೆ,’ ಎಂದು ಹೆಸರುಳ್ಳ ಮನುಷ್ಯನು, ತನ್ನ ಸ್ಥಳದೊಳಗಿಂದ ರೆಂಬೆಯನ್ನು ತೆಗೆದುಹಾಕಿ, ಯೆಹೋವ ದೇವರ ಆಲಯವನ್ನು ಕಟ್ಟುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 6:12
37 ತಿಳಿವುಗಳ ಹೋಲಿಕೆ  

ಪ್ರಧಾನ ಯಾಜಕನಾದ ಯೆಹೋಶುವನೇ, ನೀನೂ ಮತ್ತು ನಿನ್ನ ಜೊತೆಯಲ್ಲಿ ಉಪಸ್ಥಿತರಾದ ಸಹಯಾಜಕರೂ, ಕೇಳಲಿ: ನೀವು ಶುಭದಿನಗಳ ಮುಂಗುರುತು. ‘ಮೊಳಕೆ’ ಎಂಬಸೇವಕನೊಬ್ಬನು ಕಾಣಿಸಿಕೊಳ್ಳುವಂತೆ ಮಾಡುವೆನು.


ಆ ಕಾಲದಲ್ಲಿ, ಆ ದಿನಗಳಲ್ಲಿ, ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯೊಂದನ್ನು ಚಿಗುರಿಸುವೆನು. ಆತನು ನಾಡಿನಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು.


ಸರ್ವೇಶ್ವರ ಹೇಳುವುದನ್ನು ಗಮನಿಸಿರಿ: “ದಿನಗಳು ಬರಲಿವೆ; ಆಗ ನಾನು ದಾವೀದನೆಂಬ ಮೂಲದಿಂದ ಒಂದು ‘ಮೊಳಿಕೆ’ಯನ್ನು ಚಿಗುರಿಸುವೆನು. ಆತ ಸತ್ಪುರುಷ; ರಾಜನಾಗಿ ಆಳುವನು. ವಿವೇಕದಿಂದ ಕಾರ್ಯ ಸಾಧಿಸುವನು. ಧರೆಯಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು.


ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು.


ಆ ದಿನದಂದು ಸರ್ವೇಶ್ವರಸ್ವಾಮಿ ಅನುಗ್ರಹಿಸುವ ಗಿಡಮರಗಳು ಸುಂದರವಾಗಿರುವುವು, ಸಮೃದ್ಧಿಯಾಗಿ ಬೆಳೆದಿರುವುವು. ಭೂಮಿಯ ಸಿರಿಸುಗ್ಗಿ ಅಳಿದುಳಿದ ಇಸ್ರಯೇಲರಿಗೆ ಹಿಗ್ಗನ್ನೂ ಹೆಮ್ಮೆಯನ್ನೂ ತರುವುದು.


ಸರ್ವೇಶ್ವರನ ಮುಂದೆ ಬೆಳೆದನಾತ ಸಸಿಯಂತೆ ಒಣನೆಲದೊಳಗೆ ಇಳಿಯುವ ಬೇರಿನಂತೆ. ಆತನಲಿ ಅಂದಚಂದಗಳಾವುವೂ ಇರಲಿಲ್ಲ, ನೋಡಲು ಲಕ್ಷಣವಾದುವು ಏನೂ ಕಾಣಲಿಲ್ಲ.


ಏಕೆಂದರೆ, ಅವರು ಒಂದು ದಿನವನ್ನು ಗೊತ್ತುಮಾಡಿದ್ದಾರೆ; ಆ ದಿನದಂದು ತಾವು ನೇಮಿಸಿದ ಒಬ್ಬ ವ್ಯಕ್ತಿಯ ಮುಖಾಂತರ ಇಡೀ ಜಗತ್ತಿಗೆ ನ್ಯಾಯನಿರ್ಣಯ ಮಾಡುವರು. ಇದನ್ನು ಎಲ್ಲರಿಗೂ ಖಚಿತಪಡಿಸಲೆಂದೇ ಆ ವ್ಯಕ್ತಿಯನ್ನು ಮರಣದಿಂದ ಪುನರುತ್ಥಾನಗೊಳಿಸಿದ್ದಾರೆ.”


ಪ್ರತಿಯೊಬ್ಬ ಪ್ರಧಾನಯಾಜಕನು ಕಾಣಿಕೆಗಳನ್ನೂ ಬಲಿಗಳನ್ನೂ ಅರ್ಪಿಸುವುದಕ್ಕಾಗಿಯೇ ನೇಮಕಗೊಂಡಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ನಮ್ಮ ಈ ಪ್ರಧಾನಯಾಜಕರಿಗೂ ಏನಾದರೂ ಇರಲೇಬೇಕು.


ಯೇಸುವಾದರೋ ಚಿರಂಜೀವಿಯಾದುದರಿಂದ ಅವರ ಯಾಜಕತ್ವವು ಶಾಶ್ವತವಾಗಿ ಉಳಿಯುವಂಥಾದ್ದು.


ನಮ್ಮ ಪಿತಾಮಹ ಅಬ್ರಹಾಮನೇ ತಾನು ಗೆದ್ದುತಂದ ಶ್ರೇಷ್ಠ ವಸ್ತುಗಳಲ್ಲಿ ದಶಮಾಂಶವನ್ನು ಈ ಮೆಲ್ಕಿಸದೇಕನಿಗೆ ಸಲ್ಲಿಸಿ ಗೌರವಿಸಬೇಕಾದರೆ ಆತನು ಎಂಥ ಮಹಾಪುರುಷನೆಂದು ನೀವೇ ಆಲೋಚಿಸಿ ನೋಡಿ.


ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ.


“ನನ್ನ ಸಹೋದರರೇ, ನಿಮಗಿದು ತಿಳಿದಿರಲಿ: ಪಾಪಕ್ಷಮೆ ಯೇಸುವಿನ ಮುಖಾಂತರವೇ ಸಾಧ್ಯ ಎಂದು ಸಾರಲಾಗುತ್ತಿದೆ. ಮೋಶೆಯ ನಿಯಮಗಳ ಪಾಲನೆಯ ಮೂಲಕ ಪಾಪಗಳಿಂದ ವಿಮೋಚನೆ ಹೊಂದಲು ನಿಮ್ಮಿಂದಾಗಲಿಲ್ಲ; ಆದರೆ ಯೇಸುವನ್ನು ವಿಶ್ವಾಸಿಸುವ ಪ್ರತಿ ಒಬ್ಬನೂ ಅವೆಲ್ಲವುಗಳಿಂದ ವಿಮೋಚನೆ ಪಡೆಯುತ್ತಾನೆ.


ಫಿಲಿಪ್ಪನು ನತಾನಿಯೇಲನನ್ನು ಕಂಡು, “ಧರ್ಮಶಾಸ್ತ್ರದಲ್ಲಿ ಮೋಶೆ ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ದಾರೆ. ಇವರೇ ಜೋಸೆಫನ ಮಗನಾದ ನಜರೇತ್ ಊರಿನ ಯೇಸು,” ಎಂದು ಹೇಳಿದನು.


ಕೃಪಾಸಾಗರ, ದಯಾಮಯ ನಮ್ಮ ದೇವನು I ಆತನ ಕರುಣೆಯಿಂದ ನಮಗಾಯಿತು ಮೇಲಿಂದ ಅರುಣೋದಯವು II


ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರುನಿಂತು ನೋಡುತ್ತಿದ್ದ ಶತಾಧಿಪತಿ, “ಸತ್ಯವಾಗಿಯೂ ಈ ಮನುಷ್ಯ ದೇವರ ಪುತ್ರ!” ಎಂದನು.


ಪಕ್ಕದಲ್ಲಿ ಹಾದುಹೋಗುತ್ತಿದ್ದ ಜನರು ತಲೆಯಾಡಿಸುತ್ತಾ, “ಆಹಾ, ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ,


“ ‘ಮಹಾದೇವಾಲಯವನ್ನು ಕೆಡವಿಬಿಟ್ಟು ಅದನ್ನು ಮೂರು ದಿನಗಳಲ್ಲಿ ಮರಳಿ ಕಟ್ಟುವ ಶಕ್ತಿ ನನಗಿದೆ,’ ಎಂದು ಇವನು ಹೇಳಿದ್ದಾನೆ,” ಎಂದರು.


ನಾನು ನಿನಗೆ ಹೇಳುತ್ತೇನೆ, ಕೇಳು: “ನಿನ್ನ ಹೆಸರು ಪೇತ್ರ! ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು, ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು.


ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ನನ್ನ ಕುರಿಗಾಹಿಗೆ ವಿರುದ್ಧವಾಗಿ, ನನ್ನಾಸಂಗಡಿಗನಿಗೆದುರಾಗಿ, ಓ ಖಡ್ಗವೇ, ಎಚ್ಚರಗೊಳ್ಳು; ಕೊಲ್ಲು ಕುರಿಗಾಹಿಯನು. ಆಗ ಚದರುವುವು ಕುರಿಗಳು, ಕೈಮಾಡಲಿರುವೆ ಮರಿಗಳ ಮೇಲೂ.


ಸೇನಾಧೀಶ್ವರ ಸರ್ವೇಶ್ವರ ಹೀಗೆಂದಿದ್ದಾರೆ: “ನಿಮ್ಮ ಕೈ ಮುಂದಾಗಲಿ. ಈಗ ನೀವು ಕೇಳುತ್ತಿರುವ ಮಾತುಗಳು ಮಹಾದೇವಾಲಯಕ್ಕೆ ಅಸ್ತಿಭಾರವನ್ನು ಹಾಕಿದ ಕಾಲದಲ್ಲಿ ಪ್ರವಾದಿಗಳು ಆಡಿದ ಮಾತುಗಳೇ.


ಆತನೇ ನಮಗೆ ಶಾಂತಿದಾತನು, ಅಸ್ಸೀರಿಯದವರು ನಮ್ಮ ಮೇಲೆ ದಾಳಿಮಾಡಿ ಆಕ್ರಮಣ ಮಾಡುವಾಗ, ಅವರಿಗೆ ವಿರುದ್ಧ ಏಳುಮಂದಿ ಪಾಲಕರನ್ನು ಹಾಗೂ ಎಂಟುಮಂದಿ ಪುರುಷೋತ್ತಮರನ್ನು ನೇಮಿಸುವೆನು.


ಕಟ್ಟುವವರು ಸರ್ವೇಶ್ವರನ ಮಂದಿರದ ಅಸ್ತಿವಾರವನ್ನು ಹಾಕಿದಾಗ, ಇಸ್ರಯೇಲರ ಅರಸ ದಾವೀದನು ನೇಮಿಸಿದ ಕ್ರಮಕ್ಕನುಸಾರ, ಸರ್ವೇಶ್ವರನನ್ನು ಸಂಕೀರ್ತಿಸಿದರು. ಇದಕ್ಕಾಗಿ ದೀಕ್ಷಾವಸ್ತ್ರ ಭೂಷಿತರಾದ ಯಾಜಕರು ತುತೂರಿಗಳೊಡನೆ ಹಾಗು ಆಸಾಫನ ಮಕ್ಕಳಾದ ಲೇವಿಯರು ತಾಳಗಳೊಡನೆ ನಿಂತುಕೊಂಡು,


ಹೀಗೆ ಜನರು ಜೆರುಸಲೇಮಿನ ದೇವಾಲಯಕ್ಕೆ ಬಂದ ಎರಡನೆಯ ವರ್ಷದ ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲ್, ಯೋಚಾದಾಕನ ಮಗ ಯೇಷೂವ, ಇವರೂ ಇವರ ಸಹೋದರರಾದ ಇತರ ಯಾಜಕರು, ಲೇವಿಯರು, ಸೆರೆಯಿಂದ ಜೆರುಸಲೇಮಿಗೆ ಮರಳಿಬಂದ ಬೇರೆ ಎಲ್ಲರು ದೇವಾಲಯವನ್ನು ಕಟ್ಟುವುದಕ್ಕೆ ಪ್ರಾರಂಭಿಸಿದರು. ಇಪ್ಪತ್ತು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಲೇವಿಯರನ್ನು ಸರ್ವೇಶ್ವರನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗೆ ನೇಮಿಸಲಾಯಿತು.


ಕ್ರಿಸ್ತಯೇಸು ಪಾಪನಿವಾರಣೆಗೆಂದು ಎಲ್ಲಾ ಕಾಲಕ್ಕೂ ಏಕೈಕ ಬಲಿಯನ್ನು ಅರ್ಪಿಸಿ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿದ್ದಾರೆ.


ಆಗ ಯೇಸು ಮುಳ್ಳಿನ ಕಿರೀಟವನ್ನೂ ಕೆನ್ನೇರಳೆ ಬಣ್ಣದ ಅಂಗಿಯನ್ನೂ ಧರಿಸಿದವರಾಗಿ ಹೊರಕ್ಕೆ ಬಂದರು. ಪಿಲಾತನು, “ಇಗೋ, ಈ ಮನುಷ್ಯ !” ಎಂದನು.


ನನ್ನ ದಾಸ ಯಕೋಬನಿಗೆ ನಾನು ದಯಪಾಲಿಸಿದ ನಾಡಿನಲ್ಲಿ ಅವರು ವಾಸಿಸುವರು. ಹೌದು, ನಿಮ್ಮ ಪಿತೃಗಳು ವಾಸಿಸಿದ ನಾಡಿನಲ್ಲಿ ಅವರೂ ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು; ನನ್ನ ದಾಸ ದಾವೀದನು ಅವರಿಗೆ ಸದಾ ಪ್ರಭುವಾಗಿರುವನು.


ಸರ್ವೇಶ್ವರ ಇಂತೆನ್ನುತ್ತಾರೆ: “ದಿನ ಬರಲಿದೆ. ಅಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಮರಳಿ ಎಬ್ಬಿಸುವೆನು. ಅದರ ಬಿರುಕುಗಳನ್ನು ಮುಚ್ಚುವೆನು. ಹಾಳಾದದ್ದನ್ನು ಎತ್ತಿ ನಿಲ್ಲಿಸುವೆನು. ಮೊದಲು ಇದ್ದಂತೆಯೇ ಪುನಃ ನಿರ್ಮಿಸುವೆನು.


ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು.


ಆಮೇಲೆ ಆ ಪುರುಷ ನನ್ನನ್ನು ಪರಿಶುದ್ಧಸ್ಥಳಕ್ಕೆ ತಂದು ಅದನ್ನು ಅಳೆಯಲು ಅದರ ಎದುರುಬದುರಿನ ನಿಲವುಕಂಬಗಳ ಅಗಲ ದೇವರ ಗುಡಾರದ ಅಗಲದಂತೆ ಮೂರು ಮೂರು ಮೀಟರ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು