Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 2:9 - ಕನ್ನಡ ಸತ್ಯವೇದವು C.L. Bible (BSI)

9 ‘ನಿಮ್ಮನ್ನು ಮುಟ್ಟುವವರು ನನ್ನ ಕಣ್ಮಣಿಯನ್ನೇ ಮುಟ್ಟಿದಂತೆ! ಇಗೋ, ನಾನು ಅವರ ಮೇಲೆ ಕೈಯೆತ್ತುವೆನು. ಅವರು ತಮ್ಮ ದಾಸರ ಕೈಯಿಂದಲೇ ಸೂರೆಯಾಗುವರು. ನನ್ನನ್ನು ಕಳುಹಿಸಿದವರು ಸೇನಾಧೀಶ್ವರ ಸರ್ವೇಶ್ವರ ಎಂಬುದು ಆಗ ನಿಮಗೆ ಗೊತ್ತಾಗುವುದು’.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 “ಆಹಾ, ನಾನು ಇವರ ಮೇಲೆ ಕೈಬೀಸುವೆನು; ಇವರು ತಮಗೆ ಅಡಿಯಾಳಾದವರಿಗೆ ಸೂರೆಯಾಗುವರು” ಎಂದು ಹೇಳುತ್ತಾನೆ. ಆಗ ಸೇನಾಧೀಶ್ವರ ಯೆಹೋವನು ನನ್ನನ್ನು ಕಳುಹಿಸಿದ್ದಾನೆಂಬುದು ನಿಮಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆಹಾ, ನಾನು ಇವರ ಮೇಲೆ ಕೈಬೀಸುವೆನು; ಇವರು ತಮಗೆ ಅಡಿಯಾಳಾದವರಿಗೆ ಸೂರೆಯಾಗುವರು ಎಂದು ಹೇಳುತ್ತಾನೆ; ಆಗ ಸೇನಾಧೀಶ್ವರ ಯೆಹೋವನು ನನ್ನನ್ನು ಕಳುಹಿಸಿದ್ದಾನೆಂಬದು ನಿಮಗೆ ಗೊತ್ತಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಬಾಬಿಲೋನಿನ ಜನರು ನನ್ನ ಜನರನ್ನು ತೆಗೆದುಕೊಂಡು ಹೋಗಿ ತಮ್ಮ ಗುಲಾಮರನ್ನಾಗಿ ಮಾಡಿದರು. ಆದರೆ ನಾನು ಅವರನ್ನು ಹೊಡೆಯುವೆನು. ಅವರನ್ನು ನನ್ನ ಜನರ ಗುಲಾಮರನ್ನಾಗಿ ಮಾಡುವೆನು.” ಆಗ ಯೆಹೋವ ದೇವರು ನನ್ನನ್ನು ಕಳುಹಿಸಿದನೆಂಬುದು ನಿಮಗೆ ಗೊತ್ತಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ನಾನು ನನ್ನ ಕೈಯನ್ನು ಅವರ ಮೇಲೆ ಎತ್ತುವೆನು. ಆಗ ಅವರು ತಮ್ಮ ದಾಸರಿಗೆ ಕೊಳ್ಳೆಯಾಗುವರು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ಕಳುಹಿಸಿದರೆಂದು ನೀವು ತಿಳಿಯುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 2:9
30 ತಿಳಿವುಗಳ ಹೋಲಿಕೆ  

ಆ ದಿನದಂದು ಈಜಿಪ್ಟಿನವರು ಹೆಂಗಸರಂತೆ ಅಂಜುಬುರುಕರಾಗುವರು; ಸೇನಾಧೀಶ್ವರ ಸರ್ವೇಶ್ವರ ತಮ್ಮನ್ನು ದಂಡಿಸಲು ಕೈಯೆತ್ತುವಾಗ ಅವರು ಭಯಪಟ್ಟು ನಡುಗುವರು.


ದೂರದಲ್ಲಿ ವಾಸಿಸುವ ಜನರು ಅಲ್ಲಿಗೆ ಬಂದು ಸರ್ವೇಶ್ವರಸ್ವಾಮಿಯ ಆಲಯವನ್ನು ಕಟ್ಟುವುದಕ್ಕೆ ನೆರವಾಗುವರು. ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದಾತ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯೇ ಎಂಬುದು ನಿಮಗೆ ಮನದಟ್ಟಾಗುವುದು. ನಿಮ್ಮ ದೇವರಾದ ಆ ಸ್ವಾಮಿಯ ಮಾತನ್ನು ನೀವು ಮನಃಪೂರ್ವಕವಾಗಿ ಅನುಸರಿಸಿದರೆ ಇದೆಲ್ಲವೂ ಸರಿಯಾಗಿ ನೆರವೇರುವುದು.


ಪ್ರಾರಂಭದಲ್ಲಿ ಚಿಕ್ಕಕಾರ್ಯಗಳನ್ನು ನೋಡಿ ಪರಿಹಾಸ್ಯಮಾಡಿದವರು ಆಗ ಜೆರುಬ್ಬಾಬೆಲನ ಕೈಯಲ್ಲಿ ಅಳತೆನೂಲಿನ ಗುಂಡನ್ನು ಕಂಡು ಸಂತೋಷಪಡುವರು.”


ಕಾಡಿನಿಂದ ಸೌದೆಯನ್ನು ತರಬೇಕಾಗುವುದಿಲ್ಲ, ವನದಲ್ಲಿ ಮರವನ್ನು ಕಡಿಯಬೇಕಾಗುವುದಿಲ್ಲ; ಆಯುಧಗಳನ್ನೇ ಉರಿಸುವರು. ತಮ್ಮನ್ನು ಸೂರೆಮಾಡಿದವರನ್ನು ತಾವು ಸೂರೆಮಾಡುವರು, ತಮ್ಮನ್ನು ಕೊಳ್ಳೆಹೊಡೆದವರನ್ನು ತಾವು ಕೊಳ್ಳೆಹೊಡೆಯುವರು; ಇದು ಸರ್ವೇಶ್ವರನಾದ ದೇವರ ನುಡಿ.


ರಾಷ್ಟ್ರಗಳೇ ಇಸ್ರಯೇಲರನ್ನು ಕರೆತಂದು ಸೇರಿಸುವುವು ಸ್ವಂತ ನಾಡಿಗೆ ಸರ್ವೇಶ್ವರನ ಆ ನಾಡಿನಲಿ ದಾಸದಾಸಿಯರನ್ನಾಗಿಸಿಕೊಳ್ಳುವುದು ಇಸ್ರಯೇಲ್ ಮನೆತನವು ಆ ರಾಷ್ಟ್ರಗಳನ್ನೇ. ಸೆರೆಹಿಡಿಯುವರು ತಮ್ಮನ್ನು ಸೆರೆಹಿಡಿದವರನ್ನೇ ಅಧೀನಪಡಿಸುವರು ತಮ್ಮನ್ನು ಹಿಂಸಿಸಿದವರನ್ನೇ.


ಆತ ಬತ್ತಿಸುವನು ಈಜಿಪ್ಟಿನ ಕೊಲ್ಲಿಯನ್ನು, ಒಣಗಿಸುವನು ಬಿಸಿಗಾಳಿಯಿಂದ ಯೂಫ್ರೆಟಿಸ್ ನದಿಯನ್ನು, ಸೀಳುವನದನ್ನು ಏಳು ತೊರೆಗಳನ್ನಾಗಿ. ಈ ಪರಿ ದಾಟುವರು ಜನರು ಕೆರ ಮೆಟ್ಟಿದವರಾಗಿ.


ಅಂಥಕಾಲ ಬಂದಾಗ ಇದನ್ನೆಲ್ಲಾ ಕುರಿತು ನಾನು ನಿಮ್ಮನ್ನು ಮೊದಲೇ ಎಚ್ಚರಿಸಿದ್ದೇನೆಂದು ನೀವು ನೆನಸಿಕೊಳ್ಳುವಂತೆ ಇದನ್ನು ಹೇಳುತ್ತಿದ್ದೇನೆ.


ಅದು ಈಡೇರುವಾಗ ‘ಇರುವಾತನು ನಾನೇ’ ಎಂದು ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ಹೇಳುತ್ತಿದ್ದೇನೆ.


ತಮ್ಮ ಮಹಿಮೆಯನ್ನು ತಿಳಿಸುವುದಕ್ಕಾಗಿ ನನ್ನನ್ನು ಕಳುಹಿಸಿದ ಸೇನಾಧೀಶ್ವರ ಸರ್ವೇಶ್ವರ ನಿಮ್ಮನ್ನು ಸೂರೆಮಾಡಿದ ರಾಷ್ಟ್ರಗಳಿಗೆ ಕೊಡುವ ಎಚ್ಚರಿಕೆ ಇದು:


ಇಸ್ರಯೇಲಿನ ಜೀವಂತ ದೇವರೂ ಸೇನಾಧೀಶ್ವರ ಸರ್ವೇಶ್ವರನೂ ಆದ ನಾನು ನಿಶ್ಚಯವಾಗಿ ಹೇಳುತ್ತೇನೆ - ಸೊದೋಮಿನ ಗತಿಯೇ ಮೋವಾಬಿನ ಗತಿ ಆಗುವುದು. ಗೊಮೋರಾದ ದುರ್ಗತಿಯೇ ಅಮ್ಮೋನ್ಯರಿಗೆ ಸಂಭವಿಸುವುದು. ಈ ಪ್ರಾಂತ್ಯಗಳು ಮುಳ್ಳುಗಿಡಗಳಿಂದಲೂ ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯನಾಶನಕ್ಕೆ ಈಡಾಗುವುವು. ನನ್ನ ಜನರಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು; ಅಳಿದುಳಿದ ನನ್ನ ಜನರಿಗೆ ಅವು ಸೊತ್ತಾಗುವುವು.”


ನೀನು ಜನರ ರಕ್ತವನ್ನು ಸುರಿಸಿರುವೆ. ನಾಡುಗಳನ್ನೂ ನಗರಗಳನ್ನೂ ಅವುಗಳ ನಿವಾಸಿಗಳನ್ನೂ ಹಿಂಸಿಸಿರುವೆ. ಲೆಬನೋನ್ ಅರಣ್ಯಗಳನ್ನೂ ಕಡಿದುಹಾಕಿರುವೆ. ಈಗ ನಿನ್ನನ್ನೇ ಕಡಿದುಹಾಕಲಾಗುವುದು. ಅದರ ಪ್ರಾಣಿಪಕ್ಷಿಗಳನ್ನು ನಾಶಮಾಡಿರುವೆ. ಈಗ ಅವು ನಿನಗೆ ಭಯಾನಕವಾಗಿರುವುವು.


ನೀನು ಅನೇಕ ಜನಾಂಗಗಳನ್ನು ಕೊಳ್ಳೆಹೊಡೆದಿರುವೆ. ಜನರ ರಕ್ತವನ್ನು ಸುರಿಸಿರುವೆ. ನಾಡುಗಳನ್ನೂ ನಗರಗಳನ್ನೂ ಅವುಗಳ ನಿವಾಸಿಗಳನ್ನೂ ಹಿಂಸಿಸಿರುವೆ. ಈ ಕಾರಣ, ಜನಾಂಗಗಳಲ್ಲಿ ಅಳಿದುಳಿದವರೆಲ್ಲರು ನಿನ್ನನ್ನು ಕೊಳ್ಳೆಹೊಡೆಯುವರು.


ಹಿತಸಮಾಚಾರವನ್ನು ಸಾರುವ ಪ್ರವಾದಿಯೇ ಸರ್ವೇಶ್ವರನಿಂದ ನಿಜವಾಗಿ ಕಳುಹಿಸಲ್ಪಟ್ಟವನೆಂದು ಅವನ ಮಾತು ಕೈಗೂಡಿದ ಮೇಲೆ ತಿಳಿಯತಕ್ಕದ್ದು,” ಎಂದು ಹೇಳಿದನು.


ಅವನ ದೇಶಕ್ಕೆ ನಿಯಮಿತ ಕಾಲ ಬರುವತನಕ ಎಲ್ಲ ರಾಷ್ಟ್ರಗಳು ಅವನಿಗೂ ಅವನ ಮಗನಿಗೂ ಮೊಮ್ಮಗನಿಗೂ ಅಡಿಯಾಳಾಗಿ ಇರಬೇಕು. ಆಮೇಲೆ ಅನೇಕ ರಾಷ್ಟ್ರಗಳೂ ಮಹಾರಾಜರೂ ಅವನನ್ನೇ ಅಡಿಯಾಳನ್ನಾಗಿ ಮಾಡಿಕೊಳ್ಳುವರು.”


ಶತ್ರು ಹಡಗುಗಳ ಹಗ್ಗಗಳು ಸಡಿಲ, ಅದರ ಕೂವೆಯ ಬುಡ ಸಡಿಲ; ಅದರ ಹಾಯಿಯನ್ನು ಮುದುರದಂತೆ ಹಿಡಿದುಕೊಳ್ಳಲು ಅಸಾಧ್ಯ. ಅವುಗಳನ್ನು ಸೂರೆಮಾಡಿ ಕೊಳ್ಳೆಹೊಡೆದು, ಸಮನಾಗಿ ಹಂಚಿಕೊಳ್ಳಲು ಎಲ್ಲರಿಗೂ ಆಸ್ಪದವುಂಟು. ಕುಂಟರು ಕೂಡ ತಮ್ಮ ಪಾಲನ್ನು ಪಡೆಯಬಲ್ಲರು.


ಹಾಳುಮಾಡುತ್ತಿರುವವನೇ, ನಿನಗೆ ಧಿಕ್ಕಾರ ! ನಿನ್ನನ್ನು ಯಾರೂ ಹಾಳುಮಾಡದಿದ್ದರೂ ನೀನು ಹಾಳುಮಾಡುತ್ತಿರುವೆ. ನಿನ್ನನ್ನು ಯಾರೂ ವಂಚಿಸದಿದ್ದರೂ ನೀನು ವಂಚನೆಮಾಡುತ್ತಿರುವೆ. ಇದಕ್ಕೆಲ್ಲ ಅಂತ್ಯವಿದೆ. ಈಗ ಹಾಳುಮಾಡುತ್ತಿರುವ ನೀನು ಆಗ ನೀನೇ ಹಾಳಾಗುವೆ. ಈಗ ವಂಚನೆ ಮಾಡುತ್ತಿರುವ ನೀನೇ ವಂಚಿತನಾಗುವೆ.


ಬೋಳುಬೆಟ್ಟದ ಮೇಲೆ ಧ್ವಜವನ್ನು ಏರಿಸಿರಿ. ಪ್ರಭುಗಳ ನಗರದ್ವಾರಗಳನ್ನು ಮುತ್ತುವಂತೆ ಸೈನಿಕರಿಗೆ ಸನ್ನೆಮಾಡಿ ಕೂಗಿ ಹೇಳಿರಿ.


ಅದೇ ದಿನ ಬೀಡುಬಿಡುವರು ಶತ್ರುಗಳು ನೋಬಿನಲ್ಲಿ; ಸಿಯೋನ್ ಬೆಟ್ಟದ ಕಡೆಗೆ, ಜೆರುಸಲೇಮಿನ ಗುಡ್ಡದ ಕಡೆಗೆ ಮುಷ್ಟಿ ತೋರಿಸುತ್ತಿಹರಿದೊ ಆ ದಿಕ್ಕಿಗೆ.


ಬಂದು ಕೇಳಿ ಇದನ್ನು ಹತ್ತಿರದಿಂದ ನಾ ಮಾತಾಡಿಲ್ಲ ಗುಟ್ಟಾಗಿ ಆದಿಯಿಂದ ಪ್ರಸನ್ನನಾಗಿಹೆನು ಭುವಿ ಉಂಟಾದಂದಿನಿಂದ.” (ಕಳುಹಿಸಿದ್ದಾರೆ ದೇವರಾದ ಸರ್ವೇಶ್ವರ ನನ್ನನ್ನೀಗ ತಮ್ಮ ಪವಿತ್ರಾತ್ಮರ ಸಮೇತ).


ಆ ದಿನದಂದು ಹಲವಾರು ರಾಷ್ಟ್ರಗಳು ಸರ್ವೇಶ್ವರಸ್ವಾಮಿಯನ್ನು ಆಶ್ರಯಿಸಿಕೊಳ್ಳುವರು. ಅವರು ಆ ಸ್ವಾಮಿಯ ಜನರಾಗುವರು. ಸ್ವಾಮಿ ಅವರ ಮಧ್ಯೆ ವಾಸಿಸುವರು. ಸೇನಾಧೀಶ್ವರರಾದ ಆ ಸ್ವಾಮಿಯೇ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ ಎಂಬುದು ಆಗ ನಿಮಗೆ ಗೊತ್ತಾಗುವುದು.


ಸಿಯೋನ್ ಪರ್ವತದ ಮೇಲೆಲ್ಲ, ಅಲ್ಲಿನ ಸಭಾಕೂಟಗಳ ಮೇಲೆಲ್ಲ ಹಗಲಲ್ಲಿ ಧೂಮಮೇಘವನ್ನು, ರಾತ್ರಿಯಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ದೇವರ ಮಹಿಮೆ ಛತ್ರಿಯಂತೆಯೂ ಚಪ್ಪರದಂತೆಯೂ ಎಲ್ಲರನ್ನು ಆವರಿಸುವುದು.


ಸಿಯೋನಿನ ನಿವಾಸಿಗಳೇ, ಹಾಡಿರಿ, ಮಾಡಿರಿ ಭಜನ ನಿಮ್ಮ ಮಧ್ಯೆಯಿರುವ ಆ ಘನವಂತನ ಇಸ್ರಯೇಲಿನಾ ಸ್ವಾಮಿ ಪರಮಪಾವನ.”


ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು : ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಾಕಾರ.


ಅಲ್ಲಿ ಸರ್ವೇಶ್ವರ ತಮ್ಮ ಶಕ್ತಿಯನ್ನು ತೋರ್ಪಡಿಸುವರು. ನದಿಸರೋವರಗಳಂತೆ ನಮ್ಮನ್ನು ಸುತ್ತುವರಿಯುವರು. ಹುಟ್ಟುಗೋಲಿನ ದೋಣಿಯಾಗಲಿ, ದೊಡ್ಡದಾದ ಹಡಗಾಗಲಿ ಅದನ್ನು ದಾಟವು.


ಬಲಾತ್ಕಾರದ ಸುದ್ದಿಯೇ ಕಿವಿಗೆ ಬೀಳದು ನಿನ್ನ ದೇಶದಲಿ ನಾಶವಿನಾಶಗಳ ವಾರ್ತೆಯೇ ಕೇಳಿಬರದು ನಿನ್ನ ಪ್ರಾಂತ್ಯಗಳಲಿ. ಆಗ ಹೆಸರಿಡುವೆ ನಿನ್ನ ಪೌಳಿಗೋಡೆಗೆ ‘ದೈವಮುಕ್ತಿ’ ಎಂದು ನಿನ್ನೀ ಪುರದ್ವಾರಗಳಿಗೆ “ದೈವಸ್ತುತಿ’ ಎಂದು.


ನಿನಗಿನ್ನು ಬೇಕಾಗಿಲ್ಲ ಸೂರ್ಯನ ಬೆಳಕು ಹಗಲೊಳು ನಿನಗೆಂದಿಗೂ ಬೇಕಾಗಿಲ್ಲ ಚಂದ್ರನ ಬೆಳಕು ಇರುಳೊಳು. ನಿನಗೆ ನಿತ್ಯಪ್ರಕಾಶ ಸರ್ವೇಶ್ವರನೆ, ನಿನ್ನ ಬೆಳಗುವ ತೇಜಸ್ಸು ನಿನ್ನ ದೇವನೆ.


ಇದೋ, ದೂರ ನಾಡಿನಿಂದ ಕೇಳಿಬರುತ್ತಿದೆ ನನ್ನ ಪ್ರಜೆಯೆಂಬಾಕೆಯ ಈ ಮೊರೆ : “ಸಿಯೋನಿನಲ್ಲಿ ಇನ್ನು ಸರ್ವೇಶ್ವರನಿಲ್ಲವೊ? ಅದರ ರಾಜನು ಅಲ್ಲಿ ವಾಸವಾಗಿಲ್ಲವೊ?” ಅದಕ್ಕೆ ಸರ್ವೇಶ್ವರ : “ಇವರು ತಮ್ಮ ವಿಗ್ರಹಾರಾಧನೆಯಿಂದ ಅನ್ಯದೇವತೆಗಳ ಶೂನ್ಯರೂಪಗಳಿಂದ ನನ್ನನ್ನು ಕೆಣಕಿದ್ದೇಕೆ?”


ನಾನೇ ಇಸ್ರಯೇಲಿನ ಮಧ್ಯೆ ನೆಲೆಯಾಗಿ ಇರುವವನು ನಾನೇ ನಿಮ್ಮ ಸರ್ವೇಶ್ವರನಾದ ದೇವರು; ನಾನಲ್ಲದೆ ಬೇರೆ ದೇವರು ನಿಮಗಿಲ್ಲ. ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು ಎಂದು ನಿಮಗೆ ಮನದಟ್ಟಾಗುವುದು.


ತಪ್ಪಿಸಿಹನು ಸರ್ವೇಶ ನಿನಗೆ ವಿಧಿಸಿರುವ ದಂಡನೆಗಳನು ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ.


ರಕ್ಷಿಸುವನು ಸೇನಾಧೀಶ್ವರ ಸರ್ವೇಶ್ವರ ತನ್ನ ಜನರನು ನಸುಕಿ ನಾಶಮಾಡುವರವರು ಕವಣೆಗಾರ ಶತ್ರುಗಳನು. ಭೋರ್ಗರೆಯುವರು ಕುಡಿದು ಅಮಲೇರಿದವರಂತೆ ಇರುವರು ತುಂಬಿ ತುಳುಕುವ ಬೋಗುಣಿಗಳಂತೆ ರಕ್ತತೋಯ್ದ ವೇದಿಯ ಮೂಲೆಮೂಲೆಗಳಂತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು