Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 14:12 - ಕನ್ನಡ ಸತ್ಯವೇದವು C.L. Bible (BSI)

12 ಜೆರುಸಲೇಮಿನ ಮೇಲೆ ಮುತ್ತಿಗೆ ಹಾಕುವ ಸಕಲ ರಾಷ್ಟ್ರಗಳಿಗೂ ಸರ್ವೇಶ್ವರ ಭಯಂಕರ ವ್ಯಾಧಿಯೊಂದು ತಗಲುವಂತೆ ಮಾಡುವರು. ಜೀವದಿಂದಿರುವಾಗಲೇ ಜನರ ದೇಹ ಕೊಳೆತುಹೋಗುವುದು. ಕಣ್ಣು ಗುಣಿಯಲ್ಲೇ ಇಂಗಿಹೋಗುವುದು. ನಾಲಗೆ ಬಾಯಲ್ಲೇ ಬತ್ತಿಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಯೆರೂಸಲೇಮಿನ ಮೇಲೆ ಯುದ್ಧ ಮಾಡಿದ ಸಕಲ ಜನಾಂಗಗಳಿಗೂ ಯೆಹೋವನು ಈ ವ್ಯಾಧಿಯು ಬರುವಂತೆ ಮಾಡುವನು, ಹೆಜ್ಜೆಯ ಮೇಲೆ ನಿಂತ ಹಾಗೆಯೇ ಅವರ ಮಾಂಸವು ಕೊಳೆತು ಹೋಗುವುದು, ಕಣ್ಣು ಕುಣಿಯಲ್ಲೇ ಇಂಗುವುದು, ನಾಲಿಗೆಯು ಬಾಯಲ್ಲೇ ಕ್ಷಯಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಯೆರೂಸಲೇವಿುನ ಮೇಲೆ ಯುದ್ಧಮಾಡಿದ ಸಕಲ ಜನಾಂಗಗಳಿಗೂ ಯೆಹೋವನು ಈ ವ್ಯಾಧಿಯನ್ನು ತಗಲಿಸುವನು - ಹೆಜ್ಜೆಯ ಮೇಲೆ ನಿಂತ ನಿಂತ ಹಾಗೆಯೇ ಅವರ ಮಾಂಸವು ಕೊಳೆತುಹೋಗುವದು, ಕಣ್ಣು ಗುಣಿಯಲ್ಲೇ ಇಂಗುವದು, ನಾಲಿಗೆಯು ಬಾಯಲ್ಲೇ ಕ್ಷಯಿಸುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದರೆ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧ ಮಾಡಿದ ಜನಾಂಗಗಳನ್ನೆಲ್ಲಾ ಯೆಹೋವನು ಶಿಕ್ಷಿಸುವನು. ಅವರಿಗೆ ಭಯಂಕರ ರೋಗವನ್ನು ಬರಮಾಡುವನು. ಅವರು ಜೀವಂತರಾಗಿರುವಾಗಲೇ ಅವರ ಚರ್ಮವು ಕೊಳೆತುಹೋಗುವದು. ಅವರ ಕಣ್ಣುಗಳು ಅವು ಇರುವಲ್ಲಿಯೇ ಕೊಳೆತುಹೋಗುವವು. ಅವರ ಬಾಯೊಳಗೆ ಅವರ ನಾಲಿಗೆಗಳು ಕೊಳೆತುಹೋಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಯೆರೂಸಲೇಮಿಗೆ ವಿರೋಧವಾಗಿ ದಂಡು ಕಟ್ಟಿಕೊಂಡಿರುವ ಎಲ್ಲಾ ಜನರನ್ನು ಯೆಹೋವ ದೇವರು ವ್ಯಾಧಿಯಿಂದ ಬಾಧಿಸುವರು. ಹೀಗೆಯೇ, ಅವರು ನಿಂತಿರುವಾಗ, ಅವರ ಮಾಂಸವು ಕ್ಷಯಿಸಿ ಹೋಗುವುವು. ಅವರ ಕಣ್ಣುಗಳು ಕುಣಿಗಳಲ್ಲಿ ಇಂಗಿ ಹೋಗುವುವು. ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 14:12
34 ತಿಳಿವುಗಳ ಹೋಲಿಕೆ  

ಆ ದಿನದಂದು ಜೆರುಸಲೇಮಿನ ಮೇಲೆ ಬೀಳುವ ರಾಷ್ಟ್ರಗಳೆಲ್ಲವನ್ನು ನಾನೇ ಧ್ವಂಸಮಾಡುವೆನು.


ಅನಂತರ ಪೂರ್ವಕಾಲದಲ್ಲಿ ನಡೆದಂತೆ, ಸರ್ವೇಶ್ವರ ಹೊರಟುಬಂದು ಆ ರಾಷ್ಟ್ರಗಳಿಗೆ ವಿರುದ್ಧವಾಗಿ ಪ್ರತಿಭಟಿಸುವರು.


ನಿನ್ನ ಕೋಪದಾ ಪ್ರತಾಪವನು ಬಲ್ಲವನಾರು? I ಭಯಂಕರ ರೌದ್ರವನು ಅನುಭವಿಸುವವರಾರು? II


ನಿನಗಾದರೋ ಕರುಳುಬೇನೆಯ ಕಠಿಣರೋಗ ಬರುವುದು. ಅದು ಬಹುದಿನಗಳವರೆಗೂ ವಾಸಿ ಆಗದು; ಕಡೆಯಲ್ಲಿ ನಿನ್ನ ಕರುಳುಗಳು ಹೊರಗೆ ಬೀಳುವುವು,” ಎಂದು ತಿಳಿಸಿದನು.


ಅವರು ನಿಮಗೂ ನಿಮ್ಮ ಸಂತತಿಯವರಿಗೂ ದೀರ್ಘಕಾಲವಿರುವ ಬಹುಭಯಂಕರವಾದ ಉಪದ್ರವಗಳನ್ನು ಬರಮಾಡುವರು. ದೀರ್ಘಕಾಲ ವಾಸಿಯಾಗದ ಘೋರವ್ಯಾಧಿಗಳಿಂದ ನಿಮ್ಮನ್ನು ಬಾಧಿಸುವರು.


ನಿಮ್ಮನ್ನು ಕ್ಷಯರೋಗ, ಚಳಿಜ್ವರ, ಉರಿತ, ಉಷ್ಣಜ್ವರ ಇವುಗಳಿಂದಲೂ, ನಾಡನ್ನು ಕ್ಷಾಮದಿಂದಲೂ, ಬೆಳೆಯನ್ನು ಕಾಡಿನ ಬಿಸಿಗಾಳಿಗಳಿಂದಲೂ ಪೀಡಿಸುವರು. ನೀವು ಸಾಯುವ ತನಕ ಈ ಪೀಡೆಗಳು ನಿಮ್ಮನ್ನು ಬೆನ್ನತ್ತುವುವು.


ನಾನು ನಿಮಗೆ ವಿರುದ್ಧ ಕೋಪದಿಂದ ವರ್ತಿಸುವೆನು. ನಿಮ್ಮ ಪಾಪಗಳ ಕಾರಣ ಏಳ್ಮಡಿಯಾಗಿ ಶಿಕ್ಷಿಸುವೆನು.


ನಾನೇ ನಿಮಗೆ ವಿರೋಧವಾಗಿ ನಡೆಯುವೆನು. ನಿಮ್ಮ ಪಾಪಗಳ ಕಾರಣ ನಾನೇ ನಿಮ್ಮನ್ನು ಏಳರಷ್ಟು ದಂಡಿಸುವೆನು.


“ನೀವು ನನ್ನ ಮಾತನ್ನು ಕೇಳಲೊಲ್ಲದೆ ನನಗೆ ವಿರೋಧವಾಗಿ ನಡೆದರೆ ನಿಮ್ಮ ಪಾಪದ ನಿಮಿತ್ತ ಇನ್ನೂ ಏಳುಪಟ್ಟು ಹೆಚ್ಚಾಗಿ ಬಾಧಿಸುವೆನು.


ನೀವು ಈ ದಂಡನೆಗಳಿಗೆ ಗುರಿಯಾಗುವಿರಿ. ನಿಮಗೆ ಕ್ಷಯ ರೋಗ, ಚಳಿಜ್ವರ ಮುಂತಾದ ಭೀಕರ ವ್ಯಾಧಿಗಳು ಬರುವಂತೆ ಮಾಡುವೆನು. ಇವುಗಳ ನಿಮಿತ್ತ ನೀವು ಕಂಗೆಡುವಿರಿ, ಮನಗುಂದಿ ಹೋಗುವಿರಿ. ನಿಮ್ಮ ಬಿತ್ತನೆಯ ಫಲ ನಿಮಗೆ ಸಿಗದೆ ಹೋಗುವುದು. ಅದು ಶತ್ರುಗಳ ಪಾಲಾಗುವುದು.


ನೀನು ಕಂಡ ಮೃಗವೂ ಅದರ ಹತ್ತು ಕೊಂಬುಗಳೂ ಆ ವೇಶ್ಯೆಯನ್ನು ದ್ವೇಷಿಸುವವರನ್ನು ಸೂಚಿಸುತ್ತದೆ. ಅವರು ಅವಳನ್ನು ನಿರ್ಗತಿಕಳನ್ನಾಗಿ ಮಾಡುವರು, ಬೆತ್ತಲೆಯಾಗಿಸುವರು; ಅವಳ ಮಾಂಸವನ್ನು ಕಿತ್ತು ತಿನ್ನುವರು; ಅವಳನ್ನೇ ಬೆಂಕಿಯಲ್ಲಿ ಸುಟ್ಟುಬಿಡುವರು.


ಆದರೆ ಹೆರೋದನು ದೇವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಲಿಲ್ಲ. ಆದುದರಿಂದ ದೇವದೂತನು ಆ ಕ್ಷಣವೇ ಅವನನ್ನು ಸಂಹರಿಸಿದನು. ಅವನು ಹುಳಹುಪ್ಪಟೆಗಳಿಗೆ ಆಹಾರವಾದನು.


“ಇಷ್ಟಾದರೂ ನೀವು ನನ್ನ ಮಾತಿಗೆ ಲಕ್ಷ್ಯಗೊಡದೆ ಹೋದರೆ ನಾನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ಹೆಚ್ಚಾಗಿ ದಂಡಿಸುವೆನು; ನಿಮ್ಮ ಗರ್ವವನ್ನು ಅಡಗಿಸುವೆನು.


ವ್ಯಾಧಿ ನಿಮಗೆ ಹತ್ತಿಕೊಂಡೇ ಇರುವಂತೆ ಮಾಡಿ ನೀವು ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ನಿಮ್ಮಲ್ಲಿ ಒಬ್ಬರೂ ಉಳಿಯದಂತೆ ಸರ್ವೇಶ್ವರ ಮಾಡುವರು.


ರೋಗರುಜಿನಗಳು ಅವನ ಚರ್ಮವನು ಚೂರುಚೂರಾಗಿ ತಿಂದುಬಿಡುವುವು ಅಂಗಾಂಗವಾಗಿ ಮೃತ್ಯುಕಾರಕ ರೋಗವು ಅವನನ್ನು ನುಂಗಿಬಿಡುವುದು.


ನಾಡಿನ ಜನರಿಗೆ ತಗಲುವಂಥ ವ್ಯಾಧಿಯೇ ಕುದುರೆ, ಹೇಸರಗತ್ತೆ, ಒಂಟೆ, ಕತ್ತೆ ಮುಂತಾದ ಪಾಳೆಯದಲ್ಲಿನ ಎಲ್ಲ ಪಶುಪ್ರಾಣಿಗಳಿಗೂ ತಗಲುವುದು.


ಈಜಿಪ್ಟಿನ ಮನೆತನದವರು ಬರದೆಹೋದರೆ, ಪರ್ಣಕುಟೀರಗಳ ಹಬ್ಬವನ್ನು ಆಚರಿಸಲು ಬರದ ರಾಷ್ಟ್ರಗಳಿಗೆ ಸರ್ವೇಶ್ವರ ವಿಧಿಸುವ ದಂಡನೆ ಅವರಿಗೂ ತಗಲುವುದು.


ನೆಮ್ಮದಿಯಿಂದ ಬಾಳುವ ರಾಷ್ಟ್ರಗಳ ಮೇಲೆ ಬಹಳ ಸಿಟ್ಟುಗೊಂಡಿದ್ದೇನೆ. ಏಕೆಂದರೆ, ನಾನು ಜೆರುಸಲೇಮಿನ ವಿರುದ್ಧ ಕಿಂಚಿತ್ತೇ ಕೋಪಗೊಂಡಿದ್ದಾಗ ಅವರು ಕೇಡಿಗೆ ಕೇಡು ಕೂಡಿಸಿಬಿಟ್ಟರು.


“ಅಳೆಯಲು ಹೋಗುತ್ತಿರುವ ಆ ಯುವಕನಿಗೆ ಓಡಿಹೋಗಿ ಈ ಮಾತನ್ನು ತಿಳಿಸು: ‘ಜೆರುಸಲೇಮಿನಲ್ಲಿ ಜನರ ಮತ್ತು ದನಕರುಗಳ ಸಂಖ್ಯೆ ಅಪಾರವಾಗುವುದು. ಅದು ಪೌಳಿಗೋಡೆಗಳಿಲ್ಲದ ಊರುಕೇರಿಗಳಂತೆ ಹರಡಿಕೊಳ್ಳುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು