Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 12:8 - ಕನ್ನಡ ಸತ್ಯವೇದವು C.L. Bible (BSI)

8 ಅಂದು, ಸರ್ವೇಶ್ವರ ಜೆರುಸಲೇಮಿನ ನಿವಾಸಿಗಳನ್ನು ಕೋಟೆಯಂತೆ ಕಾಪಾಡುವರು. ಈ ಕಾರಣ, ಅವರಲ್ಲಿ ದುರ್ಬಲನು ದಾವೀದನಂತೆ ಬಲಾಢ್ಯನಾಗುವನು. ದಾವೀದನವಂಶ ದೇವದೂತರಂತೆ, ಹೌದು, ದೇವರಂತೆ, ಅವರಿಗೆ ಮುಂದಾಳಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆ ದಿನದಲ್ಲಿ ಯೆಹೋವನು ಯೆರೂಸಲೇಮಿನವರನ್ನು ಸುತ್ತಲು ಕಾಪಾಡುವನು; ಅವರೊಳಗೆ ಈಗಿನ ಕುಂಟನು ಆ ದಿನದಲ್ಲಿ ದಾವೀದನಂತಿರುವನು; ದಾವೀದ ವಂಶವು ದೇವರಂತೆ, ಯೆಹೋವನ ದೂತನ ಹಾಗೆ ಅವರಿಗೆ ಮುಂದಾಳಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆ ದಿನದಲ್ಲಿ ಯೆಹೋವನು ಯೆರೂಸಲೇವಿುನವರನ್ನು ಸುತ್ತಲು ಕಾಪಾಡುವನು; ಅವರೊಳಗೆ ಈಗಿನ ಕುಂಟನು ಆ ದಿನದಲ್ಲಿ ದಾವೀದನಂತಿರುವನು; ದಾವೀದ ವಂಶವು ದೇವರಂತೆ, ಯೆಹೋವನ ದೂತನ ಹಾಗೆ ಅವರಿಗೆ ಮುಂದಾಳಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಜೆರುಸಲೇಮಿನಲ್ಲಿ ವಾಸಿಸುವ ಜನರನ್ನು ಯೆಹೋವನು ಕಾಪಾಡುತ್ತಾನೆ. ಬಲಹೀನ ಮನುಷ್ಯನೂ ದಾವೀದನಂತೆ ಶೂರನಾಗುವನು. ದಾವೀದನ ಸಂತತಿಯ ಜನರು ದೇವರುಗಳಂತಿದ್ದು ದೇವರ ಸ್ವಂತ ದೂತರಂತೆ ತಮ್ಮ ಜನರನ್ನು ನಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆ ದಿನದಲ್ಲಿ ಯೆಹೋವ ದೇವರು ಯೆರೂಸಲೇಮಿನ ನಿವಾಸಿಗಳನ್ನು ಕಾಪಾಡುವರು. ಆ ದಿವಸಗಳಲ್ಲಿ ಅವರಲ್ಲಿ ಅತ್ಯಂತ ಬಲಹೀನನು ದಾವೀದನಂತೆ ಬಲಾಢ್ಯನಾಗುವನು. ದಾವೀದನ ವಂಶವು ದೇವರ ಹಾಗೆಯೂ, ಮುಂದಾಳಾಗಿ ಯೆಹೋವ ದೇವರ ದೂತನ ಹಾಗೆಯೂ ಇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 12:8
53 ತಿಳಿವುಗಳ ಹೋಲಿಕೆ  

ಶತ್ರುಗಳು ಅತ್ತ ಕಾಲಿಡದಂತೆ ನನ್ನ ಆಲಯದ ಸುತ್ತಲು ಪಾಳೆಯಹಾಕಿ ಕಾವಲಿರುವೆನು. ಯಾವ ಬಾಧಕನೂ ನನ್ನ ಜನರ ಮೇಲೆ ಧಾಳಿಮಾಡದಂತೆ ನಾನೇ ಕಣ್ಣಿಟ್ಟು ನೋಡಿಕೊಳ್ಳುವೆನು.”


ನಾನೇ ಅದರ ಸುತ್ತಮುತ್ತಲು ಅಗ್ನಿ ಪ್ರಾಕಾರವಾಗಿ, ಅದರೊಳಗಿನ ವೈಭವವಾಗಿರುವೆನು. ಇದು ಸರ್ವೇಶ್ವರಸ್ವಾಮಿಯ ನುಡಿ,’ ಎಂದ.”


ಅನ್ಯರಾಷ್ಟ್ರಗಳು ಇವನ್ನು ನೋಡಿ ಅವುಗಳ ಮುಂದೆ ತಮ್ಮ ಶಕ್ತಿಸಾಮರ್ಥ್ಯ ಏನೂ ಇಲ್ಲವೆಂದು ನಾಚಿಕೆಪಟ್ಟು ಬಾಯಮೇಲೆ ಕೈಯಿಟ್ಟುಕೊಳ್ಳುವರು; ಅವರ ಕಿವಿ ಕಿವುಡಾಗುವುದು.


ನನ್ನ ಶತ್ರುಗಳೇ, ನನ್ನನ್ನು ನೋಡಿ ಹಿಗ್ಗಬೇಡಿ. ನಾನು ಬಿದ್ದುಹೋದರೂ, ಎದ್ದೇಳುವೆನು; ಕತ್ತಲೆಯಲ್ಲಿ ಕುಳಿತಿದ್ದರೂ ಸರ್ವೇಶ್ವರ ನನಗೆ ಬೆಳಕಾಗುವರು.


ನಿಮ್ಮ ನೇಗಿಲುಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿ ಮಾಡಿರಿ; ಕುಡುಗೋಲುಗಳನ್ನು ಭರ್ಜಿಗಳನ್ನಾಗಿ ಮಾರ್ಪಡಿಸಿರಿ; ಬಲಹೀನನು ಸಹ ಬಲಾಢ್ಯನಂತೆ ಯುದ್ಧಕ್ಕೆ ನಿಂತುಕೊಳ್ಳಲಿ.


ತದನಂತರ ಇಸ್ರಯೇಲಿನವರು ತಮ್ಮ ದೇವರಾದ ಸರ್ವೇಶ್ವರನನ್ನು ಮತ್ತು ಅರಸ ದಾವೀದನನ್ನು ಆಶ್ರಯಿಸುವರು. ಅಂತಿಮ ದಿನಗಳಲ್ಲಿ ಅವರು ಭಯಭಕ್ತಿಯುಳ್ಳವರಾಗಿ ಸರ್ವೇಶ್ವರಸ್ವಾಮಿಯನ್ನೂ ಅವರ ಕೃಪಾಶ್ರಯವನ್ನೂ ಮರೆಹೋಗುವರು.


“ಯೇಸುವೆಂಬ ನಾನೇ ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ನಿಮಗೆ ಸಾಕ್ಷಿನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ನಾನು ದಾವೀದಕುಲಪುತ್ರ. ಅದೇ ವಂಶದ ಕುಡಿ; ಉದಯಕಾಲದ ಉಜ್ವಲ ನಕ್ಷತ್ರ!


‘ಅ'ಕಾರವೂ ‘ಳ'ಕಾರವೂ ನಾನೇ ಆದಿಯೂ ಸಮಾಪ್ತಿಯೂ ನಾನೇ'. “


ಅಗ್ನಿಜ್ವಾಲೆಯನ್ನು ಆರಿಸಿದರು; ಖಡ್ಗದ ಬಾಯಿಂದ ತಪ್ಪಿಸಿಕೊಂಡರು; ಬಲಹೀನರಾಗಿದ್ದರೂ ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಶತ್ರುಗಳ ಸೈನ್ಯವನ್ನು ಸದೆಬಡಿದರು.


ನಿಜವಾಗಿಯೂ ನಮ್ಮ ಧರ್ಮದ ನಿಗೂಢಾರ್ಥ ಶ್ರೇಷ್ಠವಾದದ್ದು ಎಂಬುದು ನಿಸ್ಸಂದೇಹವಾದ ವಿಷಯ. “ನರಮಾನವ ರೂಪದಲಿ ಪ್ರತ್ಯಕ್ಷನಾಗಿ ದೇವರಿಗೆ ಪ್ರಿಯನೆಂದು ಪವಿತ್ರಾತ್ಮನಿಂದ ಪ್ರಕಟಿತನಾಗಿ ದೇವದೂತರಿಗೆ ಪ್ರದರ್ಶಿತವಾಗಿ ಅನ್ಯಜನರಿಗೆ ಪ್ರಬೋಧಿತನಾಗಿ ಜಗದಲ್ಲೆಲ್ಲೂ ವಿಶ್ವಾಸಪಡೆದವನಾಗಿ ಸ್ವರ್ಗಕ್ಕೇರಿದಾತ ಮಹಿಮಾನ್ವಿತ ಯೇಸುಕ್ರಿಸ್ತ.


ಅಬ್ರಹಾಮ್, ಇಸಾಕ್ ಮತ್ತು ಯಕೋಬ ಎಂಬ ಪಿತಾಮಹರೂ ಸಹ ಇವರಿಗೆ ಸೇರಿದವರೇ. ಶಾರೀರಿಕವಾಗಿ ಕ್ರಿಸ್ತಯೇಸುವೂ ಇವರ ವಂಶದಲ್ಲಿ ಹುಟ್ಟಿದವರೇ. ಸಕಲಕ್ಕೂ ಒಡೆಯರಾದ ದೇವರಿಗೆ ನಿರಂತರ ಸ್ತುತಿಸ್ತೋತ್ರ ಸಲ್ಲಲಿ, ಆಮೆನ್.


“ಇಮ್ಮಾನುವೇಲ್” ಎಂದರೆ, “ದೇವರು ನಮ್ಮೊಡನೆ ಇದ್ದಾರೆ” ಎಂದು ಅರ್ಥ.


ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ನಾನು ನನ್ನ ದೂತನನ್ನು ಮುಂದಾಗಿ ಕಳುಹಿಸುತ್ತೇನೆ. ನಾನು ಬರಲು ಮಾರ್ಗವನ್ನು ಆತನು ಸಿದ್ಧಗೊಳಿಸುವನು. ನೀವು ಎದುರು ನೋಡುತ್ತಿರುವ ಸರ್ವೇಶ್ವರ ಇದ್ದಕ್ಕಿದ್ದಂತೆ ತಮ್ಮ ಆಲಯಕ್ಕೆ ಬರುವರು. ಇಗೋ, ನಿಮಗೆ ಪ್ರಿಯನಾದ ದೂತನು ಬರುವನು. ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು.”


ಸಿಂಹವು ತಿರುಗಾಡುತ್ತಾ ಕಾಡುಮೃಗಗಳನ್ನು ಕಬಳಿಸುತ್ತದೆ. ಪ್ರಾಯದ ಸಿಂಹವು ಓಡಾಡುತ್ತಾ ಸುರಕ್ಷಣೆಯಿಲ್ಲದ ಕುರಿಮಂದೆಗಳನ್ನು ಸೀಳಿಹಾಕುತ್ತದೆ. ಅಂತೆಯೇ ಯಕೋಬನ ಅಳಿದುಳಿದ ಜನರು ದೇಶವಿದೇಶಗಳ ಹಲವಾರು ರಾಷ್ಟ್ರಗಳ ನಡುವೆ ನಾಶಕರವಾಗಿರುವರು.


ಯಕೋಬನು ಅಣ್ಣನ ಜೊತೆ ತಾಯಿಯ ಗರ್ಭದಲ್ಲಿರುವಾಗಲೇ ಅವನ ಹಿಮ್ಮಡಿಯನ್ನು ಹಿಡಿದು ವಂಚಿಸಿದನು. ಪ್ರಾಯಕ್ಕೆ ಬಂದಮೇಲೆ ದೇವರೊಡನೆ ಹೋರಾಡಿದನು.


ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ. ಅವರ ದುರ್ಬೋಧನೆಯ ನಿಮಿತ್ತ ನಾನು ನಿಮ್ಮನ್ನು ಹೊರದೂಡಬೇಕಾಗುವುದು; ನೀವು ದೇಶಭ್ರಷ್ಟರಾಗಿ ನಾಶವಾಗುವಿರಿ.


ಆ ಜನರ ಕಷ್ಟದುಃಖಗಳಲ್ಲಿ ಸಂರಕ್ಷಿಸಿದರು. ದಯೆಯಿಂದಲೂ ಪ್ರೀತಿಯಿಂದಲೂ ಅವರಿಗೆ ಬಿಡುಗಡೆ ನೀಡಿದರು. ಪುರಾತನ ಕಾಲದಲ್ಲೆಲ್ಲಾ ಅವರನ್ನು ಎತ್ತಿ ಹೊತ್ತು ಆದರಿಸಿದರು.


ಧಿಕ್ಕರಿಸಲ್ಪಟ್ಟವನು, ಮನುಜರಿಂದ ತಿರಸ್ಕೃತನು, ದುಃಖಕ್ರಾಂತನು, ಕಷ್ಟಸಂಕಟ ಅನುಭವಿಸಿದವನು. ನೋಡಿದವರು ಮುಖ ತಿರುಗಿಸುವಷ್ಟು ನಿಂದಕನು ! ನಾವೋ ಲಕ್ಷ್ಯಕ್ಕೂ ತೆಗೆದುಕೊಳ್ಳಲಿಲ್ಲ ಆತನನು.


ಪೂರ್ತಿಯಾಗಿ ತಿರಸ್ಕೃತನಾದವನಿಗೆ ಅನ್ಯಜನಾಂಗಗಳಿಗೆ ಅಸಹ್ಯವಾದವನಿಗೆ ದರ್ಪಾಧಿಪತಿಗಳಿಗೆ ದಾಸನಾದವನಿಗೆ, ಇಸ್ರಯೇಲಿನ ವಿಮೋಚಕನು ಹಾಗೂ ಪರಮಪಾವನನು ಆದ ಸರ್ವೇಶ್ವರನು ಹೀಗೆಂದು ಹೇಳುವನು : “ಸರ್ವೇಶ್ವರ ಸ್ವಾಮಿಯ ಪ್ರಾಮಾಣಿಕತೆಯನ್ನೂ ಇಸ್ರಯೇಲಿನ ಪರಮ ಪಾವನನಿಂದ ನೀನು ಆಯ್ಕೆಯಾದುದನ್ನೂ ನಿನ್ನ ಅರಸರುಗಳು ಕಂಡು, ಎದ್ದುನಿಲ್ಲುವರು ನಿನಗೆ ಅಧಿಪತಿಗಳು ಅಡ್ಡಬೀಳುವರು.”


ಇದಲ್ಲದೆ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವುದು. ಸೂರ್ಯನ ಬೆಳಕು ಏಳ್ಮಡಿ ಹೆಚ್ಚುವುದು. ಏಳು ದಿನಗಳ ಬೆಳಕು ಒಂದೇ ದಿನದ ಬೆಳಕಿನಂತಾಗುವುದು. ಅಂದು ಸರ್ವೇಶ್ವರ ತಮ್ಮ ಜನರ ಹುಣ್ಣುಗಳನ್ನು ಕಟ್ಟುವರು. ತಮ್ಮ ಪೆಟ್ಟಿನಿಂದ ಜನರಿಗಾದ ಗಾಯಗಳನ್ನು ಗುಣಪಡಿಸುವರು.


‘ನೀವು ದೇವರುಗಳು’, ‘ನೀವೆಲ್ಲರು ಪರಾತ್ಪರನ ಮಕ್ಕಳು’ ನಾನೆಂದೆ I ಆದರೂ ಅಳಿಯುವಿರಿ ಅರಸರಂತೆ, ಸಾಯುವಿರಿ ಬರಿ ಮಾನವರಂತೆ” II


ಆದರೆ ಯೆಹೂದ್ಯ ಮನೆತನವನ್ನು ಪ್ರೀತಿಸಿ ಉದ್ಧರಿಸುವೆನು. ಬಿಲ್ಲುಬಾಣ, ಕತ್ತಿಕಾಳಗ, ಕುದುರೆರಾಹುತರು ಇವುಗಳಿಂದಲ್ಲ, ದೇವರಾದ ಸರ್ವೇಶ್ವರನ ಶಕ್ತಿಯಿಂದಲೇ ಅವರನ್ನು ರಕ್ಷಿಸುವೆನು,” ಎಂದರು.


ಇಸ್ರಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ಸ್ಥಳ ಬದಲಾಯಿಸಿ ಅವರ ಹಿಂದಕ್ಕೆ ಬಂದನು. ಅವರ ಮುಂಭಾಗದಲ್ಲಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.


ನಾನು ಒಬ್ಬ ದೂತನನ್ನು ನಿನಗೆ ಮುಂದಾಗಿ ಕಳಿಸಿ ಕಾನಾನ್ಯರನ್ನು, ಅಮೋರಿಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು, ಹಾಗು ಯೆಬೂಸಿಯರನ್ನು ಅಲ್ಲಿಂದ ಹೊರದೂಡುವೆನು.


ನಿಮ್ಮಲ್ಲಿ ಐದು ಮಂದಿ ನೂರು ಮಂದಿಯನ್ನೂ, ನೂರು ಮಂದಿ ಹತ್ತು ಸಾವಿರ ಮಂದಿಯನ್ನೂ ಓಡಿಸುವರು. ಶತ್ರುಗಳು ನಿಮ್ಮ ಕತ್ತಿಯಿಂದ ಹತರಾಗುವರು.


ನಿಮ್ಮ ದೇವರಾದ ಸರ್ವೇಶ್ವರ ತಮ್ಮ ವಾಗ್ದಾನದಂತೆ ನಿಮ್ಮ ಪರವಾಗಿ ಯುದ್ಧಮಾಡಿದರು. ಆದ್ದರಿಂದಲೇ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವಷ್ಟು ಶಕ್ತನಾದ.


ಆದರೆ ದೇವದೂತರಿಗಿಂತ ಕಿಂಚಿತ್ತೆ ಕೀಳಾಗಿಸಿದೆ ಮನುಜನನು I ಮುಡಿಸಿದೆ ಮುಕುಟವಾಗವನಿಗೆ ಘನಮಾನವನು, ಸಿರಿಹಿರಿಮೆಯನು II


ಸರ್ವೇಶ್ವರ ನನಗೆ ಹೀಗೆಂದು ಹೇಳಿದ್ದಾರೆ : “ಸಿಂಹವೋ ಪ್ರಾಯದ ಸಿಂಹವೋ ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ, ಆ ಕೂಗನ್ನು ಕೇಳಿ ಕುರುಬರನೇಕರು ಕೂಡಿಬಂದರೂ ಅದು ಅವರ ಕೂಗಾಟಕ್ಕೆ ಹೆದರದು, ಅವರ ಗದ್ದಲಕ್ಕೆ ಎದೆಗುಂದದು. ಅಂತೆಯೇ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಆದ ನಾನು ಯುದ್ಧಮಾಡಲು ಸಿಯೋನ್ ಶಿಖರದ ಮೇಲೆ ಇಳಿದು ಬರುವಾಗ ನನ್ನನ್ನು ಯಾರೂ ಹೆದರಿಸುವುದಿಲ್ಲ, ಎದೆಗುಂದಿಸುವಂತಿಲ್ಲ.


ಸ್ವಜನರಿಗೆ ಸರ್ವೇಶ್ವರ ಪ್ರತ್ಯಕ್ಷನಾಗುವನು ಮಿಂಚಿನಂತೆ ಬಿಡುವನು ತನ್ನ ಬಾಣಗಳನು ಮೊಳಗಿಸುವನು ಕಾಳಗದ ತುತೂರಿಯನು ದಕ್ಷಿಣದ ಬಿರುಗಾಳಿಯೊಂದಿಗೆ ಮುನ್ನುಗ್ಗುವನು.


ಸಿಯೋನಿನ ಯಾವ ನಿವಾಸಿಯೂ, “ನಾನು ಅಸ್ವಸ್ಥನು” ಎಂದು ಹೇಳನು, ಅಲ್ಲಿಯ ಜನರ ಪಾಪವು ಪರಿಹಾರವಾಗುವುದು.


ಬಲಾಢ್ಯ ವೀರರಾಗುವರು ಎಫ್ರಯಿಮ್ ಕುಲದವರು ದ್ರಾಕ್ಷಾರಸ ಕುಡಿದವರಂತೆ ಮನದಲ್ಲಿ ಸುಖಿಸುವರು. ಇದಕಂಡು ಸಂತೋಷಿಸುವರು ಅವರ ಕುವರಕುವರಿಯರು ಸರ್ವೇಶ್ವರಸ್ವಾಮಿಯಲಿ ಹೃತ್ಪೂರ್ವಕವಾಗಿ ಆನಂದಗೊಳ್ಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು