ಜೆಕರ್ಯ 12:3 - ಕನ್ನಡ ಸತ್ಯವೇದವು C.L. Bible (BSI)3 ಆ ದಿನದಂದು ಜೆರುಸಲೇಮನ್ನು ಭಾರಿ ಬಂಡೆಯನ್ನಾಗಿ ಮಾಡುವೆನು. ಅದನ್ನು ಎತ್ತಲು ಯತ್ನಿಸುವವರೆಲ್ಲರಿಗೂ ತೀವ್ರ ಗಾಯವಾಗುವುದು. ವಿಶ್ವದ ರಾಷ್ಟ್ರಗಳು ಅದನ್ನು ಎತ್ತಿಹಾಕಲು ಕೂಡಿಬರುವುವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಆ ದಿನದಲ್ಲಿ ನಾನು ಯೆರೂಸಲೇಮನ್ನು ಸಮಸ್ತ ಜನಗಳಿಗೂ, ಭಾರೀ ಬಂಡೆಯನ್ನಾಗಿ ಮಾಡುವೆನು; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಲೋಕದ ಸಕಲ ರಾಜ್ಯಗಳು ಅದನ್ನೆತ್ತಿ ಹಾಕಲು ಕೂಡಿಬರುವವು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಆ ದಿನದಲ್ಲಿ ನಾನು ಯೆರೂಸಲೇಮನ್ನು ಸಮಸ್ತಜನಗಳಿಗೂ ಭಾರೀ ಬಂಡೆಯನ್ನಾಗಿ ಮಾಡುವೆನು; ಅದನ್ನೆತ್ತುವವರೆಲ್ಲರಿಗೂ ಕಡುಗಾಯವಾಗುವದು; ಲೋಕದ ಸಕಲ ರಾಜ್ಯಗಳು ಅದನ್ನೆತ್ತಿಹಾಕಲು ಕೂಡಿಬರುವವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಆದರೆ ನಾನು ಜೆರುಸಲೇಮನ್ನು ಒಂದು ಭಾರವಾದ ಬಂಡೆ ಕಲ್ಲಿನಂತೆ ಮಾಡುವೆನು. ಅದನ್ನು ತೆಗೆಯಲು ಯತ್ನಿಸುವವನು ಗಾಯಗೊಳ್ಳುವನು. ಆದರೂ ಲೋಕದ ಎಲ್ಲಾ ದೇಶಗಳವರು ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಬರುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಆ ದಿವಸದಲ್ಲಿ, ಅವಳ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವಾಗ, ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಚಲಿಸಲಾಗದ ಕಲ್ಲಾಗಿ ಮಾಡುತ್ತೇನೆ. ಅದನ್ನು ತೆಗೆದುಹಾಕಲು ಪ್ರಯತ್ನಿಸುವವರೆಲ್ಲರು ತಮ್ಮನ್ನು ತಾವೇ ಗಾಯಗೊಳಿಸಿಕೊಳ್ಳುತ್ತಾರೆ. ಅಧ್ಯಾಯವನ್ನು ನೋಡಿ |