Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 12:13 - ಕನ್ನಡ ಸತ್ಯವೇದವು C.L. Bible (BSI)

13 ಲೇವಿ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ; ಶಿಮ್ಮಿಯ ಸಂತಾನದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಲೇವಿ ವಂಶದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು, ಗಂಡಸರು ಬೇರೆ ಬೇರೆ; ಶಿಮ್ಮಿಯ ಸಂತಾನದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು, ಗಂಡಸರು ಬೇರೆ ಬೇರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಲೇವಿ ವಂಶದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು ಗಂಡಸರು ಬೇರೆ ಬೇರೆ; ಶಿಮ್ಮಿಯ ಸಂತಾನದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು ಗಂಡಸರು ಬೇರೆ ಬೇರೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಲೇವಿಯ ಸಂತಾನದ ಜನರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. ಶಿಮ್ಮಿಯ ಸಂತಾನದವರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಲೇವಿಯರ ಮನೆತನದ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ; ಶಿಮ್ಮೀಯನ ಕುಲವು ಪ್ರತ್ಯೇಕ, ಅವರ ಹೆಂಡತಿಯರು ಪ್ರತ್ಯೇಕ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 12:13
16 ತಿಳಿವುಗಳ ಹೋಲಿಕೆ  

ಮತ್ತನ್ಯ, ಹೇಮಾನ್ಯರಲ್ಲಿ ಯೆಹೀಯೇಲ್, ಶಿಮ್ಮೀ, ಯೆದೂತೂನ್ಯರಲ್ಲಿ ಶೆಮಾಯ ಹಾಗು ಉಜ್ಜೀಯೇಲ್


ಶಿಮ್ಮೀಗೆ ಯಹತ್, ಜೀನ, ಯೆಯೂಷ್, ಬೆರೀಯ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.


ಗೇರ್ಷೋನ್ಯರ ಮೂಲಪುರುಷರು ಲದ್ದಾನ್ ಹಾಗೂ ಶಿಮ್ಮೀ ಎಂಬವರು.


ಶಿಮ್ಮಿಗೆ ಹದಿನಾರು ಜನ ಗಂಡುಮಕ್ಕಳೂ ಆರುಜನ ಹೆಣ್ಣುಮಕ್ಕಳೂ ಇದ್ದರು. ಆದರೆ ಅವನ ಸಹೋದರರಿಗೆ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿದ್ದುದರಿಂದ ಯೆಹೂದ ಕುಲದಷ್ಟು ಸಿಮೆಯೋನನ ಕುಲ ಬೆಳೆಯಲಿಲ್ಲ.


ಪೆದಾಯನಿಗೆ ಜೆರುಬ್ಬಾಬೆಲ್ ಮತ್ತು ಶಿಮ್ಮೀ ಎಂಬಿಬ್ಬರು ಮಕ್ಕಳಿದ್ದರು. ಜೆರುಬ್ಬಾಬೆಲನಿಗೆ ಮೆಷುಲ್ಲಾಮ್, ಹನನ್ಯ ಎಂಬ ಇಬ್ಬರು ಗಂಡುಮಕ್ಕಳು ಹಾಗೂ ಶೆಲೋಮೀತ್ ಎಂಬ ಮಗಳೂ ಇದ್ದಳು.


ಆದರೆ ಯಾಜಕ ಚಾದೋಕ್, ಯೆಹೋಯಾದಾವನ ಮಗ ಬೆನಾಯ, ಪ್ರವಾದಿ ನಾತಾನ್, ಶಿಮ್ಮೀ, ರೇಗೀ ಎಂಬವರೂ ದಾವೀದನ ವಿಶೇಷ ಕಾವಲಾಳುಗಳೂ ಅದೋನಿಯನನ್ನು ಬೆಂಬಲಿಸಲಿಲ್ಲ.


ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ ಗೇರನ ಮಗನೂ ಆದ ಶಿಮ್ಮೀ ಎಂಬವನು ದಾವೀದನನ್ನು ಶಪಿಸುತ್ತಾ ಆ ಊರಿನಿಂದ ಹೊರಗೆ ಬಂದನು.


ನಾಡೆಲ್ಲ ಗೋಳಾಡುವುದು, ಒಂದೊಂದು ಕುಟುಂಬವೂ ಪ್ರತ್ಯೇಕವಾಗಿ ಗೋಳಾಡುವುದು. “ದಾವೀದ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ; ನಾತಾನ ವಂಶದ ಕುಟುಂಬವೇ ಬೇರೆಯಾಗಿ, ಅದರಲ್ಲಿನ ಗಂಡಸರು ಹೆಂಗಸರು ಬೇರೆಬೇರೆಯಾಗಿ;


ಮಿಕ್ಕ ಕುಟುಂಬಗಳೆಲ್ಲ ಬೇರೆಯಾಗಿ, ಅವುಗಳ ಗಂಡಸರು ಹೆಂಗಸರು ಬೇರೆಬೇರೆಯಾಗಿ; ಹೀಗೆ ಎಲ್ಲರು ಗೋಳಾಡುವರು ಬೇರೆಬೇರೆಯಾಗಿ.”


ಇವರು ಗೋತ್ರಸ್ಥಾಪಕರು. ಗೋತ್ರಸ್ಥಾಪಕ ಗೇರ್ಷೋನನ ಮಕ್ಕಳು - ಲಿಬ್ನಿ, ಶಿಮ್ಮೀ ಎಂಬುವರು.


ಗೋತ್ರಸ್ಥಾಪಕ ಕೆಹಾತನ ಮಕ್ಕಳು - ಅಮ್ರಾಮ್, ಇಚ್ಛಾರ್, ಹೆಬ್ರೋನ್, ಉಜ್ಜೀಯೇಲ್ ಎಂಬುವರು.


ಮೆರಾರಿಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ಗೋತ್ರ ಕುಟುಂಬಗಳ ಪ್ರಕಾರ ಇವರೇ ಲೇವಿಯ ವಂಶದವರು.


ಗೇರ್ಷೋನ್ ವಂಶದವರಲ್ಲಿ ಲಿಬ್ನೀ ಗೋತ್ರದವರು ಶಿಮ್ಮೀ ಗೋತ್ರದವರೂ ಇದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು