Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 1:20 - ಕನ್ನಡ ಸತ್ಯವೇದವು C.L. Bible (BSI)

20 ಅನಂತರ ಸರ್ವೇಶ್ವರ ನನಗೆ ನಾಲ್ಕುಮಂದಿ ಸುತ್ತಿಗೆ ಹಿಡಿದವರನ್ನು ತೋರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅನಂತರ ಯೆಹೋವನು ನನಗೆ ನಾಲ್ಕು ಮಂದಿ ಕಮ್ಮಾರರನ್ನು ತೋರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಅನಂತರ ಯೆಹೋವನು ನನಗೆ ನಾಲ್ಕು ಮಂದಿ ಕಮ್ಮಾರರನ್ನು ತೋರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಯೆಹೋವನು ನನಗೆ ನಾಲ್ಕು ಮಂದಿ ಕೆಲಸಗಾರರನ್ನು ತೋರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆಗ ಯೆಹೋವ ದೇವರು ನನಗೆ ನಾಲ್ಕು ಕಮ್ಮಾರರನ್ನು ತೋರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 1:20
13 ತಿಳಿವುಗಳ ಹೋಲಿಕೆ  

ಉದ್ಧಾರಕನು ಏಸಾವಿನ ಪರ್ವತವನ್ನು ಆಳಲು ಸಿಯೋನ್ ಪರ್ವತವನ್ನು ಏರುವನು. ಆಗ ರಾಜ್ಯಭಾರವು ಸರ್ವೇಶ್ವರಸ್ವಾಮಿಯದಾಗಿರುವುದು.”


ಎಂದೇ ನೀವಿತ್ತಿರಿ ಅವರನು ಕ್ರೂರ ಶತ್ರುಗಳ ವಶಕೆ ಆದರೆ ಸಂಕಟದಲಿ ಮೊರೆಯಿಡಲು, ಪರದಿಂದ ಕಿವಿಗೊಟ್ಟಿರವರಿಗೆ! ರಕ್ಷಕರನು ಕಳುಹಿಸಿದಿರಿ ಕರುಣಾತಿಶಯದಿಂದ ಈ ಪರಿ ಬಿಡಿಸಿದಿರಿ ವಿರೋಧಿಗಳ ಕೈಯಿಂದ.


ಆಗ ಸರ್ವೇಶ್ವರ ಯೆರುಬ್ಬಾಳ್, ಬಾರಾಕ್, ಯೆಫ್ತಾಹ, ಸಮುವೇಲ್ ಇವರನ್ನು ಕಳುಹಿಸಿ ನಿಮ್ಮನ್ನು ಎಲ್ಲಾ ಶತ್ರುಗಳ ಕೈಯಿಂದ ತಪ್ಪಿಸಿ ಸುರಕ್ಷಿತವಾಗಿ ವಾಸಿಸುವಂತೆ ಮಾಡಿದರು.


ಅನಂತರ ಅವರು ಮರುಭೂಮಿಯಲ್ಲಿ ಪ್ರಯಾಣ ಮಾಡಿ ಎದೋಮ್, ಮೋವಾಬ್ ದೇಶಗಳನ್ನು ಸುತ್ತಿಕೊಂಡು ಮೋವಾಬ್ ದೇಶದ ಪೂರ್ವದಿಕ್ಕಿಗೆ ಬಂದು ಅದರ ಮೇರೆಯಾಗಿರುವ ಅರ್ನೋನ್ ನದಿಯ ಆಚೆಯಲ್ಲಿ ಇಳಿದುಕೊಂಡರು; ಮೋವಾಬ್ಯರ ಮೇರೆಯೊಳಗೆ ಕಾಲು ಇಡಲಿಲ್ಲ.


ಅವರು ಈಜಿಪ್ಟರ ನಾಡನ್ನು ಬಿಟ್ಟ ನಂತರ ಮರುಭೂಮಿಯಲ್ಲಿ ಸಂಚರಿಸಿ ಕೆಂಪುಸಮುದ್ರಕ್ಕೂ ಅನಂತರ ಕಾದೇಶಿಗೂ ಬಂದರು.


ನಿನ್ನ ಕೋಟೆಯ ಬಾಗಿಲು ಕಬ್ಬಿಣದವು ಅವುಗಳ ಅಗುಳಿಗಳು ಕಂಚಿನವು ನೀನಿರುವಷ್ಟು ಕಾಲ ನಿನಗಿರುವುದು ಬಲವು.”


ಕಮ್ಮಾರನು ಮುಟ್ಟನ್ನು ತೆಗೆದುಕೊಂಡು ಕೆಂಡದಲ್ಲಿ ಕೆಲಸ ಮಾಡುತ್ತಾನೆ; ಬಲವಾದ ತೋಳಿನಿಂದ ಚಮಟಿಕೆ ಹಿಡಿದು ಬಡಿದು ವಿಗ್ರಹವನ್ನು ರೂಪಿಸುತ್ತಾನೆ; ಹಸಿದು ಬಳಲುತ್ತಾನೆ, ಬಾಯಾರಿ ಸೊರಗುತ್ತಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು