ಚೆಫನ್ಯ 3:5 - ಕನ್ನಡ ಸತ್ಯವೇದವು C.L. Bible (BSI)5 ಆದರೆ ಅದರ ಮಧ್ಯೆಯಿರುವ ಸರ್ವೇಶ್ವರ ನ್ಯಾಯಸ್ವರೂಪಿ, ಎಂದಿಗೂ ಅನ್ಯಾಯ ಮಾಡುವುದಿಲ್ಲ. ದಿನದಿನವೂ ತಪ್ಪದೆ ನ್ಯಾಯ ದೊರಕಿಸುತ್ತಾರೆ. ಅವರಿಗೆ ಗುಟ್ಟಾಗಿರುವುದು ಯಾವುದೂ ಇಲ್ಲ. ಅನ್ಯಾಯಮಾಡುವವನಿಗಾದರೋ ನಾಚಿಕೆ ಎಂಬುದೇ ಇಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಅದರ ಮಧ್ಯ ನೆಲೆಗೊಂಡಿರುವ ಯೆಹೋವನು ನೀತಿಸ್ವರೂಪನು; ಎಂದಿಗೂ ಅನ್ಯಾಯವನ್ನು ಮಾಡನು; ಪ್ರತಿ ಬೆಳಿಗ್ಗೆ ತನ್ನ ನ್ಯಾಯವನ್ನು ತಪ್ಪದೆ ಪ್ರಕಾಶಗೊಳಿಸುವನು; ಅನ್ಯಾಯಗಾರನೋ ನಾಚಿಕೆಪಡುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಅದರ ಮಧ್ಯೆ ನೆಲೆಗೊಂಡಿರುವ ಯೆಹೋವನು ನ್ಯಾಯಸ್ವರೂಪನು; ಎಂದಿಗೂ ಅನ್ಯಾಯವನ್ನು ಮಾಡನು; ಬೆಳಬೆಳಿಗ್ಗೆ ತನ್ನ ನ್ಯಾಯವನ್ನು ತಪ್ಪದೆ ಪ್ರಕಾಶಗೊಳಿಸುವನು; ಅನ್ಯಾಯಗಾರನೋ ನಾಚಿಕೆಪಡನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಆದರೆ ದೇವರು ಇನ್ನೂ ಆ ನಗರದಲ್ಲಿದ್ದಾನೆ. ಅವರಿಗೆ ಇನ್ನೂ ಒಳ್ಳೆಯದನ್ನೇ ಮಾಡುತ್ತಿದ್ದಾನೆ. ಆತನು ತಪ್ಪು ಕಾರ್ಯಗಳನ್ನು ಮಾಡುವವನಲ್ಲ. ತನ್ನ ಜನರಿಗೆ ಸಹಾಯ ಮಾಡುತ್ತಿರುತ್ತಾನೆ. ಪ್ರತಿ ದಿನವೂ ಸರಿಯಾದ ತೀರ್ಮಾನ ಮಾಡಲು ತನ್ನ ಜನರಿಗೆ ಸಹಾಯ ಮಾಡುತ್ತಾನೆ. ಆದರೆ ಆ ದುಷ್ಟಜನರು ತಮ್ಮ ದುಷ್ಟತನಕ್ಕಾಗಿ ನಾಚಿಕೆಪಡುತ್ತಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ನೀತಿಯುಳ್ಳ ಯೆಹೋವ ದೇವರು ಅವಳ ಮಧ್ಯದಲ್ಲಿ ಇದ್ದಾರೆ. ಅವರು ಅನ್ಯಾಯ ಮಾಡುವುದಿಲ್ಲ; ಪ್ರತಿ ಬೆಳಿಗ್ಗೆ ತಮ್ಮ ನ್ಯಾಯತೀರ್ಪನ್ನು ಬೆಳಕಿಗೆ ತರುತ್ತಾರೆ; ಅವರು ತಪ್ಪುವವರಲ್ಲ. ಆದರೆ ಅನ್ಯಾಯವಂತನು ನಾಚಿಕೆಯನ್ನು ಅರಿಯನು. ಅಧ್ಯಾಯವನ್ನು ನೋಡಿ |