ಚೆಫನ್ಯ 3:19 - ಕನ್ನಡ ಸತ್ಯವೇದವು C.L. Bible (BSI)19 ಆ ದಿನದಲಿ ಇಂತೆನ್ನುವನು: “ದಂಡಿಸುವೆನು ನಿನ್ನನು ಬಾಧಿಸಿದವರನು ಉದ್ಧರಿಸುವೆನು ನಿನ್ನಲ್ಲಿ ಕುಂಟುವವರನು ಒಂದುಗೂಡಿಸುವೆನು ಚದರಿಹೋದವರನು ಬರಮಾಡುವೆನು ಅವಮಾನಿತರಿಗೆ ಸನ್ಮಾನವನು ಗಿಟ್ಟಿಸುವೆನು ನಿಮಗೆ ಜಗದಲ್ಲೆಲ್ಲ ಕೀರ್ತಿಯನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಆಹಾ, ಆ ಕಾಲದಲ್ಲಿ ನಿನ್ನನ್ನು ಬಾಧಿಸುವವರಿಗೆ ತಕ್ಕದ್ದನ್ನು ಮಾಡುವೆನು; ನಿನ್ನಲ್ಲಿ ಕುಂಟುವವರನ್ನು ರಕ್ಷಿಸುವೆನು, ಚದರಿ ಹೋದವರನ್ನು ಕೂಡಿಸುವೆನು; ಅಂತು ಲೋಕದಲ್ಲೆಲ್ಲಾ ಅವಮಾನಪಟ್ಟವರಿಗೆ ಸ್ತೋತ್ರ ಕೀರ್ತನೆಗಳನ್ನು ಉಂಟುಮಾಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಆಹಾ, ಆ ಕಾಲದಲ್ಲಿ ನಿನ್ನನ್ನು ಬಾಧಿಸುವವರಿಗೆ ತಕ್ಕದ್ದನ್ನು ಮಾಡುವೆನು; ನಿನ್ನಲ್ಲಿ ಕುಂಟುವವರನ್ನು ಉದ್ಧರಿಸುವೆನು, ಚದರಿಸಲ್ಪಟ್ಟವರನ್ನು ಕೂಡಿಸುವೆನು; ಅಂತು ಲೋಕದಲ್ಲೆಲ್ಲಾ ಅವಮಾನಪಟ್ಟವರಿಗೆ ಸ್ತೋತ್ರಕೀರ್ತಿಗಳನ್ನು ಉಂಟುಮಾಡುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಆ ಸಮಯದಲ್ಲಿ, ನಿನಗೆ ಕೇಡುಮಾಡುವವರನ್ನು ಶಿಕ್ಷಿಸುವೆನು. ಗಾಯಗೊಂಡಿರುವ ನಿನ್ನ ಜನರನ್ನು ರಕ್ಷಿಸುವೆನು. ತಮ್ಮ ದೇಶದಿಂದ ದೂರಕ್ಕೆ ಚದರಿಸಲ್ಪಟ್ಟ ಜನರನ್ನು ನಾನು ಹಿಂದಕ್ಕೆ ಕರೆದುಕೊಂಡು ಬರುವೆನು. ನಾನು ಅವರನ್ನು ಪ್ರಸಿದ್ಧಿಪಡಿಸುವೆನು. ಎಲ್ಲಾ ಜನರು ಅವರನ್ನು ಹೊಗಳುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಆ ಕಾಲದಲ್ಲಿ ನಿನ್ನನ್ನು ಪೀಡಿಸುವವರನ್ನೆಲ್ಲಾ ದಂಡಿಸುವೆನು, ಕುಂಟಾದದ್ದನ್ನು ರಕ್ಷಿಸಿ, ಚದರಿಹೋದವರನ್ನು ಕೂಡಿಸುವೆನು; ಅವರು ಅವಮಾನ ಹೊಂದಿದ ದೇಶಗಳಲ್ಲೆಲ್ಲಾ ಅವರಿಗೆ ಹೊಗಳಿಕೆಯನ್ನೂ ಕೀರ್ತಿಯನ್ನೂ ಉಂಟುಮಾಡುವೆನು. ಅಧ್ಯಾಯವನ್ನು ನೋಡಿ |