Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಚೆಫನ್ಯ 1:18 - ಕನ್ನಡ ಸತ್ಯವೇದವು C.L. Bible (BSI)

18 ಸ್ವಾಮಿಯ ಆ ರೌದ್ರದಿನದಂದು, ಅವರ ಬೆಳ್ಳಿಯಾಗಲೀ ಬಂಗಾರವಾಗಲೀ ಅವರನ್ನು ರಕ್ಷಿಸಲಾರದು. ಸ್ವಾಮಿಯ ರೋಷಾಗ್ನಿ ಧರೆಯನ್ನೆಲ್ಲಾ ದಹಿಸಿಬಿಡುವುದು; ಹೌದು, ಭೂನಿವಾಸಿಗಳೆಲ್ಲರನ್ನೂ ತಟ್ಟನೆ ಕೊನೆಗಾಣಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿ, ಬಂಗಾರಗಳೂ ಕೂಡಾ ಅವರನ್ನು ರಕ್ಷಿಸಲಾರವು; ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವುದು; ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು, ಹೌದು, ಘೋರವಾಗಿ ನಿರ್ಮೂಲಮಾಡುವನು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿಬಂಗಾರಗಳು ಕೂಡಾ ಅವರನ್ನು ರಕ್ಷಿಸಲಾರವು; ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವದು; ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು, ಹೌದು, ಘೋರವಾಗಿ ನಿರ್ಮೂಲ ಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಅವರ ಬೆಳ್ಳಿಬಂಗಾರಗಳು ಅವರ ಸಹಾಯಕ್ಕೆ ಬಾರವು. ಆ ಸಮಯದಲ್ಲಿ ಯೆಹೋವನು ಕೋಪಾಗ್ನಿಯಿಂದ ತುಂಬಿದವನಾಗುವನು. ಯೆಹೋವನು ಇಡೀ ಪ್ರಪಂಚವನ್ನೇ ನಾಶಮಾಡುವನು. ಭೂಮಿಯ ಮೇಲಿರುವ ಪ್ರತಿಯೊಬ್ಬನನ್ನು ಯೆಹೋವನು ಸಂಪೂರ್ಣವಾಗಿ ನಾಶಮಾಡುವನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಯೆಹೋವ ದೇವರ ರೌದ್ರದಿನದಂದು ಅವರ ಬೆಳ್ಳಿಯಾದರೂ ಅವರ ಬಂಗಾರವಾದರೂ ಅವರನ್ನು ರಕ್ಷಿಸಲಾರವು.” ಅವರ ಅಸೂಯೆಯ ಬೆಂಕಿಯು ದೇಶವನ್ನೆಲ್ಲಾ ನುಂಗುವುದು. ಏಕೆಂದರೆ ದೇಶದ ನಿವಾಸಿಗಳನ್ನೆಲ್ಲಾ ಬೇಗ ನಿರ್ಮೂಲ ಮಾಡಿಬಿಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಚೆಫನ್ಯ 1:18
40 ತಿಳಿವುಗಳ ಹೋಲಿಕೆ  

ಆದುದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: “ಸ್ವಲ್ಪತಾಳಿರಿ, ನಾನು ತಪ್ಪನ್ನು ನಿಮಗೆ ತೋರಿಸುವ ದಿನಕ್ಕಾಗಿ ಕಾದಿರಿ. ರಾಷ್ಟ್ರಗಳನ್ನು ಒಂದಾಗಿಸಲು, ರಾಜ್ಯಗಳನ್ನು ಒಂದುಗೂಡಿಸಲು ನಿರ್ಧರಿಸಿದ್ದೇನೆ; ಹೀಗೆ ಅವುಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನು ಸುರಿಸಲು ತೀರ್ಮಾನಿಸಿದ್ದೇನೆ. ಲೋಕವೆಲ್ಲವು ನನ್ನ ಕೋಪಾಗ್ನಿಯಿಂದ ಧ್ವಂಸವಾಗುವುದು.


ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರ ಅಶುದ್ಧ ಪದಾರ್ಥದಂತಿರುವುದು; ಸರ್ವೇಶ್ವರ ರೋಷವನ್ನು ತೀರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರ ಅವರನ್ನು ರಕ್ಷಿಸಲಾರದು; ಅವರ ಇಷ್ಟಾರ್ಥ ನೆರವೇರದು, ಅವರ ಹೊಟ್ಟೆ ತುಂಬದು; ಏಕೆಂದರೆ ಅವರ ಆಸ್ತಿ ಅವರಿಗೆ ಪಾಪಕ್ಕೆ ಕಾರಣವಾಗಿತ್ತು.


ತೀರ್ಪಿನ ದಿನ ನೆರವಾಗದು ಆಸ್ತಿಪಾಸ್ತಿ; ಸನ್ನಡತೆಯಿಂದಲೆ ಮರಣದಿಂದ ವಿಮುಕ್ತಿ.


ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?


“ನಾನು ಸೃಷ್ಟಿಸಿದ ಮಾನವರನ್ನು ಈ ಜಗದಿಂದ ಅಳಿಸಿಬಿಡುತ್ತೇನೆ, ಅವರೊಂದಿಗೆ ಪ್ರಾಣಿಪಕ್ಷಿಗಳನ್ನು, ಕ್ರಿಮಿಕೀಟಗಳನ್ನು ಅಳಿಸಿಹಾಕುತ್ತೇನೆ. ಅವುಗಳನ್ನು ಉಂಟುಮಾಡಿದ್ದಕ್ಕಾಗಿ ನನಗೆ ದುಃಖವಾಗುತ್ತಿದೆ,” ಎಂದುಕೊಂಡರು.


ಅದು ರೌದ್ರದ ದಿನ, ಕಷ್ಟ - ಸಂಕಟದ ದಿನ, ನಾಶವಿನಾಶದ ದಿನ, ಕತ್ತಲು ಕಾರ್ಗತ್ತಲ ದಿನ, ಕಾರ್ಮುಗಿಲು ಕವಿದ ಕರಾಳ ದಿನ;


ಆಗ ಪಟ್ಟಣದ ಸಂತೆಬೀದಿಗಳಲ್ಲಿ ವಾಸಮಾಡುವವರು ಅತ್ತು ಪ್ರಲಾಪಿಸಲಿ; ವ್ಯಾಪಾರಸ್ಥರೆಲ್ಲರೂ ಸತ್ತುಹೋಗಿರುವರು; ಅಕ್ಕಸಾಲಿಗರೆಲ್ಲರೂ ಕಣ್ಮರೆಯಾಗಿರುವರು.


ವ್ಯಭಿಚಾರಮಾಡುವಂಥ, ರಕ್ತ ಹರಿಸುವಂಥ ಹೆಂಗಸರಿಗೆ ವಿಧಿಸತಕ್ಕ ದಂಡನೆಗಳನ್ನು ನಾನು ನಿನಗೆ ವಿಧಿಸಿ ನನ್ನ ಕೋಪೋದ್ರೇಕವನ್ನೂ ರೋಷಾವೇಶವನ್ನೂ ರಕ್ತದಂತೆ ನಿನ್ನ ಮೇಲೆ ಸುರಿಸುವೆನು.


ಸರ್ವೇಶ್ವರ : “ಹಾಳು ದಿಬ್ಬಗಳನ್ನಾಗಿಸುವೆನು ಜೆರುಸಲೇಮನ್ನು ನರಿಗಳ ಹಕ್ಕೆಯನ್ನಾಗಿಸುವೆನು ಜುದೇಯ ಪಟ್ಟಣಗಳನ್ನು ಜನರಿಲ್ಲದ ಬೀಳುಭೂಮಿಯನ್ನಾಗಿಸುವೆನು ಅವುಗಳನ್ನು.”


“ಸರ್ವೇಶ್ವರನಾದ ನಾನು ಹೇಳುವುದನ್ನು ಗಮನಿಸಿರಿ; ಇಗೋ, ನನ್ನ ಕೋಪವೆಂಬ ರೋಷಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಕಾಡುಮರಗಳ ಮೇಲೂ ಭೂಮಿಯ ಬೆಳೆಯ ಮೇಲೂ ಅದನ್ನು ಕಾರುವೆನು. ಅದು ಆರದೆ ದಹಿಸುವುದು!”


ಇಂತಿರಲು ಒಡೆಯರು, ಸೇನಾಧೀಶ್ವರರು, ಇಸ್ರಯೇಲರ ಪರಾಕ್ರಮಿಯು ಆದ ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ ನನ್ನ ಶತ್ರುಗಳಾದ ನಿಮ್ಮ ಮೇಲೆ ಸೇಡು ತೀರಿಸುವೆನು. ನನ್ನ ವಿರೋಧಿಗಳಾದ ನಿಮ್ಮನ್ನು ಸದೆಬಡಿದು ಶಾಂತನಾಗಿರುವೆನು.


ಬೇಸರಗೊಳಿಸಿದರು ತಮ್ಮ ಪೂಜಾಸ್ಥಾನಗಳಿಂದ I ರೇಗಿಸಿದರಾತನನು ಕೆತ್ತನೆಯ ವಿಗ್ರಹಗಳಿಂದ II


ಯೆಹೂದ್ಯರು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು. ತಮ್ಮ ಪಿತೃಗಳಿಗಿಂತಲೂ ದುಷ್ಟರಾಗಿ ಸರ್ವೇಶ್ವರನನ್ನು ರೇಗಿಸಿದರು.


ಆಗ ನಾನು ಅವರ ಮೇಲೆ ಬಹಳ ಸಿಟ್ಟುಗೊಂಡು, ಅವರನ್ನು ಬಿಟ್ಟು, ಅವರಿಗೆ ವಿಮುಖನಾಗುವೆನು. ಆದುದರಿಂದ ಅವರು ಸಂಹಾರಕ್ಕೆ ಗುರಿಯಾಗುವರು; ಅನೇಕ ಕಷ್ಟಗಳೂ ವಿಪತ್ತುಗಳೂ ಅವರಿಗೆ ಒದಗುವುವು. ಆಗ ಅವರು, ‘ನಮ್ಮ ದೇವರು, ನಮ್ಮ ಮಧ್ಯೆ ಇಲ್ಲದೆ ಹೋದುದರಿಂದಲೇ ಈ ವಿಪತ್ತುಗಳೆಲ್ಲಾ ನಮಗೆ ಸಂಭವಿಸಿವೆ,’ ಎಂದುಕೊಳ್ಳುವರು.


ಐಶ್ವರ್ಯವಂತನಿಗೆ ಹಣವೆ ಬಲವಾದ ಕೋಟೆ; ಅದುವೇ ಎತ್ತರವಾದ ಪೌಳಿಗೋಡೆ.


ನಿನ್ನ ಕೋಪತಾಪ ಹೇ ಪ್ರಭೂ, ಇನ್ನೆಷ್ಟರವರೆಗೆ? I ಉರಿಯುತ್ತಿರಬೇಕೆ ಸದಾ ನಿನ್ನ ರೋಷಾಗ್ನಿಯ ಧಗೆ? II


ದುರುಳನು ಆಪತ್ತಿನಾ ದಿನ ಸುರಕ್ಷಿತನಾಗಿರುತ್ತಾನೆ ದೇವರ ಆ ಕೋಪೋದ್ರೇಕದ ದಿನ ಆಶ್ರಯ ಪಡೆಯುತ್ತಾನೆ.


ನಾವು ಪ್ರಭುವನ್ನು ಅಸೂಯೆಗೆಬ್ಬಿಸಬಹುದೇ? ಅವರಿಗಿಂತ ನಾವು ಬಲಾಢ್ಯರೇ?


ಜುದೇಯದ ಪಟ್ಟಣಗಳಲ್ಲಿಯೂ ಜೆರುಸಲೇಮಿನ ಬೀದಿಗಳಲ್ಲಿಯೂ ಹರ್ಷಾಡಂಬರಗಳು ಕೇಳಿಬರುವುದಿಲ್ಲ. ವಧೂವರರ ಸೊಲ್ಲನ್ನು ನಿಲ್ಲಿಸಿಬಿಡುವೆನು, ನಾಡಿಗೆ ನಾಡೇ ಹಾಳಾಗುವುದು. ಇದು ಸರ್ವೇಶ್ವರನಾದ ನನ್ನ ನುಡಿ.”


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಅಯ್ಯೋ, ಕೇಡು, ಎಂದೂ ಕಾಣದ ಕೇಡು, ಇಗೋ ಬಂದಿತು;


ಹಿಂಸೆ ಬೆಳೆದು ಬೆಳೆದು ಕೆಡುಕಿನ ಕೋಲಾಗಿದೆ; ನಿನ್ನವರಲ್ಲಿ ಯಾರೂ ಉಳಿಯರು. ಆ ಜನಸಮೂಹದಲ್ಲೂ ಅವರ ಆಸ್ತಿಯಲ್ಲೂ ಶೇಷವೇನೂ ಇರದು; ಅವರಲ್ಲಿ ಯಾವ ಶ್ರೇಷ್ಠತೆಯೂ ನಿಲ್ಲದು.


ನಾನು ನನ್ನ ರೋಷವನ್ನು ನಿನ್ನ ಮೇಲೆ ಸುರಿಯಲು ಅವರು ನಿನ್ನಲ್ಲಿ ಕೋಪ ತೀರಿಸಿಕೊಳ್ಳುವರು; ನಿನ್ನ ಮೂಗುಕಿವಿಗಳನ್ನು ಕತ್ತರಿಸಿಬಿಡುವರು; ನಿನ್ನಲ್ಲಿ ಉಳಿದವರು ಖಡ್ಗಕ್ಕೆ ತುತ್ತಾಗುವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನ ಜನಶೇಷವು ಅಗ್ನಿಗೆ ಆಹುತಿಯಾಗುವುದು.


ಕಾಲವು ಹೊಟ್ಟಿನಂತೆ ಹಾರಿಹೋಗುವ ಮೊದಲು, ಸರ್ವೇಶ್ವರಸ್ವಾಮಿಯ ಉಗ್ರಕೋಪವು ನಿಮ್ಮ ಮೇಲೆ ಎರಗುವ ಮುಂಚೆ, ಅವರ ಸಿಟ್ಟಿನ ದಿನ ನಿಮ್ಮನ್ನು ಮುಟ್ಟುವುದಕ್ಕೆ ಮುನ್ನ ಸೇರ ಬನ್ನಿ, ಕೂಡಿ ಬನ್ನಿ.


ಮನೆಗಳಲ್ಲಿ ತಮಗಾಗಿ ಬೆಳ್ಳಿಬಂಗಾರಗಳನ್ನು ತುಂಬಿಸಿಕೊಂಡಿದ್ದ ಅಧಿಪತಿಗಳೊಡನೆ ನಾನು ಶ್ರಮಿಸುತ್ತಿದ್ದೆ.


ದಂಡನೆಯ ದಿನದಂದು ಏನು ಮಾಡುವಿರಿ? ದೂರದಿಂದ ಬರುವ ವಿನಾಶದಿಂದ ಹೇಗೆ ಪಾರಾಗುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಆಸ್ತಿಪಾಸ್ತಿಯನ್ನು ಎಲ್ಲಿ ಅವಿತಿಡುವಿರಿ?


ಇಸ್ರಯೇಲಿನ ಪರಂಜ್ಯೋತಿಯಾದ ದೇವರು ಅಗ್ನಿಯಂತಾಗುವರು; ಇಸ್ರಯೇಲಿನ ಪರಮಪಾವನ ಸ್ವಾಮಿ ಜ್ವಾಲೆಯಂತಾಗುವರು; ಅದು ಒಂದೇ ಒಂದು ದಿನದಲ್ಲಿ ಅಸ್ಸೀರಿಯರ ಮುಳ್ಳುಪೊದರುಗಳನ್ನೂ ಬಿಡದೆ ಎಲ್ಲವನ್ನೂ ದಹಿಸಿಬಿಡುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು