Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಚೆಫನ್ಯ 1:12 - ಕನ್ನಡ ಸತ್ಯವೇದವು C.L. Bible (BSI)

12 “ಆಗ ದೀಪವನ್ನು ಹಿಡಿದುಕೊಂಡು ಜೆರುಸಲೇಮನ್ನೆಲ್ಲಾ ಹುಡುಕಿಬಿಡುವೆನು. ‘ಸರ್ವೇಶ್ವರ ಮೇಲನ್ನಾಗಲಿ, ಕೇಡನ್ನಾಗಲಿ ಏನನ್ನೂ ಮಾಡುವುದಿಲ್ಲ’ ಎಂದುಕೊಳ್ಳುವ ಮದ್ಯದ ಮಡ್ಡಿಯಂಥ ಜಡ ಮನಸ್ಕರನ್ನು ದಂಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆ ಕಾಲದಲ್ಲಿ ನಾನು ದೀಪಗಳನ್ನು ಹಿಡಿದು, ಯೆರೂಸಲೇಮನ್ನೆಲ್ಲಾ ಹುಡುಕಿಬಿಡುವೆನು; ಯೆಹೋವನು ಮೇಲನ್ನಾಗಲಿ, ಕೇಡನ್ನಾಗಲಿ ಮಾಡನು ಎಂದು ಮನಸ್ಸಿನೊಳಗೆ ಅಂದುಕೊಳ್ಳುವವರಾಗಿ, ಮಡ್ಡಿಯಂತೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನು ದಂಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆ ಕಾಲದಲ್ಲಿ ನಾನು ದೀಪಗಳನ್ನು ಹಿಡಿದು ಯೆರೂಸಲೇಮನ್ನೆಲ್ಲಾ ಹುಡುಕಿಬಿಡುವೆನು; ಯೆಹೋವನು ಮೇಲನ್ನಾಗಲಿ ಕೇಡನ್ನಾಗಲಿ ಮಾಡನು ಎಂದು ಮನಸ್ಸಿನೊಳಗೆ ಅಂದುಕೊಳ್ಳುವವರಾಗಿ ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನು ದಂಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 “ಆ ಸಮಯಗಳಲ್ಲಿ ನಾನು ದೀಪವನ್ನು ಹಚ್ಚಿ ಜೆರುಸಲೇಮಿನಲ್ಲಿ ಹುಡುಕಾಡುವೆನು. ತಮ್ಮ ಸ್ವಂತ ರೀತಿಯಲ್ಲಿ ನಡೆದು ತೃಪ್ತಿಯಾಗಿರುವ ಜನರನ್ನು ಕಂಡುಕೊಳ್ಳುವೆನು. ಅವರು ಹೇಳುವುದೇನೆಂದರೆ, ‘ಯೆಹೋವನು ಏನೂ ಮಾಡುವುದಿಲ್ಲ. ಅವನು ಸಹಾಯವನ್ನೂ ಮಾಡುವುದಿಲ್ಲ. ಜನರಿಗೆ ಕೆಡುಕನ್ನೂ ಮಾಡುವುದಿಲ್ಲ.’ ಅಂಥವರನ್ನು ನಾನು ಹಿಡಿದು ಶಿಕ್ಷಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆ ಕಾಲದಲ್ಲಿ, ನಾನು ಯೆರೂಸಲೇಮನ್ನು ದೀಪಗಳಿಂದ ಹುಡುಕಿಬಿಡುವೆನು. ‘ಯೆಹೋವ ದೇವರು ಒಳ್ಳೆಯದನ್ನಾದರೂ ಕೆಟ್ಟದ್ದನ್ನಾದರೂ ಮಾಡುವುದಿಲ್ಲ’ ಎಂದುಕೊಂಡು ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನೂ ದಂಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಚೆಫನ್ಯ 1:12
19 ತಿಳಿವುಗಳ ಹೋಲಿಕೆ  

ಇಸ್ರಯೇಲಿನ ಜನರು ನಿಮ್ಮ ಸಹಾಯ ಕೋರಿ ನಿಮ್ಮನ್ನು ಹುಡುಕಿಕೊಂಡು ಬರುವಷ್ಟು ಪ್ರತಿಭಾವಂತರಾಗಿರುವವರೇ, ನಿಮಗೆ ಧಿಕ್ಕಾರ!


ಮೋವಾಬು ಚಿಕ್ಕತನದಿಂದಲೂ ನೆಮ್ಮದಿಯಾಗಿದೆ. ಅದು ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತಿದೆ. ಅದನ್ನು ಪಾತ್ರೆಯಿಂದ ಪಾತ್ರೆಗೆ ಯಾರೂ ಹೊಯ್ಯಲಿಲ್ಲ. ಅದು ಎಂದೂ ಸೆರೆಹೋಗಲಿಲ್ಲ. ಆದಕಾರಣ ಅದರ ರುಚಿ ಅದರಲ್ಲಿದೆ. ಅದರ ವಾಸನೆ ಮಾರ್ಪಡಲಿಲ್ಲ.


ಆಗ ದೇವರು ನನಗೆ, “ನರಪುತ್ರನೇ, ಇಸ್ರಯೇಲ್ ವಂಶದ ಹಿರಿಯರೆಲ್ಲರು ನಾನಾ ರೂಪಗಳಿಂದ ಚಿತ್ರಿತವಾದ ತಮ್ಮ ತಮ್ಮ ಕೊಠಡಿಗಳೊಳಗೆ, ಕತ್ತಲೆಯಲ್ಲಿ ನಡೆಸುವ ಕೆಲಸವನ್ನು ನೋಡಿದೆಯಾ? ‘ಸರ್ವೇಶ್ವರ ನಮ್ಮನ್ನು ನೋಡನು, ಸರ್ವೇಶ್ವರ ನಾಡನ್ನು ತೊರೆದುಬಿಟ್ಟಿದ್ದಾನೆ,’ ಎಂದು ಮಾತಾಡಿಕೊಳ್ಳುತ್ತಾರಷ್ಟೆ,” ಎಂಬುದಾಗಿ ಹೇಳಿದರು.


ಆಗ ಅವರು ನನಗೆ, “ಇಸ್ರಯೇಲ್ ಮತ್ತು ಯೆಹೂದ ವಂಶದವರ ಅಧರ್ಮ ತುಂಬಿಹೋಗಿದೆ; ನಾಡು ರಕ್ತಪೂರ್ಣವಾಗಿದೆ, ಪಟ್ಟಣವು ಅನ್ಯಾಯಭರಿತವಾಗಿದೆ; ಆ ವಂಶದವರು, ‘ನಮ್ಮ ನಾಡನ್ನು ಸರ್ವೇಶ್ವರ ತೊರೆದುಬಿಟ್ಟಿದ್ದಾರೆ, ಸರ್ವೇಶ್ವರ ನಮ್ಮನ್ನು ನೋಡುವುದಿಲ್ಲ’ ಎಂದು ಮಾತಾಡಿಕೊಳ್ಳುತ್ತಿದ್ದಾರೆ;


ಅವರಾಡಿಕೊಳ್ಳುತಿಹರು ಪ್ರಭು ನೋಡನೆಂದು I ಯಕೋಬ್ಯರ ಸ್ವಾಮಿದೇವ ವಿಚಾರಿಸನೆಂದು II


ಅವಳ ಮಕ್ಕಳನ್ನು ಸಂಹರಿಸದೆ ಬಿಡೆನು. ಹೃನ್ಮನಗಳನ್ನು ಪರಿಶೋಧಿಸುವಾತನು ನಾನೇ ಎಂದು ಎಲ್ಲ ಸಭೆಗಳಿಗೂ ಆಗ ಮನದಟ್ಟು ಆಗುವುದು; ನಿಮ್ಮಲ್ಲಿರುವ ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲವನ್ನು ನೀಡುತ್ತೇನೆ.


ಇವರು ತಮ್ಮ ದುರಾಶೆಗಳಿಗೆ ಬಲಿಯಾಗಿ, “ಆತನು ಮರಳಿ ಬರುವನು ಎಂಬ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ಮೃತರಾದರು; ಅಂದಿನಿಂದ ಸಮಸ್ತವೂ ಲೋಕಾದಿಯಿಂದಲೂ ಇದ್ದ ಹಾಗೆಯೇ ಇದೆಯಲ್ಲಾ,” ಎಂದು ಅಪಹಾಸ್ಯಮಾಡುವರು.


ಆದರೆ ಏಸಾವಿನ ಆಸ್ತಿಪಾಸ್ತಿ ಸಂಪೂರ್ಣವಾಗಿ ಸೂರೆಯಾಗಿದೆ.


ಸೌತೆ ತೋಟದ ಬೆದರುಗಂಬದಂತಿರುವ ಈ ಬೊಂಬೆಗಳು ಮಾತನಾಡಲಾರವು. ಅವನ್ನು ಹೊತ್ತುಕೊಂಡು ಹೋಗಬೇಕು, ಅವು ನಡೆಯಲಾರವು. ಅವುಗಳಿಗೆ ನೀವು ಅಂಜಬೇಕಾಗಿಲ್ಲ, ಅವು ಕೇಡುಮಾಡಲಾರವು; ಮೇಲುಮಾಡಲಿಕ್ಕೂ ಸಾಮರ್ಥ್ಯವಿಲ್ಲದಿರುವುವು.”


“ಸ್ವಾಮಿ ತ್ವರೆಮಾಡಲಿ, ತನ್ನ ಕಾರ್ಯವನ್ನು ತುರ್ತಾಗಿ ನಡೆಸಲಿ, ನೋಡೋಣ; ಇಸ್ರಯೇಲಿನ ಪರಮ ಪಾವನ ಸ್ವಾಮಿಯ ಯೋಜನೆ ಶೀಘ್ರವಾಗಿ ಕೈಗೂಡಲಿ, ಆಗ ಪರಿಗ್ರಹಿಸೋಣ” ಎಂದು ಹೇಳುವ ಜನರಿಗೆ ಧಿಕ್ಕಾರ !


“ದೇವನಿಲ್ಲ” ಎನ್ನುವವರು ಮನದಲಿ ದುರ್ಮತಿಗಳು I ಹೇಯ ಕೃತ್ಯವೆಸಗುವರು ಆ ಭ್ರಷ್ಟಚಾರಿಗಳು I ಒಳಿತನ್ನು ಮಾಡುವರಾರೂ ಇಲ್ಲ ಅವರೊಳು II


‘ಈ ಸರ್ವಶಕ್ತ ಎಷ್ಟರವನು : ಆತನ ಸೇವೆ ನಮಗೇಕೆ? ಆತನಿಗೆ ಪ್ರಾರ್ಥನೆಮಾಡಿ ಪ್ರಯೋಜನವೇನು?’ ಎಂದಿದ್ದಾರೆ.


“ನೀನು ಜೆರುಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಾಡಿ, ಅದರೊಳಗೆ ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗೆ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು,” ಎಂದು ಅಪ್ಪಣೆಕೊಟ್ಟರು.


“ನೀವು ನಿಮ್ಮ ಮಾತುಗಳಿಂದ ಪ್ರಭುವನ್ನು ಬೇಸರಗೊಳಿಸಿದ್ದೀರಿ. ‘ಯಾವ ವಿಷಯದಲ್ಲಿ ಅವರನ್ನು ಬೇಸರಗೊಳಿಸಿದ್ದೇವೆ?’ ಎನ್ನುತ್ತೀರೋ? ‘ಕೆಡುಕರೆಲ್ಲರೂ ದೇವರ ದೃಷ್ಟಿಯಲ್ಲಿ ಒಳ್ಳೆಯವರು. ಅವರೇ ಆತನಿಗೆ ಬೇಕಾದವರು’ ಎಂದು ಹೇಳುವುದರಿಂದ: ‘ನ್ಯಾಯ ತೀರಿಸುವ ದೇವರೆಲ್ಲಿ?’ ಎಂದು ಕೇಳುವುದರಿಂದ.”


ಸೊಕ್ಕೇರಿದ ಮುಖದಾತನು ಪ್ರಭುವನು ಅರಸುವುದಿಲ್ಲ I ಅವನ ಮನದೊಳಿದೊಂದೇ ಭಾವನೆ : “ದೇವರೇ ಇಲ್ಲ"! II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು