Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಚೆಫನ್ಯ 1:11 - ಕನ್ನಡ ಸತ್ಯವೇದವು C.L. Bible (BSI)

11 ಆಗ ಪಟ್ಟಣದ ಸಂತೆಬೀದಿಗಳಲ್ಲಿ ವಾಸಮಾಡುವವರು ಅತ್ತು ಪ್ರಲಾಪಿಸಲಿ; ವ್ಯಾಪಾರಸ್ಥರೆಲ್ಲರೂ ಸತ್ತುಹೋಗಿರುವರು; ಅಕ್ಕಸಾಲಿಗರೆಲ್ಲರೂ ಕಣ್ಮರೆಯಾಗಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಯೆರುಸಲೇಮ್ ಜಿಲ್ಲೆಯ ಮಾರುಕಟ್ಟೆಯಲ್ಲಿ ವಾಸಿಸುವವರೇ, ಕೂಗಿರಿ, ಏಕೆಂದರೆ ಎಲ್ಲಾ ವರ್ತಕರ ಜನರೆಲ್ಲಾ ಹಾಳಾದರು, ಬೆಳ್ಳಿಯ ವ್ಯಾಪಾರಿಗಳೆಲ್ಲರೂ ನಾಶವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಒರಳ ಕೇರಿಯವರೇ, ಕಿರಚಿರಿ, ಎಲ್ಲಾ ಸಾಹುಕಾರರು ಹಾಳಾದರು, ಹೊರೆಬೆಳ್ಳಿಯವರೆಲ್ಲರು ನಾಶವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನಗರದ ಕೆಳಗಿನ ಭಾಗದಲ್ಲಿರುವವರೇ, ನೀವು ಅಳುವಿರಿ. ಯಾಕೆಂದರೆ ನಿಮ್ಮಲ್ಲಿರುವ ಧನಿಕರೂ ವ್ಯಾಪಾರಸ್ತರೂ ನಾಶವಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಮಾರುಕಟ್ಟೆಗಳ ಜಿಲ್ಲೆಯಲ್ಲಿ ವಾಸಿಸುವವರೇ, ಗೋಳಾಡಿರಿ. ಏಕೆಂದರೆ ವರ್ತಕರ ಜನರೆಲ್ಲಾ ಸಂಹಾರವಾದರು. ಬೆಳ್ಳಿಯ ವ್ಯಾಪಾರಿಗಳೆಲ್ಲರೂ ನಾಶವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಚೆಫನ್ಯ 1:11
16 ತಿಳಿವುಗಳ ಹೋಲಿಕೆ  

ಐಶ್ವರ್ಯವಂತರೇ, ಕೇಳಿ: ನಿಮಗೆ ಬರಲಿರುವ ಮಹಾಕಷ್ಟಗಳಿಗಾಗಿ ಕಣ್ಣೀರಿಡಿ, ಗೋಳಾಡಿರಿ.


ನರಪುತ್ರನೇ, ಕೂಗು, ಗೋಳಾಡು, ಬಡಿದುಕೋ ಎದೆ! ಎರಗಿದೆ ಆ ಖಡ್ಗ ನನ್ನ ಜನರ ಮೇಲೆ ಇಸ್ರಯೇಲಿನ ಅರಸರೆಲ್ಲರ ಮೇಲೆ ತುತ್ತಾಗುವರು ಅದಕ್ಕೆ ಜನನಾಯಕರು ಜನರೊಂದಿಗೆ.


‘ಕುರಿಗಾಹಿಗಳೇ, ಅರಚಿಗೋಳಾಡಿ ಮೇಷಪಾಲರೇ, ಬೂದಿಯಲ್ಲಿ ಬಿದ್ದು ಹೊರಳಾಡಿ. ನಿಮ್ಮನ್ನು ವಧಿಸುವ ಕಾಲ ಬಂದಿದೆ ನಾನು ನಿಮ್ಮನ್ನು ಭಂಗಪಡಿಸುವೆ. ನೀವು ಚೂರುಚೂರಾಗುವಿರಿ ಒಡೆದುಹೋದ ಅಂದವಾದ ಪಾತ್ರೆಯಂತೆ.


ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವನ್ನು ಇಲ್ಲಿಂದ ತೆಗೆದುಕೊಂಡು ಹೊರಡಿ. ನನ್ನ ಪಿತನ ಆಲಯವನ್ನು ಸಂತೆಯನ್ನಾಗಿ ಮಾಡಬೇಡಿ,” ಎಂದು ಹೇಳಿದರು.


ಯಾಜಕರೇ, ಗೋಣಿತಟ್ಟನ್ನುಟ್ಟು ರೋದಿಸಿರಿ; ಬಲಿಪೀಠದ ಪರಿಚಾರಕರೇ, ಪ್ರಲಾಪಿಸಿರಿ; ದೇವರ ದಾಸರೇ, ಬನ್ನಿ; ಗೋಣಿತಟ್ಟನ್ನುಟ್ಟು ಜಾಗರಣೆ ಮಾಡಿರಿ. ದೇವರ ಆಲಯದಲ್ಲಿ ಧಾನ್ಯಪಾನ ನೈವೇದ್ಯಗಳು ನಿಂತುಹೋಗಿವೆ.


ಅಮಲೇರಿದವರೇ, ಎಚ್ಚರಗೊಳ್ಳಿ; ಅತ್ತು ಪ್ರಲಾಪಿಸಿರಿ; ಕುಡುಕರೇ, ರೋದಿಸಿರಿ. ದ್ರಾಕ್ಷಾಬಳ್ಳಿ ನಾಶವಾಗಿದೆ; ಇನ್ನು ದ್ರಾಕ್ಷಾರಸ ದೊರಕದು.


ವಿನಾಶದ ದೇಶವನ್ನು ಅವರು ಬಿಟ್ಟುಹೋಗಬಹುದು. ಆದರೆ ಈಜಿಪ್ಟ್ ಅವರಿಗೆ ಸ್ಮಶಾನವಾಗುವುದು.ಮೋಫ್ ಪಟ್ಟಣದಲ್ಲಿ ಅವರಿಗೆ ಸಮಾಧಿಯಾಗುವುದು. ಅವರ ಬೆಳ್ಳಿಯ ಒಡವೆಗಳು ಮುಳ್ಳುಪೊದೆಗಳ ಪಾಲಾಗುವುವು; ಅವರ ಗುಡಾರಗಳಲ್ಲಿ ಕಳೆಗಳು ಬೆಳೆಯುವುವು.


ಈ ನಿಮಿತ್ತ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ, ಅತ್ತುಗೋಳಾಡಿರಿ. ಸರ್ವೇಶ್ವರ ಸ್ವಾಮಿಯ ಕೋಪ ಅಗ್ನಿಯು ಜುದೇಯವನ್ನು ಬಿಟ್ಟುಹೋಗಿಲ್ಲ.


ಅವನು ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ ಧೂಳಿನಷ್ಟು, ವಸ್ತ್ರಗಳನು ಗುಡ್ಡೆ ಮಾಡಿಟ್ಟಿದ್ದರೂ ಮಣ್ಣಿನಷ್ಟು.


ಸಜ್ಜನರು ಧರಿಸಿಕೊಳ್ಳುವರು ಆ ವಸ್ತ್ರಗಳನು ನಿರ್ದೋಷಿಗಳು ಹಂಚಿಕೊಳ್ಳುವರು ಆ ಬೆಳ್ಳಿಯನು.


ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನರೇ, ನಿಮಗೆ ಧಿಕ್ಕಾರ! ಫಿಲಿಷ್ಟಿಯರ ನಾಡಾದ ಕಾನಾನೇ, ನಿನಗೆ ಧಿಕ್ಕಾರ! ಸರ್ವೇಶ್ವರನ ನ್ಯಾಯತೀರ್ಪು ನಿನಗೆ ವಿರುದ್ಧವಾಗಿದೆ; ನಿನ್ನಲ್ಲಿ ಯಾರೂ ಉಳಿಯದಂತೆ ಅಳಿಸಿಬಿಡುವರು.


ಜೆರುಸಲೇಮಿನಲ್ಲಿಯೂ ಜುದೇಯದಲ್ಲಿಯೂ ಇರುವ ಸಕಲ ಅಡಿಗೆಪಾತ್ರೆಗಳು ಸರ್ವೇಶ್ವರಸ್ವಾಮಿಗೆ ಸಮರ್ಪಿತವಾಗಿರುವುವು. ಬಲಿಯನ್ನರ್ಪಿಸಲು ಬರುವವರೆಲ್ಲರೂ ಬಲಿಪಶುವಿನ ಮಾಂಸವನ್ನು ಬೇಯಿಸಲು ಈ ಪಾತ್ರೆಗಳನ್ನು ಬಳಸುವರು. ಆ ದಿನ ಬಂದಾಗ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ಆಲಯದಲ್ಲಿ ಯಾವ ವರ್ತಕನೂ ಇರನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು