Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 5:18 - ಕನ್ನಡ ಸತ್ಯವೇದವು C.L. Bible (BSI)

18 ನೀವು ಪವಿತ್ರಾತ್ಮ ನಡೆಸುವ ಮಾರ್ಗದಲ್ಲಿ ನಡೆಯುವವರಾದರೆ, ಧರ್ಮಶಾಸ್ತ್ರದ ವಿಧಿನಿಯಮಗಳಿಗೆ ನೀವು ಅಧೀನರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆದರೆ ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ ಧರ್ಮಶಾಸ್ತ್ರಕ್ಕೆ ಅಧೀನರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆದರೆ ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ ನೇಮನಿಷ್ಠೆಗಳಿಗೆ ಅಧೀನರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆದರೆ ನೀವು ನಿಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಟ್ಟರೆ ನೀವು ಧರ್ಮಶಾಸ್ತ್ರದ ಅಧೀನದಲ್ಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಆದರೆ ನೀವು ದೇವರ ಆತ್ಮದಿಂದ ನಡೆಸಿಕೊಳ್ಳುವವರಾದರೆ, ನಿಯಮದ ಅಧೀನತೆಯಲ್ಲಿ ಇರುವವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

18 ಖರೆ ಪವಿತ್ರ್ ಆತ್ಮೊ ತುಮ್ಕಾ ಚಾಲ್ವುತಾ ಹೊಲ್ಯಾರ್, ತುಮಿ ಖಾಯ್ದ್ಯಾಚ್ಯಾ ಖಾಯ್ಲ್ ನಾಸಿ ಮನುನ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 5:18
18 ತಿಳಿವುಗಳ ಹೋಲಿಕೆ  

ಯಾರು ಯಾರು ದೇವರ ಆತ್ಮನಿಗೆ ಮಣಿದು ನಡೆಯುತ್ತಾರೋ ಅವರು ದೇವರ ಮಕ್ಕಳು.


ಪವಿತ್ರಾತ್ಮ ನಮ್ಮ ಜೀವಾಳವಾಗಿದ್ದರೆ, ಅವರೇ ನಮ್ಮ ಜೀವನದ ಮಾರ್ಗದರ್ಶಿಯೂ ಆಗಿರಬೇಕು.


ನಾನು ಹಿಡಿದಿರುವ ಹಾದಿ ನೀತಿಯುತ ನಾನು ನಡೆಯುವುದು ನ್ಯಾಯಪಥ.


ನನ್ನ ಆತ್ಮವನ್ನು ನಿಮ್ಮಲ್ಲಿ ನೆಲೆಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಗೊಂಡು ಆಚರಿಸುವಿರಿ.


ನಾನು ಹೇಳುವುದೇನೆಂದರೆ: ನೀವು ಪವಿತ್ರಾತ್ಮರ ಪ್ರೇರಣೆಗನುಸಾರವಾಗಿ ನಡೆದುಕೊಳ್ಳಬೇಕು. ಆಗ, ದೈಹಿಕ ವ್ಯಾಮೋಹಕ್ಕೆ ನೀವು ಈಡಾಗಲಾರಿರಿ.


ಅಂತೆಯೇ, ಪ್ರಿಯ ಸಹೋದರರೇ, ನೀವು ಕ್ರಿಸ್ತಯೇಸುವಿನ ದೇಹದೊಂದಿಗೆ ಒಂದಾಗಿರುವುದರಿಂದ ಧರ್ಮಶಾಸ್ತ್ರದ ಪಾಲಿಗೆ ಸತ್ತವರಾದಿರಿ. ಇದರ ಪರಿಣಾಮವಾಗಿ, ಮರಣದಿಂದ ಪುನರುತ್ಥಾನ ಹೊಂದಿದ ಕ್ರಿಸ್ತಯೇಸುವಿನೊಂದಿಗೆ ಬಂಧಿತರಾಗಿದ್ದೀರಿ. ಹೀಗೆ, ದೇವರಿಗೆ ನಾವು ಸತ್ಫಲವನ್ನು ಈಯುವವರಾಗಿದ್ದೇವೆ.


ಹೇಗೂ ಸತ್ಯಸ್ವರೂಪಿ ಆದ ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯುವರು. ಅವರು ತಮ್ಮಷ್ಟಕ್ಕೆ ತಾವೇ ಏನನ್ನೂ ಬೋಧಿಸದೆ ತಾವು ಕೇಳಿದುದನ್ನು ಕುರಿತೇ ಮಾತನಾಡುವರು; ಮುಂದೆ ನಡೆಯಲಿರುವುದನ್ನೂ ನಿಮಗೆ ತಿಳಿಸುವರು.


ದೇವರು ನಮಗೆ ಪ್ರದಾನಮಾಡಿರುವ ಪವಿತ್ರಾತ್ಮ ನಮ್ಮನ್ನು ಹೇಡಿಗಳನ್ನಾಗಿ ಮಾಡುವುದಿಲ್ಲ; ನಮ್ಮಲ್ಲಿ ದೈವೀಶಕ್ತಿ, ಪ್ರೀತಿ ಹಾಗೂ ಸಂಯಮಗಳು ಪ್ರವರ್ಧಿಸುವಂತೆ ಮಾಡುತ್ತಾರೆ.


ಧರ್ಮಶಾಸ್ತ್ರದ ನಿರ್ಬಂಧನೆಗಳು ಸಜ್ಜನರಿಗಲ್ಲ; ಬದಲಿಗೆ ಅಕ್ರಮಿಗಳಿಗೆ, ಅವಿಧೇಯರಿಗೆ, ಅಧರ್ಮಿಗಳಿಗೆ, ಭಕ್ತಿಹೀನರಿಗೆ, ಪಾಪಿಗಳಿಗೆ, ಅಶುದ್ಧರಿಗೆ, ಪ್ರಾಪಂಚಿಕರಿಗೆ, ಹೆತ್ತವರನ್ನು ಹತ್ಯೆಮಾಡುವವರಿಗೆ ಮತ್ತು ಕೊಲೆಗಾರರಿಗೆ.


ಆದ್ದರಿಂದ ಸಹೋದರರೇ, ನಾವು ಶರೀರ ಸ್ವಭಾವದ ಹಂಗಿನಲ್ಲಿಲ್ಲ. ಅದರ ಆಶಾಪಾಶಗಳಿಗೆ ಅನುಗುಣವಾಗಿ ಬಾಳುವ ಹಂಗಿನಲ್ಲೂ ಇಲ್ಲ.


ಇವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು