Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 5:12 - ಕನ್ನಡ ಸತ್ಯವೇದವು C.L. Bible (BSI)

12 ನಿಮಗೆ ಕಿರುಕುಳ ಕೊಡುತ್ತಿರುವವರು ತಮ್ಮ ಅಂಗಚ್ಛೇದವನ್ನಾದರೂ ಮಾಡಿಕೊಂಡರೆ ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಿಮ್ಮನ್ನು ಕಳವಳಪಡಿಸುವವರು ತಮ್ಮನೇ ತಾವು ಅಂಗಚ್ಛೇದನೆಯನ್ನಾದರೂ ಮಾಡಿಕೊಂಡರೆ ಚೆನ್ನಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಿಮ್ಮನ್ನು ಕಳವಳಪಡಿಸುವವರು ಅಂಗಚ್ಫೇದನೆಯನ್ನಾದರೂ ಮಾಡಿಕೊಂಡರೆ ವಾಸಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಿಮ್ಮನ್ನು ಕಳವಳಪಡಿಸುತ್ತಿರುವವರು ತಮಗಾಗಿರುವ ಸುನ್ನತಿಯಲ್ಲದೆ ತಮ್ಮ ಅಂಗವನ್ನೇ ಕತ್ತರಿಸಿಕೊಂಡರೆ ಒಳ್ಳೆಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನಿಮ್ಮನ್ನು ಸುನ್ನತಿ ಮಾಡಿಸಿಕೊಳ್ಳಬೇಕೆಂದು ತೊಂದರೆ ಪಡಿಸುವವರಿಗೆ ಆ ಅಂಗಚ್ಛೇದವನ್ನಾದರೂ ಮಾಡಿಕೊಂಡರೆ ಲೇಸು ಎಂದು ಬಯಸುತ್ತೇನೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ಮಿಯಾ ಮನ್ತಾ ತುಮ್ಕಾ ಗೊಂದಳಾತ್ ಘಾಲ್ತಲಿ ಲೊಕಾ ಧುರ್ ಜಾಂವ್ದಿತ್; ಅನಿ ಅಪ್ನಾಚೊ ಭಾಗುಚ್ ಕಾತ್ರುನ್ ಘೆಂವ್ದಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 5:12
18 ತಿಳಿವುಗಳ ಹೋಲಿಕೆ  

ಭಿನ್ನಾಭಿಪ್ರಾಯಗಳಿಗೆ ನೀವು ಮಣಿಯುವುದಿಲ್ಲವೆಂದು ನಿಮ್ಮನ್ನು ಕುರಿತು ಪ್ರಭುವಿನಲ್ಲಿ ನನಗೆ ದೃಢವಾದ ನಂಬಿಕೆ ಇದೆ. ನಿಮ್ಮಲ್ಲಿ ಗೊಂದಲ ಎಬ್ಬಿಸುವವನು ಯಾರೇ ಆಗಿರಲಿ, ಅವನು ದೈವದಂಡನೆಗೆ ಗುರಿಯಾಗುತ್ತಾನೆ.


ಕ್ರೈಸ್ತಸಭೆಯಲ್ಲಿ ಭೇದಭಾವ ಹುಟ್ಟಿಸುವವನಿಗೆ ಒಂದೆರಡು ಸಾರಿ ಬುದ್ಧಿಹೇಳು. ಅನಂತರ ಅವನಷ್ಟಕ್ಕೇ ಬಿಟ್ಟುಬಿಡು.


ಯೆಹೋಶುವನು ಆಕಾನನಿಗೆ, “ನೀನು ನಮ್ಮನ್ನು ಆಪತ್ತಿಗೆ ಗುರಿಮಾಡಿದ್ದೇಕೆ? ಈ ದಿನ ಸರ್ವೇಶ್ವರ ನಿನ್ನ ಮೇಲೆ ಆಪತ್ತು ಬರಮಾಡುವರು,” ಎಂದ ಕೂಡಲೆ ಇಸ್ರಯೇಲರೆಲ್ಲರೂ ಅವನನ್ನು ಕಲ್ಲೆಸೆದು ಕೊಂದರು. ಕಲ್ಲೆಸೆದದ್ದು ಮಾತ್ರವಲ್ಲ, ಅವನಿಗೆ ಇದ್ದುದೆಲ್ಲವನ್ನೂ ಬೆಂಕಿಯಿಂದ ಸುಟ್ಟರು.


ಅವರಿಗೆ ಹೀಗೆಂದು ವಿಧಿಸು: ನಿಮ್ಮಲ್ಲಿಯಾಗಲಿ, ನಿಮ್ಮ ಸಂತತಿಯವರಲ್ಲಿಯಾಗಲಿ ಯಾವನಾದರು ಅಶುದ್ಧನಾಗಿರುವಾಗ ಇಸ್ರಯೇಲರು ಸರ್ವೇಶ್ವರ ಸ್ವಾಮಿಗೆ ಮೀಸಲೆಂದು ಸಮರ್ಪಿಸುವ ಕಾಣಿಕೆಗಳ ಬಳಿಗೆ ಬಂದರೆ ಅವನನ್ನು ನನ್ನ ಸಾನ್ನಿಧ್ಯ ಸೇವೆಯಿಂದ ತೆಗೆದುಹಾಕಬೇಕು. ನಾನು ಸರ್ವೇಶ್ವರ.


ಇದರಂತೆ ತೈಲವನ್ನು ಮಾಡುವವನು ಹಾಗು ಇದನ್ನು ಯಾಜಕನಲ್ಲದವನ ಮೇಲೆ ಹಚ್ಚುವವನು ತನ್ನ ಕುಲದಿಂದ ಬಹಿಷ್ಕೃತನಾಗಬೇಕು.


ಏಳು ದಿವಸ ನೀವು ಹುಳಿರಹಿತ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲೇ ಹುಳಿಹಿಟ್ಟನ್ನೆಲ್ಲಾ ನಿಮ್ಮ ಮನೆಗಳಿಂದ ತೆಗೆದುಬಿಡಬೇಕು. ಆ ಏಳು ದಿನಗಳಲ್ಲಿ ಯಾವನಾದರೂ ಹುಳಿಬೆರಸಿದ್ದನ್ನು ತಿಂದರೆ ಅವನನ್ನು ಇಸ್ರಯೇಲರಿಂದ ಬಹಿಷ್ಕರಿಸಬೇಕು.


ಸುನ್ನತಿ ಮಾಡಿಸಿಕೊಳ್ಳದ ಗಂಡಸು ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿದವನಾದ ಕಾರಣ, ಅವನು ಕುಲದಿಂದ ಬಹಿಷ್ಕೃತನಾಗಬೇಕು.


ಗೂಢಾಚಾರರಾಗಿ ಬಂದಿದ್ದ ಕೆಲವು ಸಹೋದರರು ಅಲ್ಲಿದ್ದುದರಿಂದ ಒತ್ತಾಯ ನಡೆದೀತೆಂಬ ಶಂಕೆ ಇತ್ತು. ಇವರು ಕ್ರಿಸ್ತಯೇಸುವಿನಲ್ಲಿ ನಮಗಿರುವ ಮುಕ್ತ ಸ್ವಾತಂತ್ರ್ಯದ ಬಗ್ಗೆ ಗುಟ್ಟಾಗಿ ವಿಚಾರಿಸಲು ಬಂದಿದ್ದರು. ನಮ್ಮನ್ನು ಪುನಃ ದಾಸತ್ವದಲ್ಲಿ ಸಿಕ್ಕಿಸಬೇಕೆಂಬುದೇ ಅವರ ಉದ್ದೇಶವಾಗಿತ್ತು.


ನಮ್ಮ ಕಡೆಯ ಕೆಲವು ಜನರು ನಮ್ಮಿಂದ ಯಾವ ಆದೇಶವನ್ನೂ ಪಡೆಯದೆ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮ ಮನಸ್ಸನ್ನು ಕಲಕಿದರೆಂಬ ಸಮಾಚಾರ ನಮ್ಮ ಗಮನಕ್ಕೆ ಬಂದಿದೆ.


ಪೇತ್ರನು, “ನೀನೂ ನಿನ್ನ ಪತಿಯೂ ಸರ್ವೇಶ್ವರನ ಆತ್ಮವನ್ನು ಪರೀಕ್ಷಿಸಲು ಹವಣಿಸಿದಿರೋ? ಇಗೋ, ನಿನ್ನ ಪತಿಯನ್ನು ಸಮಾಧಿಮಾಡಿಬಂದವರ ಕಾಲಿನ ಸಪ್ಪಳ. ಅವರು ಬಾಗಿಲ ಬಳಿಯಲ್ಲೇ ಇದ್ದಾರೆ. ಅವರು ನಿನ್ನನ್ನೂ ಹೊತ್ತುಕೊಂಡು ಹೋಗುವರು,” ಎಂದನು.


ಈ ಮಾತುಗಳನ್ನು ಕೇಳಿದಾಕ್ಷಣವೇ ಅನನೀಯನು ಸತ್ತುಬಿದ್ದನು.


ಆಗ ಫರಿಸಾಯರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು, ನಮಗೇ ಬುದ್ಧಿಹೇಳಹೊರಟೆಯಾ?” ಎಂದು ಹೇಳಿ ಅವನನ್ನು ತಳ್ಳಿಬಿಟ್ಟರು.


ಆದುದರಿಂದಲೇ ಇಸ್ರಯೇಲರು ಶತ್ರುಗಳ ಮುಂದೆ ನಿಲ್ಲಲಾರದೆ ಬೆನ್ನು ತೋರಿಸಿದ್ದಾರೆ. ಅವರು ಶಾಪಗ್ರಸ್ತರೇ ಸರಿ. ಶಾಪಕ್ಕೆ ಕಾರಣವಾದುದನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕುವ ತನಕ ನಾನು ನಿಮ್ಮ ಸಂಗಡ ಬರುವುದಿಲ್ಲ.


“ಬೀಜಹೊಡಿಸಿಕೊಂಡಾಗಲಿ, ಜನನ ಇಂದ್ರಿಯ ಕತ್ತರಿಸಿಕೊಂಡಾಗಲಿ ನಪುಂಸಕರಾದವರು ಸರ್ವೇಶ್ವರನ ಸಭೆಯಲ್ಲಿ ಸೇರಬಾರದು.


ಅದಕ್ಕೆ ಲಾಬಾನನು, “ಒಳ್ಳೆಯದು, ನೀನು ಹೇಳಿದಂತೆಯೇ ಆಗಲಿ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು