ಗಲಾತ್ಯದವರಿಗೆ 3:15 - ಕನ್ನಡ ಸತ್ಯವೇದವು C.L. Bible (BSI)15 ಪ್ರಿಯ ಸಹೋದರರೇ, ದೈನಂದಿನ ಜೀವನದಿಂದ ಒಂದು ಉದಾಹರಣೆಯನ್ನೇ ತೆಗೆದುಕೊಳ್ಳೋಣ: ಒಬ್ಬನು ಮತ್ತೊಬ್ಬನೊಡನೆ ಒಂದು ಒಪ್ಪಂದ ಮಾಡಿಕೊಳ್ಳುತ್ತಾನೆ. ಕ್ರಮಬದ್ಧವಾಗಿ ಅದನ್ನು ಮಾಡಿ ಮುಗಿಸಿದ ಮೇಲೆ ಯಾರೂ ಅದನ್ನು ರದ್ದುಮಾಡುವಂತಿಲ್ಲ, ಬದಲಾಯಿಸುವಂತಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಸಹೋದರರೇ, ದೈನಂದಿನ ಜೀವನದಿಂದ ಒಂದು ದೃಷ್ಟಾಂತವನ್ನು ನಿಮಗೆ ಹೇಳುತ್ತೇನೆ, ಒಬ್ಬನು ಮತ್ತೊಬ್ಬನೊಡನೆ ಸ್ಥಿರಪಡಿಸಿದ ಒಂದು ಒಪ್ಪಂದವು ಕೇವಲ ಮನುಷ್ಯನದ್ದಾಗಿದ್ದರೂ, ಅದನ್ನು ಯಾರೂ ರದ್ದುಮಾಡುವಂತಿಲ್ಲ ಮತ್ತು ಅದಕ್ಕೆ ಏನನ್ನೂ ಸೇರಿಸುವಂತಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಸಹೋದರರೇ, ಲೋಕದ ವ್ಯವಹಾರವನ್ನು ಹಿಡಿದು ಮಾತಾಡುತ್ತೇನೆ. ಸ್ಥಿರಪಡಿಸಿದ ಒಂದು ಒಡಂಬಡಿಕೆಯು ಕೇವಲ ಮನುಷ್ಯನದಾಗಿದ್ದರೂ ಅದನ್ನು ಯಾರೂ ರದ್ದು ಮಾಡುವದಿಲ್ಲ, ಅದಕ್ಕೆ ಹೆಚ್ಚು ಮಾತುಗಳನ್ನು ಕೂಡಿಸುವದಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಸಹೋದರ ಸಹೋದರಿಯರೇ, ನಾನು ನಿಮಗೊಂದು ಉದಾಹರಣೆಯನ್ನು ಕೊಡುತ್ತೇನೆ. ಒಬ್ಬನು ಇನ್ನೊಬ್ಬನೊಂದಿಗೆ ಮಾಡಿಕೊಳ್ಳುವ ಒಪ್ಪಂದದ ಬಗ್ಗೆ ಯೋಚಿಸಿ. ಆ ಒಪ್ಪಂದವು ಅಧಿಕೃತವಾದಾಗ ಅದನ್ನು ರದ್ದುಮಾಡುವುದಕ್ಕಾಗಲಿ ಅಥವಾ ಅದಕ್ಕೆ ಬೇರೆ ಏನಾದರು ಸೇರಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಪ್ರಿಯರೇ, ನಾನು ದಿನನಿತ್ಯದ ವ್ಯವಹಾರದಂತೆ ಮಾತನಾಡುತ್ತಿದ್ದೇನೆ. ಮತ್ತೊಬ್ಬನೊಡನೆ ಯಾರಾದರೂ ಒಡಂಬಡಿಕೆಯನ್ನು ಮಾಡಿಕೊಂಡು ಅದನ್ನು ಸ್ಥಿರಪಡಿಸಿದ ಮೇಲೆ ಯಾರೂ ಅದನ್ನು ರದ್ದು ಮಾಡುವುದಿಲ್ಲ, ಇಲ್ಲವೆ ಕೂಡಿಸುವುದಿಲ್ಲ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್15 ಭಾವಾನು ಅನಿ ಭೆನಿಯಾನು, ಮಿಯಾ ತುಮ್ಕಾ ಎಕ್ ಉದಾರನ್ ದಿತಾ ಎಕ್ಲೊ ಅನಿ ಎಕ್ಲ್ಯಾ ವಾಂಗ್ಡಾ ಗೊಸ್ಟ್ ದಿತಲ್ಯಾ ವಿಶಯಾತ್ ಚಿಂತುನ್ ಬಗಾ, ದೊಗೆ ಜಾನಾನಿ ಎಕ್ ಕರಾರಾಕ್ ತಯಾರ್ ಹೊವ್ನ್ ತೆನಿ ಸಹಿ ಘಾಟಲ್ಲ್ಯಾ ತನ್ನಾ ಕೊನ್‍ಬಿ ತೆ ಮೊಡುಕ್ ಹೊಯ್ನಾ, ನಾಜಾಲ್ಯಾರ್ ತೆಕಾ ಕಾಯ್ಬಿ ಜಾಸ್ತಿಚೆ ಮಿಳ್ವುಕ್ ಹೊಯ್ನಾ. ಅಧ್ಯಾಯವನ್ನು ನೋಡಿ |