Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೊಲೊಸ್ಸೆಯವರಿಗೆ 4:9 - ಕನ್ನಡ ಸತ್ಯವೇದವು C.L. Bible (BSI)

9 ಆತನ ಜೊತೆಯಲ್ಲಿ ನಂಬಿಕಸ್ಥನಾದ ಪ್ರಿಯ ಸಹೋದರ ಒನೇಸಿಮನನ್ನು ಕಳುಹಿಸುತ್ತಿದ್ದೇನೆ. ಇವನು ನಿಮ್ಮ ಊರಿನ ಸಭೆಗೆ ಸೇರಿದವನು. ಇಲ್ಲಿ ನಡೆಯುವುದನ್ನೆಲ್ಲಾ ಇವರು ನಿಮಗೆ ತಿಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅವನನ್ನು ನಂಬಿಗಸ್ತನು ಮತ್ತು ಪ್ರಿಯ ಸಹೋದರನಾಗಿರುವ ನಿಮ್ಮ ಊರಿನವನೇ ಆದ ಓನೇಸಿಮನ ಜೊತೆಯಲ್ಲಿ ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುತ್ತಿರುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅವನನ್ನು ನಂಬಿಗಸ್ತನಾದ ಪ್ರಿಯ ಸಹೋದರನಾಗಿರುವ ನಿಮ್ಮ ಊರಿನ ಒನೇಸಿಮನ ಜೊತೆಯಲ್ಲಿ ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುವ ಸಂಗತಿಗಳನ್ನೆಲ್ಲಾ ನಿಮಗೆ ತಿಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಒನೇಸಿಮನು ಕ್ರಿಸ್ತನಲ್ಲಿ ನಂಬಿಗಸ್ತನಾದ ಪ್ರೀತಿಯ ಸಹೋದರನಾಗಿದ್ದಾನೆ. ಅವನು ನಿಮ್ಮ ಊರಿನವನೇ. ಇಲ್ಲಿ ಸಂಭವಿಸಿದ್ದೆಲ್ಲವನ್ನು ಅವರು ನಿಮಗೆ ತಿಳಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ನಿಮ್ಮಲ್ಲಿ ಒಬ್ಬನಾಗಿರುವ ನಂಬಿಗಸ್ತನೂ, ಪ್ರಿಯ ಸಹೋದರನೂ ಆದ ಓನೇಸಿಮನ ಜೊತೆಯಲ್ಲಿ ಅವನನ್ನು ನಾನು ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

9 ಓನೆಜಿಮಸ್ ಮನ್ತಲೊ ಕ್ರಿಸ್ತಾಂಚ್ಯಾ ವರ್‍ತಿ ವಿಶ್ವಾಸ್ ಥವಲ್ಲೊ ಪ್ರೆಮಾಚೊ ಭಾವ್ ಹೊವ್ನ್ ಹಾಯ್, ತೊ ತುಮ್ಚ್ಯಾ ಗಾಂವಾತ್ಲೊಚ್. ಹಿತ್ತೆ ಹೊಲ್ಲೆ ಸಗ್ಳೆ ತೆನಿ ತುಮ್ಕಾ ಸಾಂಗಾತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೊಲೊಸ್ಸೆಯವರಿಗೆ 4:9
4 ತಿಳಿವುಗಳ ಹೋಲಿಕೆ  

ನಮ್ಮ ಪ್ರಿಯ ಸಹೋದರ ತುಖಿಕನು ನನ್ನ ವಿಷಯದಲ್ಲಿ ನಿಮಗೆ ಎಲ್ಲಾ ವರ್ತಮಾನವನ್ನು ಕೊಡುವನು. ಆತನು ಪ್ರಾಮಾಣಿಕ ಸೇವಕನೂ ಪ್ರಭುವಿನ ಸೇವೆಯಲ್ಲಿ ನನ್ನ ಸಂಗಡಿಗನೂ ಆಗಿದ್ದಾನೆ.


ಈ ಶುಭಸಂದೇಶವನ್ನು ಕ್ರಿಸ್ತಯೇಸುವಿನ ನಂಬಿಕಸ್ಥ ದಾಸನೂ ನಮ್ಮ ಜೊತೆಯ ಸೇವಕನೂ ಆದ ಎಪಫ್ರನಿಂದ ಕಲಿತುಕೊಂಡಿದ್ದೀರಿ.


ಕ್ರಿಸ್ತಯೇಸುವಿನ ಸೇವಕನೂ ನಿಮ್ಮ ಸಭೆಗೆ ಸೇರಿದವನೂ ಆದ ಎಪಫ್ರನಿಂದಲೂ ನಿಮಗೆ ವಂದನೆಗಳು. ನೀವು ಮಾಡುವ ಎಲ್ಲಾ ಕಾರ್ಯಗಳಲ್ಲೂ ದೇವರ ಚಿತ್ತಕ್ಕೆ ವಿಧೇಯರಾಗಿ ಸ್ಥಿರ ಹಾಗೂ ಸಿದ್ಧ ಕ್ರೈಸ್ತರಾಗಿ ಬಾಳಬೇಕೆಂದು ಅವನು ನಿಮಗಾಗಿ ಸದಾ ಆಸಕ್ತಿಯಿಂದ ಪ್ರಾರ್ಥಿಸುತ್ತಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು