ಕೊಲೊಸ್ಸೆಯವರಿಗೆ 2:23 - ಕನ್ನಡ ಸತ್ಯವೇದವು C.L. Bible (BSI)23 ಸ್ವಕಲ್ಪಿತ ಆಚಾರವಿಧಿಗಳಿಂದಲೂ ಕಪಟ ವಿನಯದಿಂದಲೂ ಕಠಿಣ ದೇಹದಂಡನೆಯಿಂದಲೂ ಕೂಡಿರುವ ಈ ವಿಧಿನಿಯಮಗಳು ಹೊರನೋಟಕ್ಕೆ ಜಾಣ್ಮೆಯುಳ್ಳದಾಗಿ ಕಾಣಬಹುದು. ಆದರೂ ಶಾರೀರಿಕ ಇಚ್ಛೆಗಳನ್ನು ನಿಯಂತ್ರಿಸಲು ಇವುಗಳು ಪ್ರಯೋಜನಕ್ಕೆ ಬರುವಂಥವುಗಳಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201923 ಇಂಥ ಉಪದೇಶಗಳು ಮನುಷ್ಯಕಲ್ಪಿತವಾದ ಆಚರಣೆಗಳಿಂದಲೂ, ಕಪಟದೀನತೆಯಿಂದಲೂ ಮತ್ತು ದೇಹದಂಡನೆಯಿಂದಲೂ ಜ್ಞಾನವುಳ್ಳದೆಂದು ತೋರಿಬರುತ್ತವೆ, ಆದರೆ ಶಾರೀರಿಕ ಇಚ್ಛೆಗಳನ್ನು ನಿಯಂತ್ರಿಸುವಲ್ಲಿ ಇವುಗಳಿಂದ ಯಾವ ಪ್ರಯೋಜನವೂ ಉಂಟಾಗುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)23 ಅಂಥ ಉಪದೇಶಗಳು ಸ್ವಕಲ್ಪಿತಾಚಾರವನ್ನೂ ಅತಿವಿನಯವನ್ನೂ ದೇಹದಂಡನೆಯನ್ನೂ ಬೋಧಿಸುತ್ತಾ ಹೆಸರಿಗೆ ಮಾತ್ರ ಜ್ಞಾನವೆನಿಸಿಕೊಳ್ಳುತ್ತವೆಯಲ್ಲದೆ ಶಾರೀರಿಕ ಇಚ್ಫೆಗಳನ್ನು ನಿಗ್ರಹಿಸುವದರಲ್ಲಿ ಯಾವ ಪ್ರಯೋಜನಕ್ಕೂ ಬರುವದಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್23 ಈ ನಿಯಮಗಳು ನೋಡುವುದಕ್ಕೆ ಬದ್ಧಿಯುಳ್ಳವಾಗಿವೆ. ಆದರೆ ಅತಿವಿನಯವಂತರಂತೆ ನಟಿಸಲು ಮತ್ತು ತಮ್ಮ ದೇಹಗಳನ್ನು ದಂಡಿಸಲು ಜನರನ್ನು ಪ್ರೆರೇಪಿಸುವ ಅವುಗಳು ಕೇವಲ ಮಾನವ ನಿರ್ಮಿತವಾದ ಧರ್ಮದ ಒಂದು ಭಾಗವಾಗಿವೆ. ಆದರೆ ಪಾಪಸ್ವಭಾವವು ಇಚ್ಛಿಸುವ ದುಷ್ಕೃತ್ಯಗಳನ್ನು ಮಾಡದಂತೆ ಅವು ಜನರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ23 ಇಂಥ ಉಪದೇಶಗಳು ತಾವೇ ತಂದುಕೊಂಡ ಆರಾಧನೆಯಲ್ಲಿಯೂ ಸುಳ್ಳು ದೀನತ್ವದಲ್ಲಿಯೂ ದೇಹದಂಡನೆಯಲ್ಲಿಯೂ ಜ್ಞಾನದ ತೋರಿಕೆಯುಳ್ಳದ್ದಾಗಿರುವುದು ನಿಜವೇ. ಆದರೆ ಇವು ಶಾರೀರಿಕ ಇಚ್ಛೆಗಳನ್ನು ನಿಯಂತ್ರಿಸಲು ಪ್ರಯೋಜನವಿಲ್ಲದವುಗಳಾಗಿವೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್23 ಅಸ್ಲ್ಯಾ ಶಿಕಾಪಾನಿ ಮಾನ್ಸಾಚ್ಯಾ ಯವ್ಜನ್ಯಾ, ಕಾರೆವಾ, ಕುಸ್ಡೆಪಾನಾನ್ ಅನಿ ಆಂಗಾಚ್ಯಾ ಚಲ್ನುಕಿಕ್ನಾ ಶಾನೆಪಾನಾಚೆ ಮನುನ್ ದಿಸುನ್ ಯೆತಾ, ಖರೆ ಆಂಗಾಚಿ ಇಚ್ಛ್ಯಾ ಸ್ವತಾಚ್ಯಾ ಹಾತೊಟಿತ್ ರ್‍ಹಾತಾನಾ ಕಾಯ್ಬಿ ಫಾಯ್ದೊ ಹೊಯ್ನಾ. ಅಧ್ಯಾಯವನ್ನು ನೋಡಿ |