Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 93:1 - ಕನ್ನಡ ಸತ್ಯವೇದವು C.L. Bible (BSI)

1 ವಹಿಸಿಹನು ಪ್ರಭು, ರಾಜ್ಯಾಧಿಕಾರವನು I ಧರಿಸಿಹನು ಘನತೆಯ ವಸ್ತ್ರ ಲಾಂಛನವನು I ತೊಟ್ಟಿಹನು ಶೌರ್ಯವೆಂಬ ನಡುಕಟ್ಟನು I ಸ್ಥಿರಪಡಿಸಿಹನು ಕದಲದಂತೆ ಜಗವನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಆತನು ಮಹಿಮಾ ವಸ್ತ್ರವನ್ನು ಧರಿಸಿದ್ದಾನೆ, ಶೌರ್ಯವನ್ನು ನಡುಕಟ್ಟನ್ನಾಗಿ ಬಿಗಿದಿದ್ದಾನೆ; ಹೌದು, ಭೂಲೋಕವು ಸ್ಥಿರವಾಗಿರುವುದು ಅದು ಕದಲುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಮಹಿಮಾವಸ್ತ್ರವನ್ನು ಧರಿಸಿದ್ದಾನೆ, ಧರಿಸಿದ್ದಾನೆ. ಶೌರ್ಯವನ್ನು ನಡುಕಟ್ಟಾಗಿ ಬಿಗಿದಿದ್ದಾನೆ; ಭೂಲೋಕವು ಸ್ಥಿರವಾಗಿರುವದು, ಕದಲುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೆಹೋವನೇ ರಾಜನು. ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ. ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು. ಅದು ಕದಲುವುದೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೆಹೋವ ದೇವರು ಆಳಿಕೆ ಮಾಡುತ್ತಿದ್ದಾರೆ. ಘನತೆಯನ್ನು ಹೊದ್ದುಕೊಂಡಿದ್ದಾರೆ. ಬಲದಿಂದ ತಮ್ಮ ನಡುವನ್ನು ಕಟ್ಟಿಕೊಂಡಿದ್ದಾರೆ. ಆದುದರಿಂದ ಲೋಕವು ಸಹ ಸ್ಥಿರವಾಗಿದೆ, ಕದಲುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 93:1
30 ತಿಳಿವುಗಳ ಹೋಲಿಕೆ  

ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ I ಕದಲದ ಸ್ಥಿರತೆಯನು ಇತ್ತಿಹನು ಧರೆಗೆ I ನ್ಯಾಯವಾದ ತೀರ್ಪು ಕೊಡುವನು ಜನಾಂಗಕೆ II


ವಹಿಸಿಹನು ಪ್ರಭು ರಾಜ್ಯಾಧಿಕಾರವನು : ನಡುಗುತಿಹುದು ಜನಾಂಗವು I ಕೆರೂಬಿಯರ ಮಧ್ಯೆ ಆಸೀನನಾಗಿಹನು : ಕಂಪಿಸುತಿಹುದು ಜಗವು II


ಆಸ್ತಿ - ಪಾಸ್ತಿ, ಐಶ್ವರ್ಯ ಬರುವುದು ನಿಮ್ಮಿಂದಲೇ. ಸರ್ವಾಧಿಕಾರ, ಬಲಪರಾಕ್ರಮ ಇರುವುದು ನಿಮ್ಮ ಕೈಯಲ್ಲೇ. ಪಟ್ಟ ಪದವಿಗೆ, ಸರ್ವಶಕ್ತಿ ಸಾಹಸಕ್ಕೆ ಮೂಲ ನೀವೇ.


ತರುವಾಯ ನನಗೆ ಮತ್ತೊಂದು ಧ್ವನಿ ಕೇಳಿಸಿತು. ಅದು ದೊಡ್ಡ, ಜನಸಮೂಹದ ಆರ್ಭಟದಂತೆಯೂ ಭೋರ್ಗರೆಯುವ ಜಲಪ್ರವಾಹದ ಮೊರೆತದಂತೆಯೂ ಭಾರಿ ಗುಡುಗಿನ ಗರ್ಜನೆಯಂತೆಯೂ ಇತ್ತು. ಅದು ಇಂತೆಂದಿತು : “ಅಲ್ಲೆಲೂಯ ! ಸರ್ವಶಕ್ತ ನಮ್ಮ ಪ್ರಭು ದೇವ ರಾಜ್ಯವಾಳುತಿಹನಾತ.


ಸ್ಥಾಪಿಸಿಹನು ಪ್ರಭು ಸ್ವರ್ಗದೊಳು ಸಿಂಹಾಸನವನು I ಎಲ್ಲದರ ಮೇಲೆ ನಡೆಸುತಿಹನು ರಾಜ್ಯಾಡಳಿತವನು II


ಬಿಗಿದುಕೊಂಡಿರುವೆ ಶಕ್ತಿಶೌರ್ಯದ ನಡುಗಟ್ಟನು I ಬಿಗಿಯಾಗಿ ನಿಲ್ಲಿಸಿರುವೆ ನೀ ಗುಡ್ಡಬೆಟ್ಟಗಳನು II


ಕೇಳಿ, ಆಕಾಶಮಂಡಲವನ್ನು ಸೃಷ್ಟಿಸಿದ ಸರ್ವೇಶ್ವರನ ಮಾತನ್ನು : ಭೂಲೋಕವನ್ನು ನಿರ್ಮಿಸಿ, ರೂಪಿಸಿ, ಸ್ಥಾಪಿಸಿದ ದೇವರು ಆತನು. ಅದನ್ನು ಶೂನ್ಯಸ್ಥಾನವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದವನು ಆತನು. ಅಂಥವನು ಇಂತೆನ್ನುತ್ತಾನೆ : “ಸರ್ವೇಶ್ವರ ನಾನೇ; ನಾನಲ್ಲದೆ ಇನ್ನಾರೂ ಇಲ್ಲ.


ಜಗವನು, ಅದರಲ್ಲಿನ ಮನುಜರನು ಸೃಜಿಸಿದವನು ನಾನೇ, ಆಕಾಶಮಂಡಲವನು ವಿಶಾಲವಾಗಿ ಹರಡಿದ್ದು ನನ್ನ ಕೈಗಳೇ, ಸೂರ್ಯ, ಚಂದ್ರ, ನಕ್ಷತ್ರಗಳನು ನಿಯಂತ್ರಿಸುವವನು ನಾನೆ.


ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ I ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ I ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ II


ಸುಟ್ಟು ನೀ ಭಸ್ಮಮಾಡು ಕೋಪಾಗ್ನಿಯಿಂದ I ಸ್ಪಷ್ಟವಾಗಲಿ ಇಡೀ ಲೋಕಕ್ಕಿದರಿಂದ I ದೇವನಾಳುತಿಹನೆಂದು ಇಸ್ರಯೇಲಿನಿಂದ II


ತಮ್ಮ ಪುತ್ರನನ್ನು ಕುರಿತಾದರೋ: “ದೇವಾ, ನಿನ್ನ ಸಿಂಹಾಸನವು ಶಾಶ್ವತವಾದುದು; ನ್ಯಾಯದಂಡವೇ ನಿನ್ನ ರಾಜದಂಡವಾಗಿದೆ.


ಅವರು ನ್ಯಾಯನೀತಿಯನ್ನು ವಜ್ರಕವಚವನ್ನಾಗಿ ತೊಟ್ಟುಕೊಳ್ಳುವರು. ರಕ್ಷಣೆ ಎಂಬ ಶಿರಸ್ತ್ರಾಣವನ್ನು ಧರಿಸಕೊಳ್ಳುವರು. ಪ್ರತೀಕಾರವೆಂಬ ಉಡುಪನ್ನು ಉಟ್ಟುಕೊಳ್ಳುವರು. ಆಗ್ರಹ ಎಂಬ ನಿಲುವಂಗಿಯನ್ನು ಹಾಕಿಕೊಳ್ಳುವರು.


ತಮ್ಮ ಪ್ರಜೆಗೆ ಇಂತೆನ್ನುತ್ತಾರೆ ಸರ್ವೇಶ್ವರ ಸ್ವಾಮಿ : “ನಿನಗೆ ದಯಪಾಲಿಸುವೆನು ಸದುತ್ತರವನು ಪ್ರಸನ್ನತೆಯ ಕಾಲದಲಿ ಸಹಾಯ ನೀಡುವೆನು ರಕ್ಷಣೆಯ ದಿನದಲಿ ನಿನ್ನನು ಕಾಪಾಡಿ ನೇಮಿಸುವೆನು ಜನತೆಗೆ ಸ್ಥಿರ ಒಡಂಬಡಿಕೆಯಾಗಿ.


ಸದ್ಧರ್ಮವೇ ಆತನಿಗೆ ನಡುಕಟ್ಟು ಪ್ರಾಮಾಣಿಕತೆಯೇ ಸೊಂಟಪಟ್ಟಿ.


ಶಾಶ್ವತವಾದುದು ನಿನ್ನ ರಾಜ್ಯವು I ಇರುವುದೆಂದಿಗು ನಿನ್ನ ಆಳ್ವಿಕೆಯು II


ನಡುಕಟ್ಟಾಗಿ ನನಗೆ ಬಿಗಿದಿದ್ದಾನೆ ಶೌರ್ಯ I ಆತನಿಂದಲೇ ಸರಾಗ ನನ್ನ ಮಾರ್ಗ II


ಮಹಿಮೆ ಘನತೆಗಳಿಂದ ಅಲಂಕರಿಸಿಕೊ! ಗೌರವ ಪ್ರಭಾವಗಳನು ಧರಿಸಿಕೊ!


ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ.’


“ಎದೋಮಿನ ಬೊಚ್ರನಗರದಿಂದ ಬರುವ ಈತನು ಯಾರು? ರಕ್ತಗೆಂಪಾದ ಉಡುಪನ್ನುಟ್ಟು ಥಳಥಳಿಸುವ ವಸ್ತ್ರಗಳನ್ನು ಧರಿಸಿಕೊಂಡು, ಮಹಾಶೌರ್ಯದಿಂದ ಮೆರೆಯುತ್ತಾ ನಡೆದುಬರುವ ಈತನು ಯಾರು? “ಆತನು ನಾನೇ, ಸತ್ಯವನು ಘೋಷಿಸುವವನು, ಆತನು ನಾನೇ, ಉದ್ಧರಿಸಲು ಸಮರ್ಥನು".


ಶುಭಕರ ಸಮಾಚಾರವನು ತರುವ ಶಾಂತಿಸಮಾಧಾನವನು ಸಾರುವ ಸಂತಸದ ಸಂದೇಶವನು ಅರುಹುವ ಜೀವೋದ್ಧಾರವನು ಪ್ರಕಟಿಸುವ ‘ನಿನ್ನ ದೇವರೇ ರಾಜ್ಯಭಾರ ವಹಿಸುವ ಎಂದು ಸಿಯೋನಿಗೆ ತಿಳಿಯಪಡಿಸುತ್ತ ಪರ್ವತಗಳಿಂದ ಇಳಿದುಬರುವ ಶಾಂತಿದೂತನ ಪಾದಪದ್ಮಗಳು ಎಷ್ಟೊಂದು ಸುಂದರ!


ಎಚ್ಚರಗೊಳ್ಳು ಸರ್ವೇಶ್ವರನ ಭುಜವೇ, ಎಚ್ಚರಗೊಂಡು ಬಲವನು ತಂದುಕೊ ಭುಜವೇ, ಪೂರ್ವಕಾಲದೊಳು ಪುರಾತನ ಪೀಳಿಗೆಯೊಳು ಎಚ್ಚರಗೊಂಡಂತೆ ಎಚ್ಚೆತ್ತುಕೊ ಈಗಲು. ರಹಬನ್ನು ಛೇದಿಸಿಬಿಟ್ಟ ಭುಜ ನೀನಲ್ಲವೆ? ಘಟಸರ್ಪವನು ಅಪ್ಪಳಿಸಿದ ಭುಜ ನೀನಲ್ಲವೆ?


ಇಳೆಯು ಭೂನಿವಾಸಿಗಳ ಸಮೇತ ತಳಮಳಗೊಳ್ಳಲು I ಅದರ ತಳಹದಿಯ ಬಿಗಿಹಿಡಿದಿರುವವನು ನಾನಿಲ್ಲದಿನ್ನಾರು? II


ಆಕಾಶವನ್ನ ಹರಡಿದೆ; ಭುವಿಯನ್ನು ಸ್ಥಾಪಿಸಿದೆ; ಸಿಯೋನಿಗೆ ‘ನೀನೆನ್ನ ಜನತೆ’ ಎಂದೆ ನಾನಾಡುವುದನೆ ನಿನ್ನಿಂದ ಮಾತನಾಡಿಸಿದೆ, ನಿನ್ನನು ನನ್ನ ಅಂಗೈಯಲಿ ಕೊರೆದು ಕಾದಿಟ್ಟೆ.”


ಸರ್ವೇಶನಿಗೆ ಮಣಿಯಿರಿ ಪವಿತ್ರ ವಸ್ತ್ರಧಾರಿಗಳಂತೆ I ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ ಮುಂದೆ I ಕದಲದ ಸ್ಥಿರತೆಯನು ಇತ್ತಿಹನೀ ಧರೆಗೆ II


“ಹರ್ಷಿಸಲಿ ಆಕಾಶ, ಸಂತೋಷಿಸಲಿ ಭೂಲೋಕ I ಗರ್ಜಿಸಲಿ ಸಮುದ್ರ ಮತ್ತು ಅದರೊಳಿರುವುದೆಲ್ಲ I ಸಾರಲಿ ರಾಷ್ಟ್ರಗಳಿಗೆ ಸರ್ವೇಶ್ವರ ರಾಜನೆಂದು I ಧರೆಗೆ ನ್ಯಾಯತೀರಿಸಲು ಖಂಡಿತ ಬರುವನೆಂದು II


ಭೋರ್ಗರೆವ ಸಮುದ್ರಗಳನು, ಗರ್ಜಿಸುವ ತರಂಗಗಳನು I ದೊಂಬಿಯೇಳುವ ಜನಾಂಗಗಳನು ಶಮನಗೊಳಿಸುವವನು ನೀನು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು