Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 90:5 - ಕನ್ನಡ ಸತ್ಯವೇದವು C.L. Bible (BSI)

5 ಮನುಜರು ನೀ ಹರಿದೋಡಿಸುವ ಹೊಯಿಲು I ಇರುಳಿನ ಕನಸು, ಹಗಲಿನ ಗರಿಹುಲ್ಲು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನೀನು ಮನುಷ್ಯರನ್ನು ಪ್ರವಾಹದಿಂದ ಬಡಿದುಕೊಂಡು ಹೋಗುತ್ತೀ; ಅವರು ನಿದ್ರೆಗೆ ಸಮಾನರೇ. ಅವರು ಹೊತ್ತಾರೆಯಲ್ಲಿ ಚಿಗುರುವ ಹುಲ್ಲಿನಂತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ನೀನು ಮನುಷ್ಯರನ್ನು ಪ್ರವಾಹದಿಂದ ಬಡುಕೊಂಡು ಹೋಗುತ್ತೀ; ಅವರು ನಿದ್ರೆಗೆ ಸಮಾನರೇ. ಅವರು ಹೊತ್ತಾರೆಯಲ್ಲಿ ಚಿಗುರುವ ಹುಲ್ಲಿನಂತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನೀನು ನಮ್ಮನ್ನು ಗುಡಿಸಿಹಾಕುವೆ. ನಮ್ಮ ಜೀವನವು ಕನಸಿನಂತಿದೆ; ಹೊತ್ತಾರೆಯಲ್ಲಿ ನಾವು ಇಲ್ಲವಾಗುತ್ತೇವೆ. ನಾವು ಹುಲ್ಲಿನಂತಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ನೀವು ಜನರನ್ನು ಮರಣ ನಿದ್ರೆಯ ಪ್ರವಾಹದಂತೆ ಹೋಗಲು ಅನುಮತಿಸುತ್ತೀರಿ. ಅವರು ಬೆಳಿಗ್ಗೆ ಬೆಳೆಯುವ ಹುಲ್ಲಿನ ಹಾಗೆ ಇದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 90:5
16 ತಿಳಿವುಗಳ ಹೋಲಿಕೆ  

ಆ ವಾಣಿ ಮತ್ತೆ ಕೇಳಿಸಿತು : ‘ಗಟ್ಟಿಯಾಗಿ ಕೂಗು’ ಎಂದಿತು ನಾನೇನೆಂದು ಕೂಗಲಿ ಎನ್ನಲು ಈ ಪರಿಯಾಗಿ ಉತ್ತರಿಸಿತು : “ನರಮಾನವರೆಲ್ಲ ಬರೀ ಹುಲ್ಲಿನಂತೆ ಅವರ ಸೊಬಗೆಲ್ಲಾ ಬಯಲಿನ ಕುಸುಮದಂತೆ.


ಪವಿತ್ರಗ್ರಂಥದಲ್ಲಿ ಬರೆದಿರುವಂತೆ : ನರಮಾನವರೆಲ್ಲರೂ ಗರಿಹುಲ್ಲಿನಂತೆ ಅವರ ವೈಭವವೆಲ್ಲವೂ ಹುಲ್ಲಿನ ಹೂವಿನಂತೆ. ಹುಲ್ಲೊಣಗಿ ಹೂ ಬಾಡಿಬೀಳುವುದು ಪ್ರಭುವಿನ ವಾಕ್ಯವಾದರೋ ಶಾಶ್ವತವಾಗಿ ನಿಲ್ಲುವುದು.


ನಿದ್ರೆಯಿಂದೆದ್ದವನು ಕನಸನ್ನು ತೃಣೀಕರಿಸುವಂತೆ I ಪ್ರಭು ನೀನೆದ್ದು ಕಡೆಗಣಿಸುವೆ ಅವರನು ಮಾಯೆಯಂತೆ II


ಅವರನ್ನು ಅಕಾಲ ಮರಣ ಅಪಹರಿಸಿತು ಅವರಿಗಿದ್ದ ಅಡಿಪಾಯ ನೀರುಪಾಲಾಯಿತು.


ಸ್ವಪ್ನದಂತೆ ಅವನು ಸಿಗದೆ ಹಾರಿಹೋಗುವನು ರಾತ್ರಿಯ ಕನಸಿನಂತೆ ಓಡಿಹೋಗುವನು.


ಬೆಂಡಿನ ಹರಗಲು ದೌಡಾಯಿಸುವಂತೆ ಬೇಟೆಯ ಮೇಲೆ ಗರುಡವೆರಗುವಂತೆ ಕಳೆದುಹೋಗುತ್ತವೆ ಶೀಘ್ರಗತಿಯಲ್ಲೆ.


ಅವರು ಉದಯಾಸ್ತಮಾನಗಳ ನಡುವೆ ಜಜ್ಜಿಹೋಗುವರು ಯಾರ ಲಕ್ಷ್ಯವೂ ಇಲ್ಲದೆ ನಿತ್ಯವಿನಾಶ ಹೊಂದುವರು.


ಕುರುಬನು ತನ್ನ ಗುಡಿಸಲನ್ನು ಕಿತ್ತುಹಾಕುವಂತೆ ನೇಯಿಗೆಯವನು ತನ್ನ ಹಾಸನ್ನು ಸುತ್ತುವಂತೆ ಮಗ್ಗದಿಂದ ಅವನು ದಾರವನ್ನು ಕತ್ತರಿಸುವಂತೆ ಬೆಳಗುಬೈಗಿನೊಳಗೆ ನನ್ನ ಆಯುಷ್ಯವನ್ನು ನೀ ಮುಗಿಸುತ್ತಿರುವೆನೆಂದೆ.


ಸಿಂಹವು ಮೇಲೆಬಿದ್ದು ಮೂಳೆ ಮುರಿದಂತೆ ನನಗಾಗುತ್ತಿತ್ತು ಅತೀವ ಬಾಧೆ, ಆದರೂ ಇರುಳೆಲ್ಲ ಮೊರೆಯಿಡುತ್ತಿದ್ದೆ ಬೆಳಗು ಬೈಗಿನೊಳಗೆ ನೀ ನನ್ನ ಮುಗಿಸುತ್ತಿರುವೆನೆಂದೆ.


ಪ್ರಭುವಿನ ಶ್ವಾಸ ಬೀಸಲು ಒಣಗಿ ಹೋಗುವುದಾ ಹುಲ್ಲು ಬಾಡಿ ಹೋಗುವುದಾ ಹೂವು ಮಾನವರೆಲ್ಲ ಹುಲ್ಲೇ ಹುಲ್ಲು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು