Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 89:3 - ಕನ್ನಡ ಸತ್ಯವೇದವು C.L. Bible (BSI)

3 ನೀನೆಂದೆ, “ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ I ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರವಾದ ಶಪಥ : II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನೀನು ನುಡಿದದ್ದೇನೆಂದರೆ, “ನಾನು ಆರಿಸಿಕೊಂಡ ಸೇವಕನಾದ ದಾವೀದನ ಸಂಗಡ ಒಡಂಬಡಿಕೆ ಮಾಡಿಕೊಂಡು ಆಣೆಯಿಟ್ಟು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 [ನೀನು ನುಡಿದದ್ದೇನಂದರೆ - ] ನಾನು ಆರಿಸಿಕೊಂಡ ಸೇವಕನಾದ ದಾವೀದನ ಸಂಗಡ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು. ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ನೀವು ಹೇಳಿದ್ದೇನಂದರೆ, “ನಾನು ಆಯ್ದುಕೊಂಡವನ ಸಂಗಡ ನಾನು ಒಡಂಬಡಿಕೆ ಮಾಡಿಕೊಂಡಿದ್ದೇನೆ. ನಾನು ನನ್ನ ಸೇವಕನಾದ ದಾವೀದನಿಗೆ ಪ್ರಮಾಣ ಮಾಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 89:3
22 ತಿಳಿವುಗಳ ಹೋಲಿಕೆ  

ದಾವೀದನಿಗೆ ಪ್ರಭು ಆಣೆಯಿಟ್ಟು ಇಂತೆಂದ: I ಆಣೆಯಿಟ್ಟು ಕೊಟ್ಟಾ ಮಾತಿಗೆ ತಪ್ಪಲಾರನಾತ: I “ನಿನ್ನ ಸಿಂಹಾಸನದಲಿ ಕೂರಿಸುವೆನು ನಿನ್ನ ತನುಜನೊಬ್ಬನನು” II


ಆತನೊಬ್ಬ ಪ್ರವಾದಿಯೂ ಆಗಿದ್ದ. ತನ್ನ ಸಂತತಿಯಲ್ಲೇ ಒಬ್ಬನನ್ನು ಅರಸನನ್ನಾಗಿ ಮಾಡುವುದಾಗಿ ದೇವರು ಮಾಡಿದ್ದ ವಾಗ್ದಾನವನ್ನು ಆತನು ಮರೆತಿರಲಿಲ್ಲ.


ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ I ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ II


‘ನಾನು ನನ್ನ ಜನರಾದ ಇಸ್ರಯೇಲರನ್ನು ಈಜಿಪ್ಟಿನಿಂದ ಬರಮಾಡಿದಂದಿನಿಂದ ನನ್ನ ನಾಮದ ನಿವಾಸಕ್ಕಾಗಿ ಆಲಯ ಸ್ಥಾನವನ್ನಾಗಲಿ, ಇಸ್ರಯೇಲ್ ಕುಲಗಳ ಯಾವ ಪಟ್ಟಣವನ್ನಾಗಲಿ ಆರಿಸಿಕೊಳ್ಳಲಿಲ್ಲ. ಆದರೆ ನನ್ನ ಪ್ರಜೆ ಇಸ್ರಯೇಲರನ್ನು ಆಳುವುದಕ್ಕೆ ದಾವೀದನನ್ನು ಆರಿಸಿಕೊಂಡೆ’ ಎಂದು ಹೇಳಿದ್ದರು.


ಹೌದು, ಸರ್ವೇಶ್ವರನ ಸನ್ನಿಧಿಯಲಿ ನನ್ನ ಮನೆತನ ಸುಸ್ಥಿರ ಆತನೊಂದಿಗೆ ನಾ ಮಾಡಿಲ್ಲವೆ ಚಿರವಾದ ಒಪ್ಪಂದ? ಅದೆಲ್ಲದರಲು ಸುವ್ಯವಸ್ಥಿತ, ಅದೆಂದಿಗೂ ನಿರ್ಭೀತ. ಆತನೇ ನನ್ನುದ್ಧಾರಕ್ಕೆ ಮೂಲಾಧಾರ ನನ್ನ ಆಶೆ ಆಕಾಂಕ್ಷೆಗಳ ಪೂರೈಸುವಾತ.


ಇವರಾದರೋ “ಎಂದೆಂದಿಗೂ ನೀ ಯಾಜಕನೆಂದು ಸರ್ವೇಶ್ವರನೇ ಪ್ರಮಾಣಿಸಿಹರು ಮನಸ್ಸನ್ನೆಂದೂ ಬದಲಾಯಿಸರವರು,” ಎಂಬ ಶಪಥ ಪಡೆದಿರುವ ಯಾಜಕರು.


ತದನಂತರ ಇಸ್ರಯೇಲಿನವರು ತಮ್ಮ ದೇವರಾದ ಸರ್ವೇಶ್ವರನನ್ನು ಮತ್ತು ಅರಸ ದಾವೀದನನ್ನು ಆಶ್ರಯಿಸುವರು. ಅಂತಿಮ ದಿನಗಳಲ್ಲಿ ಅವರು ಭಯಭಕ್ತಿಯುಳ್ಳವರಾಗಿ ಸರ್ವೇಶ್ವರಸ್ವಾಮಿಯನ್ನೂ ಅವರ ಕೃಪಾಶ್ರಯವನ್ನೂ ಮರೆಹೋಗುವರು.


ಕಿವಿಯನ್ನಿತ್ತ ತಿರುಗಿಸಿ ಬನ್ನಿ ನನ್ನ ಬಳಿಗೆ, ಬದುಕಿಬಾಳುವಿರಿ ನೀವು ಕಿವಿಗೊಟ್ಟರೆನಗೆ. ದಾವೀದನಿಗೆ ವಾಗ್ದಾನವಿತ್ತ ವರವ ಈವೆ ನಿಮಗೆ ಮಾಡಿಕೊಳ್ಳುವೆ-ಚಿರವಾದ ಒಡಂಬಡಿಕೆಯನು ನಿಮ್ಮೊಂದಿಗೆ.


ಅರಸುತನವನ್ನು ಸೌಲನ ಕುಟುಂಬದಿಂದ ತೆಗೆದು ದಾನಿನಿಂದ ಬೇರ್ಷೆಬದವರೆಗಿರುವ ಎಲ್ಲ ಇಸ್ರಯೇಲರಲ್ಲೂ ಯೆಹೂದ್ಯರಲ್ಲೂ ದಾವೀದನ ಸಿಂಹಾಸನವನ್ನು ಸ್ಥಿರಪಡಿಸುವುದಾಗಿ ಸರ್ವೇಶ್ವರನಾದ ದೇವರು ದಾವೀದನಿಗೆ ವಾಗ್ದಾನ ಮಾಡಿದ್ದಾರೆ.


ಆಗ ಆಕಾಶದಿಂದ, “ಇವನೇ ನನ್ನ ಪುತ್ರ; ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂಬ ದೈವವಾಣಿ ಕೇಳಿಸಿತು.


ಅವರು ತಮ್ಮ ದೇವರಾದ ಸರ್ವೇಶ್ವರನೆಂಬ ನನಗೆ ಮತ್ತು ಅವರಿಗಾಗಿ ನಾನು ಏರ್ಪಡಿಸಲಿರುವ ರಾಜ ದಾವೀದನಿಗೆ ಸೇವೆಸಲ್ಲಿಸುವರು.)


ಭಂಗಪಡಿಸಿರುವೆ ದಾಸನೊಡನೆ ಮಾಡಿದ ಒಡಂಬಡಿಕೆಯನು I ಮಣ್ಣುಪಾಲಾಗಿಸಿರುವೆ ಅವನ ಪಟ್ಟದ ಆ ಕಿರೀಟವನು II


ಆರಿಸಿಕೊಂಡನು ದಾಸ ದಾವೀದನನು I ತೆಗೆದುಕೊಂಡನು ಕುರಿಹಟ್ಟಿಯಿಂದವನನು II


ಇಗೋ, ನನ್ನ ದಾಸನು ! ನನ್ನ ಆಧಾರ ಪಡೆದವನು ನನ್ನಿಂದ ಆಯ್ಕೆಯಾದವನು ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು ಅನ್ಯರಾಷ್ಟ್ರಗಳಿಗೆ ಸಾರುವನಿವನು ಸದ್ಧರ್ಮವನು.


ಹಿಂದೊಮ್ಮೆ ನೀ ದರ್ಶನವಿತ್ತು ಇಂತೆಂದೆ ನಿನ್ನ ಭಕ್ತರಿಗೆ: I “ರಕ್ಷಾಬಲವನು ಅನುಗ್ರಹಿಸಿರುವೆ ಶೂರವೀರನೋರ್ವನಿಗೆ I ಪ್ರಜೆಗಳಲೊರ್ವ ಯುವಕನನು ಏರಿಸಿರುವೆ ಉನ್ನತಸ್ಥಾನಕೆ II


ಸರ್ವೇಶ್ವರಸ್ವಾಮಿಯ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು ಇಸ್ರಯೇಲರಿಗೆ, “ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿ ನಿಮ್ಮ ಪೂರ್ವಜರಿಗೆ ಪ್ರಮಾಣಮಾಡಿದ ನಾಡಿಗೆ ಕರೆದುತಂದೆನು. ನಿಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದೂ ಭಂಗಪಡಿಸುವುದಿಲ್ಲ ಎಂದು ಮಾತುಕೊಟ್ಟೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು