Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 89:24 - ಕನ್ನಡ ಸತ್ಯವೇದವು C.L. Bible (BSI)

24 ನಿನ್ನ ಪ್ರೀತಿಸತ್ಯತೆಗಳು ಇರುವುವು ಅವನೊಂದಿಗೆ I ನನ್ನ ನಾಮ ಪ್ರಯುಕ್ತ ಕೋಡು ಮೂಡುವುದವನಿಗೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆದರೆ ನನ್ನ ಪ್ರೀತಿ ಮತ್ತು ಸತ್ಯತೆಗಳು ಅವನೊಡನೆ ಇರುವವು; ನನ್ನ ಹೆಸರಿನಿಂದ ಅವನ ಕೊಂಬು ಎತ್ತಲ್ಪಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆದರೆ ನನ್ನ ಪ್ರೀತಿಸತ್ಯತೆಗಳು ಅವನೊಡನೆ ಇರುವವು; ನನ್ನ ಹೆಸರಿನಿಂದ ಅವನ ಕೊಂಬು ಎತ್ತಲ್ಪಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ನಾನು ಆರಿಸಿಕೊಂಡ ರಾಜನನ್ನು ಯಾವಾಗಲೂ ಪ್ರೀತಿಸುವೆನು; ಅವನಿಗೆ ಬೆಂಬಲ ನೀಡುವೆನು. ನಾನು ಅವನನ್ನು ಯಾವಾಗಲೂ ಬಲಗೊಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ನನ್ನ ನಂಬಿಗಸ್ತಿಕೆಯೂ ಪ್ರೀತಿಯೂ ಅವನ ಸಂಗಡ ಇರುವುವು. ನನ್ನ ಹೆಸರಿನಲ್ಲಿ ಅವನ ಬಲವೆಂಬ ಕೊಂಬು ಉನ್ನತವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 89:24
15 ತಿಳಿವುಗಳ ಹೋಲಿಕೆ  

ಏಕೆಂದರೆ, ದೇವರು ಮಾಡಿದ ಸಮಸ್ತ ವಾಗ್ದಾನಗಳಿಗೂ ‘ಹೌದು’ ಎಂಬ ಉತ್ತರ ಸಾಕ್ಷಾತ್ ಅವರೇ. ಈ ಕಾರಣದಿಂದಲೇ ನಾವು ದೇವರ ಮಹಿಮೆಯನ್ನು ಸಾರುವಾಗ ಯೇಸುಕ್ರಿಸ್ತರ ಮುಖಾಂತರವೇ ‘ಆಮೆನ್’ ಎನ್ನುತ್ತೇವೆ.


ಪ್ರಭು : “ನನ್ನ ಭಕ್ತನಾದ್ದರಿಂದ ವಿಮೋಚಿಸುವೆನು ಅವನನು I ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು II


ನಾನಿನ್ನು ಲೋಕದಲ್ಲಿ ಇರುವುದಿಲ್ಲ. ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ಪವಿತ್ರ ಪಿತನೇ, ನಾವು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ.


“ನೀವು ಲೋಕದಿಂದ ಆರಿಸಿ ನನಗೆ ಕೊಟ್ಟ ಜನರಿಗೆ ನಿಮ್ಮ ನಾಮವನ್ನು ತಿಳಿಯಪಡಿಸಿದ್ದೇನೆ. ಇವರು ನಿಮ್ಮವರಾಗಿದ್ದರು. ಆದರೂ ಇವರನ್ನು ನನಗೆ ಕೊಟ್ಟಿರಿ. ನಿಮ್ಮ ಮಾತಿಗೆ ವಿಧೇಯರಾಗಿ ಇವರು ನಡೆದಿದ್ದಾರೆ.


ಧರ್ಮಶಾಸ್ತ್ರವನ್ನು ಮೋಶೆಯ ಮುಖಾಂತರ ಕೊಡಲಾಯಿತು. ವರಪ್ರಸಾದ ಹಾಗೂ ಸತ್ಯವಾದರೋ ಯೇಸು ಕ್ರಿಸ್ತರ ಮುಖಾಂತರ ಬಂದವು.


ಆದರೆ ನನ್ನೊಲವು ಅವನನ್ನು ಕೈಬಿಡದು I ನನ್ನ ಪ್ರಾಮಾಣಿಕತೆಗದು ಚ್ಯುತಿಯಾಗದು II


ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ I ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ II


ಜಯಘೋಷ ಮಾಡುವೆವು, ನಿನ್ನ ಗೆಲುವಿನ ನಿಮಿತ್ತ I ಧ್ವಜ ಹಾರಿಪೆವು, ಎಮ್ಮ ದೇವನ ನಾಮದ ನಿಮಿತ್ತ I ನಿನ್ನ ಕೋರಿಕೆಗಳೆಲ್ಲವನು, ಕೈಗೂಡಿಸಲಿ ಆತ II


ಸಂಕಟ ಬಂದಾಗ, ಪ್ರಭು ನಿನಗೆ ಕಿವಿಗೊಡಲಿ I ಯಕೋಬ ದೇವರ ನಾಮ, ನಿನ್ನ ಕಾಪಾಡಲಿ II


ಹನ್ನಳು ಹೀಗೆಂದು ಭಜಿಸಿದಳು: “ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ ಉನ್ನತೋನ್ನತವಾಗಿದೆ ನನ್ನ ಶಕ್ತಿ ಆ ದೇವನಲಿ ನನಗಿದೆ ಶತ್ರುಗಳನ್ನೂ ಧಿಕ್ಕರಿಸುವ ಶಕ್ತಿ ನನಗಿತ್ತಿರುವನಾ ಸಂತಸದಾಯಕ ಮುಕ್ತಿ.


ದೇವರ ಸಾನ್ನಿಧ್ಯದಲಿ ಆತನು ಸದಾ ಸಾಮ್ರಾಜ್ಯವಾಳಲಿ I ನಿನ್ನಯ ಪ್ರೀತಿ ಸತ್ಯತೆಗಳು ಆತನಿಗೆ ಬೆಂಗಾವಲಾಗಿರಲಿ II


ನಿಮ್ಮ ನಾಮವನ್ನು ನಾನು ಇವರಿಗೆ ತಿಳಿಯಪಡಿಸಿದ್ದೇನೆ; ಇನ್ನೂ ತಿಳಿಯಪಡಿಸುತ್ತೇನೆ. ಹೀಗೆ ನೀವು ನನ್ನಲ್ಲಿಟ್ಟ ಪ್ರೀತಿಯು ಇವರಲ್ಲಿಯೂ ಇರುವಂತಾಗುವುದು; ನಾನೂ ಅವರಲ್ಲಿ ಇರುವಂತಾಗುವುದು,” ಎಂದು ಹೇಳಿದರು.


ಯೆಹೂದ ಕುಲ ಕುರಿತು ಮೋಶೆ ಹೇಳಿದ್ದು: “ಸರ್ವೇಶ್ವರಾ, ಯೆಹೂದನ ಮೊರೆಯನ್ನಾಲಿಸು ಬಂಧುಗಳೊಡನೆ ಅವನನ್ನು ಮರಳಿ ಸೇರಿಸು ತನ್ನ ಹಕ್ಕುಬಾಧ್ಯತೆಗಳನ್ನು ಕಾದಿರಿಸಿಕೊಳ್ಳಲು ಶತ್ರುಗಳ ಕೈಯಿಂದ ಅವನನ್ನು ತಪ್ಪಿಸು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು