Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 89:12 - ಕನ್ನಡ ಸತ್ಯವೇದವು C.L. Bible (BSI)

12 ಉತ್ತರ ದಕ್ಷಿಣಗಳನುಂಟು ಮಾಡಿದವನು ನೀನು I ಸ್ತುತಿಸುತ್ತವೆ ತಾಬೋರ್ ಹೆರ್‍ಮೊನ್ ನಿನ್ನ ನಾಮವನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ದಕ್ಷಿಣೋತ್ತರ ದಿಕ್ಕುಗಳನ್ನು ಉಂಟುಮಾಡಿದವನು ನೀನು. ತಾಬೋರ್, ಹೆರ್ಮೋನ್ ಪರ್ವತಗಳು ನಿನ್ನ ನಾಮದಲ್ಲಿ ಆನಂದಧ್ವನಿ ಮಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ದಕ್ಷಿಣೋತ್ತರದಿಕ್ಕುಗಳನ್ನು ಉಂಟುಮಾಡಿದವನು ನೀನು. ತಾಬೋರ್ ಹೆರ್ಮೋನ್ ಪರ್ವತಗಳು ನಿನ್ನ ನಾಮದಲ್ಲಿ ಆನಂದಧ್ವನಿಮಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಉತ್ತರ, ದಕ್ಷಿಣ ದಿಕ್ಕುಗಳನ್ನೂ ಪ್ರತಿಯೊಂದನ್ನೂ ಸೃಷ್ಟಿಸಿದಾತನು ನೀನೇ. ತಾಬೋರ್ ಮತ್ತು ಹೆರ್ಮೋನ್ ಬೆಟ್ಟಗಳು ನಿನ್ನ ಹೆಸರನ್ನು ಸಂಕೀರ್ತಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಉತ್ತರವನ್ನೂ ದಕ್ಷಿಣವನ್ನೂ ನೀವೇ ನಿರ್ಮಿಸಿದ್ದೀರಿ. ತಾಬೋರೂ, ಹೆರ್ಮೋನೂ ನಿಮ್ಮ ಹೆಸರಿನಲ್ಲಿ ಉತ್ಸಾಹ ಧ್ವನಿಗೈಯುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 89:12
16 ತಿಳಿವುಗಳ ಹೋಲಿಕೆ  

ಉತ್ತರ ದಿಕ್ಕನ್ನು ವಿಸ್ತರಿಸಿಹನು ಶೂನ್ಯದ ಮೇಲೆ ಭೂಮಂಡಲವನ್ನು ತೂಗುಹಾಕಿಹನು ಏನೂ ಇಲ್ಲದರ ಮೇಲೆ.


ತಾಬೋರ್, ಶಹಚೀಮಾ, ಬೇತ್ ಷೆಮೆಷ್ ಎಂಬ ಊರುಗಳೂ ಅದರ ಮೇರೆಯೊಳಗಿದ್ದವು. ಈ ಮೇರೆಯು ಜೋರ್ಡನ್ ನದಿಯ ತೀರದಲ್ಲಿ ಮುಗಿಯುತ್ತದೆ.


ಇಸ್ರಯೇಲರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿ ಅರ್ನೋನ್ ಕಣಿವೆ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗಿದ್ದ ಪ್ರದೇಶವನ್ನು ಮತ್ತು ಕಣಿವೆ ಪ್ರದೇಶದ ಪೂರ್ವಭಾಗವನ್ನು ಸ್ವಾಧೀನಮಾಡಿಕೊಂಡರು. ಅವುಗಳಲ್ಲಿದ್ದ ಅರಸರನ್ನು ಸಂಹರಿಸಿದರು.


ರಮ್ಯ, ಹೆರ್ಮೋನ್ ಪರ್ವತದ ಮೇಲೆ ಬೀಳುವ ಮಂಜಿನಂತೆ I ಸಿಯೋನ್ ಪರ್ವತದ ಮೇಲೆ ಬೀಳುವ ಇಬ್ಬನಿಯಂತೆ II ಆಶೀರ್ವಾದವು, ಅಮರ ಜೀವವು I ಅಲ್ಲೆ ಇರಬೇಕೆಂದು ಆಜ್ಞಾಪಿಸಿಹನು ಪ್ರಭುವು II


ಚಪ್ಪಾಳೆ ಹೊಡೆಯಲಿ ನದಿಗಳು I ತಟ್ಟಾಡಲಿ ಬೆಟ್ಟಗುಡ್ಡಗಳು II


ಅಬೀನೋವಮನ ಮಗ ಬಾರಾಕನು ತಾಬೋರ್ ಬೆಟ್ಟವನ್ನೇರಿ ಬಂದಿದ್ದಾನೆಂಬ ವರ್ತಮಾನ ಸೀಸೆರನಿಗೆ ಮುಟ್ಟಿದಾಗ


ಆಕೆ ನಫ್ತಾಲಿ ದೇಶದ ಕೆದೆಷ್ ಊರಿನಲ್ಲಿದ್ದ ಅಬೀನೋವಮನ ಮಗ ಬಾರಾಕನನ್ನು ಬರಹೇಳಿ ಅವನಿಗೆ, “ನಿಶ್ಚಯವಾಗಿ ಇಸ್ರಯೇಲರ ದೇವರಾದ ಸರ್ವೇಶ್ವರ ನಿನಗೆ ಆಜ್ಞಾಪಿಸಿದ್ದಾರೆ: ‘ನೀನೆದ್ದು ನಫ್ತಾಲಿ ಮತ್ತು ಜೆಬುಲೂನ್ ಕುಲಗಳಿಂದ ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು;


ಇಗೋ, ಸೇನಾಧೀಶ್ವರ ಸರ್ವೇಶ ಎಂಬ ಹೆಸರುಳ್ಳ ರಾಜಾಧಿರಾಜನ ನುಡಿ: ‘ಪರ್ವತಗಳನ್ನು ಮೀರುವ ತಾಬೋರ್ ಬೆಟ್ಟದಂತೆ ಸಮುದ್ರದಿಂದೆದ್ದಿರುವ ಕರ್ಮೆಲ್ ಗುಡ್ಡದಂತೆ ಉನ್ನತನೊಬ್ಬನು ಬರುವನು, ನನ್ನ ಜೀವದಾಣೆ.’


ಹರ್ಷಧ್ವನಿಗೈ ಆಕಾಶವೇ ಉಲ್ಲಾಸಪಡು ಪೊಡವಿಯೇ ತಟ್ಟಾಡಿರಿ ಬೆಟ್ಟಗುಡ್ಡಗಳೇ ಏಕೆನೆ ಸಂತೈಸಿಹನು ಸರ್ವೇಶ್ವರ ತನ್ನ ಪ್ರಜೆಯನು ಕನಿಕರಿಸಿಹನು ಶೋಷಿತರಾದ ತನ್ನ ಜನರನು.


ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ I ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ II


ಕಡಲನು ತಳಪಾಯವನಾಗಿಸಿದವನು ಆತನೆ I ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೆ II


ಪ್ರಭುವಿಗೆ ಸ್ವಂತವಾದುದು ಪರಲೋಕ I ನರರಿಗೆ ಕೊಟ್ಟಿಹನಾತನು ಭೂಲೋಕ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು