Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 88:6 - ಕನ್ನಡ ಸತ್ಯವೇದವು C.L. Bible (BSI)

6 ದಬ್ಬಿರುವೆ ನೀನೆನ್ನನು ಅಧೋಲೋಕಕೆ I ಅಗಾಧಸ್ಥಳಕೆ, ಗಾಢ ಅಂಧಕಾರಕೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅಧೋಲೋಕದಲ್ಲಿಯೂ, ಗಾಢಾಂಧಕಾರದಲ್ಲಿಯೂ, ಅಗಾಧ ಸ್ಥಳದಲ್ಲಿಯೂ ನನ್ನನ್ನು ತಳ್ಳಿಬಿಟ್ಟಿದ್ದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅಧೋಲೋಕದಲ್ಲಿಯೂ ಗಾಡಾಂಧಕಾರದಲ್ಲಿಯೂ ಅಗಾಧಸ್ಥಳದಲ್ಲಿಯೂ ನನ್ನನ್ನು ದೊಬ್ಬಿಬಿಟ್ಟಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನೀನು ನನ್ನನ್ನು ಪಾತಾಳಕ್ಕೆ ದಬ್ಬಿರುವೆ; ನನ್ನನ್ನು ಕತ್ತಲೆಯ ಸ್ಥಳಕ್ಕೆ ನೂಕಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅಧೋಲೋಕದಲ್ಲಿಯೂ ಗಾಡಾಂಧಕಾರದಲ್ಲಿಯೂ ಅಗಾಧಗಳಲ್ಲಿಯೂ ನನ್ನನ್ನು ಇಟ್ಟಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 88:6
13 ತಿಳಿವುಗಳ ಹೋಲಿಕೆ  

ಹುಚ್ಚು ಹೊಳೆಯು ಎನ್ನ ಕೊಚ್ಚದಿರಲಯ್ಯಾ I ಮಡುವು ಎನ್ನ ಸೆಳೆದುಕೊಳ್ಳದಿರಲಯ್ಯಾ I ಪಾತಾಳವೆನ್ನನು ನುಂಗದಿರಲಯ್ಯಾ II


ನೀನೆನಗೆ ತೋರಿಸಿರುವ ಕರುಣೆ ಮಹತ್ತರವಾದುದಯ್ಯಾ I ಪಾತಾಳದಿಂದ ನನ್ನ ಪ್ರಾಣವನು ಉಳಿಸಿದೆಯಯ್ಯಾ II


ನನ್ನಲ್ಲಿ ವಿಶ್ವಾಸವಿಡುವವನು ಅಂಧಕಾರದಲ್ಲಿ ಉಳಿಯಬಾರದೆಂದು ನಾನೇ ಜಗಜ್ಯೋತಿಯಾಗಿ ಬಂದಿದ್ದೇನೆ.


ಆತ ನನ್ನನ್ನು ಕರೆದೊಯ್ದು ಬೆಳಕಿನಲ್ಲಿ ಅಲ್ಲ, ಕತ್ತಲಲ್ಲೇ ನಡೆಸಿದ.


ಮಾಡಿಹನು ನನ್ನ ಪ್ರಾಣ ನೆಲಕಚ್ಚುವಂತೆ ಬೆನ್ನಟ್ಟಿಹಾ ವೈರಿ I ದೂಡಿಹನು ಎಂದೊ ಸತ್ತ ಶವದಂತೆ ಕಾರ್ಗತ್ತಲೆಗಾ ದ್ರೋಹಿ II


ಮೇಲೆತ್ತಿದನು ವಿನಾಶದ ಕೆಸರಿಂದ, ಕರಾಳ ಕೂಪದಿಂದ I ಗೋರ್ಕಲ್ಲ ಮೇಲಿರಿಸಿ ಹೆಜ್ಜೆಯಿಡಿಸಿದನು ಅತಿ ಧೈರ್ಯದಿಂದ II


ತಮ್ಮ ನಾಚಿಕೆಗೇಡಿತನದ ನೊರೆಯನ್ನು ಕಾರುವ ಸಾಗರದ ಹುಚ್ಚು ತೆರೆಗಳು; ದಿಕ್ಕುಗೆಟ್ಟ ತಾರೆಗಳಿವರು. ಇವರಿಗಾಗಿ ಕಾದಿದೆ ನಿರಂತರ ಕಾರ್ಗತ್ತಲಿನ ಕಂದಕ.


ಅಂತೆಯೇ, ತಮ್ಮ ಆದ್ಯ ಅಂತಸ್ತನ್ನು ಉಳಿಸಿಕೊಳ್ಳದೆ, ತಮ್ಮ ಯೋಗ್ಯ ನಿವಾಸವನ್ನು ಕಳೆದುಕೊಂಡ ದೇವದೂತರನ್ನು ಶಾಶ್ವತ ಸಂಕಲೆಗಳಿಂದ ಬಂಧಿಸಲಾಯಿತು; ಮಹಾದಿನದಲ್ಲಿ ಸಂಭವಿಸುವ ದಂಡನೆಯ ತೀರ್ಪಿಗಾಗಿ ಅವರನ್ನು ಕಾರ್ಗತ್ತಲೆಯಲ್ಲಿ ಕೂಡಿಡಲಾಯಿತು.


“ಹೇ ಸರ್ವೇಶ್ವರಾ, ಆಳವಾದ ಗುಳಿಯಲ್ಲಿ ನಾ ಕುಳಿತೆ ನಿನ್ನ ಹೆಸರೆತ್ತಿ ನಾನು ಪ್ರಾರ್ಥನೆಮಾಡಿದೆ.


ದುರ್ಜನರ ಮಾರ್ಗ ಕಗ್ಗತ್ತಲಿನ ಹಾಗೆ, ಎಡವಿಬಿದ್ದ ಸ್ಥಳವೇ ತಿಳಿಯದು ಅವರಿಗೆ.


ಅಂತರಾಳದಿಂದ ಪ್ರಭು, ಮೊರೆಯಿಡುತ್ತಿರುವೆ ನಿನಗೆ I


‘ಉರಿದೇಳುತ್ತಿದೆ ಕೆಳಲೋಕದ ತನಕ ಎನ್ನ ಕೋಪಾಗ್ನಿ ದಹಿಸಿಬಿಡುವುದದು ಭೂಮಿಯನು ಬೆಳೆಸಹಿತವಾಗಿ ಭಸ್ಮಮಾಡುವುದದು ಬೆಟ್ಟಗಳನು ಬುಡಸಮೇತವಾಗಿ.


ನಿನ್ನ ಸನ್ನಿಧಿಯಿಂದ ನಾನಿನ್ನು ಬಹಿಷ್ಕೃತ ಕಾಣೆನೆಂದೂ ನಿನ್ನ ಪವಿತ್ರಾಲಯ ನಿರುತ. ಈ ಭಾಗ್ಯಗಳೆಲ್ಲ ಎನಗಿಲ್ಲವೆಂದು ಪರಿಪರಿಯಾಗಿ ಮರುಗುತಿರುವೆನಿಂದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು