Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 86:3 - ಕನ್ನಡ ಸತ್ಯವೇದವು C.L. Bible (BSI)

3 ನೀನೆನಗೆ ದೇವನು, ಕರುಣಿಸೆನ್ನನು I ದಿನವೆಲ್ಲ ಪ್ರಭು, ನಿನಗೆ ಮೊರೆಯಿಡುವೆನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಕರ್ತನೇ, ಕರುಣಿಸು; ದಿನವೆಲ್ಲಾ ನಿನಗೆ ಮೊರೆಯಿಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಕರ್ತನೇ, ಕರುಣಿಸು; ದಿನವೆಲ್ಲಾ ನಿನಗೆ ಮೊರೆಯಿಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನನ್ನ ಯೆಹೋವನೇ, ನನಗೆ ಕರುಣೆತೋರು. ನಾನು ದಿನವೆಲ್ಲಾ ನಿನಗೆ ಪ್ರಾರ್ಥಿಸುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯೆಹೋವ ದೇವರೇ, ನನ್ನನ್ನು ಕರುಣಿಸಿರಿ. ನಿಮಗೆ ದಿನವೆಲ್ಲಾ ಮೊರೆಯಿಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 86:3
13 ತಿಳಿವುಗಳ ಹೋಲಿಕೆ  

“ಕರುಣಿಸೆನ್ನನು, ಕರುಣಿಸು, ದೇವನೇ I ನನ್ನಾತ್ಮದ ಆಸರೆಯು ನೀನೇ II ನನ್ನ ಗಂಡಾಂತರವು ನೀಗುವ ಪರಿಯಂತ I ನಿನ್ನ ರೆಕ್ಕೆಗಳಡಿ ನಾನಿರುವೆ ಸುರಕ್ಷಿತ II


ಪವಿತ್ರಾತ್ಮರಿಂದ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲೂ ಪ್ರಾರ್ಥಿಸಿರಿ. ನಿಮ್ಮ ಕೋರಿಕೆ, ಬೇಡಿಕೆಗಳನ್ನು ದೇವರಿಗೆ ಅರ್ಪಿಸಿರಿ. ಎಚ್ಚರವಾಗಿದ್ದು ಎಲ್ಲಾ ದೇವಜನರಿಗಾಗಿ ಎಡೆಬಿಡದೆ ಪ್ರಾರ್ಥಿಸಿರಿ.


ಮಬ್ಬಾಗಿ ಹೋಗಿವೆ ಕಣ್ಗಳು ಬಾಧೆಯಿಂದ I ಪ್ರಭೂ, ಕೈಯೊಡ್ಡಿ ಮೊರೆಯಿಡುತ್ತಿರುವೆ ಸದಾ II


ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ I ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ II


ಅವಳಿಗೆ ಸುಮಾರು ಎಂಬತ್ತನಾಲ್ಕು ವರ್ಷ ವಯಸ್ಸು. ಮಹಾದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು.


ಕರುಣೆತೋರು ದೇವಾ, ಜನರೆನ್ನ ಬೆನ್ನಟ್ಟಿ ಬರುತಿಹರು I ದಿನವೆಲ್ಲ ಕದನ ಮಾಡಿ ಶತ್ರುಗಳೆನ್ನ ಬಾಧಿಸುತಿಹರು II


ತ್ರಿಕಾಲದೊಳು ಗೋಗರೆದು ಯಾಚಿಸುವೆನು I ಎನ್ನಯ ಮೊರೆಗಾತನು ಕಿವಿಗೊಡದಿರನು II


ಸತ್ಯಸ್ವರೂಪನಾದ ದೇವಾ, ಭಕ್ತನ ಮೊರೆಗೆ ಸದುತ್ತರ ಪಾಲಿಸೊ I ಆಪತ್ತಿನಲ್ಲಿ ಆಶ್ರಯವಿತ್ತ ದೇವಾ, ಎನ್ನ ಪ್ರಾರ್ಥನೆಯ ಆಲಿಸೊ II


ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲುರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ?


“ಇವನ ಸಾವೆಂದು? ಇವ ನಿರ್ನಾಮವಾಗುವದೆಂತು?” I ನನಗೆ ಕೇಡು ಬಯಸುವವರ ಕುಹಕ ನುಡಿಯಿದು II


ನನ್ನ ಯೋಚನೆ ನಿನ್ನ ಬಳಿಸೇರಲಿ I ನನ್ನ ಕೂಗು ನಿನ್ನ ಕಿವಿಗೆ ಬೀಳಲಿ II


ಮೃತರು ನಿನ್ನದ್ಭುತಗಳನು ಮೆಚ್ಚುವುದುಂಟೆ I ಸತ್ತ ಜನರೆದ್ದು ನಿನ್ನ ಸ್ತುತಿಸುವುದುಂಟೆ? II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು