ಕೀರ್ತನೆಗಳು 83:11 - ಕನ್ನಡ ಸತ್ಯವೇದವು C.L. Bible (BSI)11-12 ಒರೆಬ್, ಜೇಬ್ ಎಂಬವರ ಗತಿಯೊದಗಲಿ ಇವರ ಸಿರಿವಂತರಿಗೆ I ಜೇಬಹ, ಚೆಲ್ಮುನ್ನರ ಪಾಡು ಬರಲಿರುವ ಸಕಲ ರಾಜರಿಗೆ I “ಬನ್ನಿ, ದೇವರ ನಾಡುಬೀಡನು ಆಕ್ರಮಿಸೋಣ” ಎಂದವರಿಗೆ II ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಓರೇಬ್ ಮತ್ತು ಜೇಬ್ ಎಂಬವರ ಗತಿಯು, ಇವರ ಶ್ರೀಮಂತರಿಗೂ ಸಂಭವಿಸಲಿ; ಜೇಬಹ ಮತ್ತು ಚಲ್ಮುನ್ನ ಎಂಬವರ ಹಾಗೆ ಇವರ ಪ್ರಭುಗಳಿಗೂ ಆಗಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಓರೇಬ್ ಜೇಬ್ ಎಂಬವರ ಗತಿಯು ಇವರ ಶ್ರೀಮಂತರಿಗೂ ಸಂಭವಿಸಲಿ; ಜೇಬಹ ಚಲ್ಮುನ್ನ ಎಂಬವರ ಹಾಗೆ ಇವರ ಪ್ರಭುಗಳಿಗೂ ಆಗಲಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ದೇವರೇ, ಶತ್ರುಗಳ ನಾಯಕರುಗಳನ್ನು ಸೋಲಿಸು. ನೀನು ಓರೇಬ್ ಮತ್ತು ಜೇಬ್ ಪ್ರಾಂತ್ಯಗಳಿಗೆ ಮಾಡಿದಂತೆಯೇ ಅವರಿಗೆ ಮಾಡು. ನೀನು ಜೇಬಹ ಮತ್ತು ಚಲ್ಮುನ್ನ ಪ್ರಾಂತ್ಯಗಳಿಗೆ ಮಾಡಿದಂತೆಯೇ ಅವರಿಗೆ ಮಾಡು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಅವರನ್ನೂ, ಅವರ ಅಧಿಪತಿಗಳನ್ನೂ, ಓರೇಬ್ ಮತ್ತು ಜೇಬನ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೆಬಹ ಮತ್ತು ಚಲ್ಮುನ್ನರ ಹಾಗೆಯೂ ಮಾಡಿರಿ. ಅಧ್ಯಾಯವನ್ನು ನೋಡಿ |