Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 78:69 - ಕನ್ನಡ ಸತ್ಯವೇದವು C.L. Bible (BSI)

69 ನಿರ್ಮಿಸಿದನು ತನ್ನ ಮಂದಿರವನು ಪರ್ವತದಂತೆ I ಶಾಶ್ವತವಾಗಿ ತಾನು ಸ್ಥಾಪಿಸಿದ ಭೂಮಿಯಂತೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

69 ಆತನು ತನ್ನ ಆಲಯವನ್ನು ಪರ್ವತದಂತೆಯೂ, ತಾನು ಸ್ಥಾಪಿಸಿದ ಭೂಮಿಯಂತೆಯೂ ಶಾಶ್ವತವಾಗಿ ಕಟ್ಟಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

69 ಆತನು ತನ್ನ ಆಲಯವನ್ನು ಪರ್ವತದಂತೆಯೂ ತಾನು ಸ್ಥಾಪಿಸಿದ ಭೂವಿುಯಂತೆಯೂ ಶಾಶ್ವತವಾಗಿ ಕಟ್ಟಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

69 ಆತನು ತನ್ನ ಪವಿತ್ರಾಲಯವನ್ನು ಆ ಪರ್ವತದ ಮೇಲೆ ಕಟ್ಟಿ ಅದನ್ನು ಭೂಮಿಯಂತೆ ಶಾಶ್ವತಗೊಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

69 ಉನ್ನತವಾದವುಗಳಂತೆಯೂ, ಯುಗಯುಗಕ್ಕೂ ತಾವು ಅಸ್ತಿವಾರ ಹಾಕಿದ ಭೂಮಿಯಂತೆಯೂ ತಮ್ಮ ಪರಿಶುದ್ಧ ಸ್ಥಳವನ್ನು ಕಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 78:69
16 ತಿಳಿವುಗಳ ಹೋಲಿಕೆ  

ಅನಂತರ ಶ್ವೇತವರ್ಣದ ಒಂದು ಮಹಾಸಿಂಹಾಸನವನ್ನು ಕಂಡೆ. ಅದರಲ್ಲಿ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ತಮ್ಮ ಇರುವಿಕೆಯೇ ಇಲ್ಲದಂತೆ ಕಣ್ಮರೆಯಾಗಿ ಹೋದವು.


ಆಕಾಶಮಂಡಲವನು ನೋಡಿ ಕಣ್ಣೆತ್ತಿ ಭೂಮಂಡಲದತ್ತ ನೋಡಿ ಕೆಳಗೆ ದಿಟ್ಟಿಸಿ. ಆಕಾಶ ಚದರಿಹೋಗುವುದು ಹೊಗೆಯಂತೆ ಭೂಮಿ ಹರಿದುಹೋಗುವುದು ಬಟ್ಟೆಯಂತೆ ಸಾಯುವರು ಭೂನಿವಾಸಿಗಳು ಅದರಂತೆ. ನಾ ಕೊಡುವ ವಿಮೋಚನೆಯೋ ನಿಲ್ಲುವುದು ಶಾಶ್ವತವಾಗಿ ನಾ ನೀಡುವ ಮುಕ್ತಿಯೋ ಅಳಿದುಹೋಗದು ಭಂಗವಾಗಿ.


ಭೂಮಿಗೆ ಅಸ್ತಿವಾರ ಹಾಕಿದ್ದು ನನ್ನ ಕೈಯೇ, ಆಕಾಶವನ್ನು ಹರಡಿದ್ದು ನನ್ನ ಬಲಗೈಯೇ ಇವೆರಡೂ ಬರುತ್ತವೆ ನಾ ಕರೆದ ಮಾತ್ರಕ್ಕೇ.


ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ I ಅದೆಂದಿಗೂ ಕದಲದಂತೆ ಮಾಡಿರುವೆ II


ಆದಿಯಲೆ ನೀ ಭುವಿಗೆ ಅಸ್ತಿವಾರ ಹಾಕಿದೆ I ಗಗನಮಂಡಲವು ಸಹ ನಿನ್ನ ಸೃಷ್ಟಿಯಾಗಿದೆ II


ಉತ್ತರ ದಿಕ್ಕನ್ನು ವಿಸ್ತರಿಸಿಹನು ಶೂನ್ಯದ ಮೇಲೆ ಭೂಮಂಡಲವನ್ನು ತೂಗುಹಾಕಿಹನು ಏನೂ ಇಲ್ಲದರ ಮೇಲೆ.


ದೇವಾಲಯದ ಮುಂದುಗಡೆಯಲ್ಲಿದ್ದ ಮಂಟಪದ ಉದ್ದ ಆಲಯದ ಅಗಲಕ್ಕೆ ಸರಿಯಾಗಿ ಒಂಬತ್ತು ಮೀಟರ್, ಎತ್ತರ ಇಪ್ಪತ್ತನಾಲ್ಕು ಮೀಟರ್, ಸೊಲೊಮೋನನು ದೇವಾಲಯದ ಒಳಮೈಯನ್ನು ಚೊಕ್ಕಬಂಗಾರದ ತಗಡಿನಿಂದ ಹೊದಿಸಿದನು.


ಬೃಹದಾಕಾರವಾದ ಹಾಗೂ ಭವ್ಯವಾದ ದೇವಾಲಯವನ್ನು ನಾನು ಕಟ್ಟಿಸಬೇಕಾಗಿದೆ. ಆದುದರಿಂದ ಹೆಚ್ಚು ಮರವನ್ನು ಸಿದ್ಧಪಡಿಸಬೇಕು.


ನನ್ನ ಮಗ ಸೊಲೊಮೋನನು ನಿಮ್ಮ ಆಜ್ಞಾವಿಧಿನಿಯಮಗಳನ್ನು ಅನುಸರಿಸುವಂತೆ ಮಾಡಿರಿ; ನಾನು ಯಾವ ಮಂದಿರ ನಿರ್ಮಾಣಕ್ಕಾಗಿ ಇದನ್ನೆಲ್ಲಾ ಸಂಗ್ರಹಿಸಿದ್ದೇನೋ ಆ ನಿಮ್ಮ ಮಂದಿರವನ್ನು ಇವನು ನಿಷ್ಠೆಯಿಂದ ಕಟ್ಟಿಸಿ ಮುಗಿಸುವಂತೆ ಅನುಗ್ರಹಿಸಿರಿ.”


ತರುವಾಯ ಅರಸ ದಾವೀದನು, “ದೇವರು ನನ್ನ ಮಗ ಸೊಲೊಮೋನನನ್ನೇ ಆರಿಸಿಕೊಂಡಿದ್ದಾರೆ. ಆದರೆ ಅವನು ಇನ್ನೂ ಚಿಕ್ಕವನು. ಮಾಡತಕ್ಕ ಕೆಲಸವೋ ವಿಶೇಷವಾದದ್ದು. ಕಟ್ಟ ತಕ್ಕ ಮಂದಿರ ದೇವರಾದ ಸರ್ವೇಶ್ವರನಿಗಾಗಿ!


ಈ ಮಹಾಮಂದಿರದ ಮಾರ್ಗವಾಗಿ ಹಾದುಹೋಗುವವರು ಅದನ್ನು ನೋಡಿ ಚಕಿತರಾಗಿ, ‘ಅಬ್ಬಬ್ಬಾ, ಇದೇನು! ಸರ್ವೇಶ್ವರ ನಾಡಿಗೂ ಈ ಗುಡಿಗೂ ಹೀಗೇಕೆ ಮಾಡಿದರು?’ ಎಂದು ಕೇಳುವರು.


ಎತ್ತುವನಾತ ದೀನರನು ಧೂಳಿಂದ, ದರಿದ್ರರನು ತಿಪ್ಪೆಯಿಂದ. ಕುಳ್ಳರಿಸುವನವರನು ಅಧಿಪತಿಗಳ ಸಮೇತ ಅನುಗ್ರಹಿಸುವನು ಹಕ್ಕಾಗಿ ಆ ಮಹಿಮಾಸನ. ಕಾರಣ-ಭೂಮಿಯ ಆಧಾರಸ್ತಂಭಗಳು ಸರ್ವೇಶ್ವರನವೇ ಭೂಮಂಡಲವನು ಅವುಗಳ ಮೇಲೆ ಸ್ಥಾಪಿಸಿದವನು ಆತನೇ.


ಪವಿತ್ರ ಪರ್ವತದಲಿ ಕರ್ತನು I ಸ್ಥಾಪಿಸಿಹನು ತನ್ನ ನಗರವನು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು