Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 78:49 - ಕನ್ನಡ ಸತ್ಯವೇದವು C.L. Bible (BSI)

49 ಸುರಿಸಿದನು ಕೋಪರೌದ್ರಗಳನು, ಉಗ್ರಹಿಂಸೆಗಳನು I ಕಳಿಸಿದನವರ ಮೇಲೆ ಸಂಹಾರಕ ದೂತಗಣಗಳನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

49 ಆತನು ಅವರ ಮೇಲೆ ತನ್ನ ಕೋಪರೌದ್ರಗಳನ್ನು, ಉಗ್ರಹಿಂಸೆಗಳನ್ನು ಸಂಹಾರಕ ದೂತಗಣವನ್ನೋ ಎಂಬಂತೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

49 ಆತನು ಅವರ ಮೇಲೆ ತನ್ನ ಕೋಪ ರೌದ್ರಗಳನ್ನೂ ಉಗ್ರಹಿಂಸೆಗಳನ್ನೂ ಸಂಹಾರದೂತಗಣವನ್ನೋ ಎಂಬಂತೆ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

49 ಆತನು ಈಜಿಪ್ಟ್ ಜನರಿಗೆ ತನ್ನ ಭಯಂಕರವಾದ ಕೋಪವನ್ನು ತೋರಿದನು. ಆತನು ತನ್ನ ಸಂಹಾರ ದೂತರನ್ನು ಅವರಿಗೆ ವಿರೋಧವಾಗಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

49 ದೇವರು ನಾಶದ ದೇವದೂತರನ್ನು ಕಳುಹಿಸುತ್ತಾ ತಮ್ಮ ಬೇಸರದಿಂದಲೂ ದುಃಖದಿಂದಲೂ ಇಕ್ಕಟ್ಟುಗಳನ್ನೂ ಅವರ ಮೇಲೆ ಸುರಿಯಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 78:49
12 ತಿಳಿವುಗಳ ಹೋಲಿಕೆ  

ಅಗ್ನಿಗಂಧಕಗಳನು ದುರುಳರ ಮೇಲೆ ಮಳೆಗರೆಯಲಿ I ಉರಿಗಾಳಿಯೆ ಅವರ ಪಾಲಿನ ಧೂಮಪಾನವಾಗಲಿ II


ದೇವದೂತನು ಜೆರುಸಲೇಮನ್ನೂ ಸಂಹರಿಸುವುದಕ್ಕೆ ಕೈಚಾಚಿದಾಗ ಸರ್ವೇಶ್ವರ ಆ ಕೇಡಿನ ವಿಷಯದಲ್ಲಿ ನೊಂದುಕೊಂಡು, ಸಂಹಾರಕ ದೂತನಿಗೆ, “ಈಗ ಸಾಕು, ನಿನ್ನ ಕೈಯನ್ನು ಹಿಂತೆಗೆ,” ಎಂದು ಆಜ್ಞಾಪಿಸಿದರು. ಆಗ ಆ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು.


ನಿನ್ನೆದುರಾಳಿಗಳನು ಕೆಡವಿಬಿಡುತಿ ಮಹಾ ತೇಜಸ್ವಿಯಾಗಿ ಒಣಹುಲ್ಲಂತೆ ಭಸ್ಮಮಾಡುತಿ ಅವರನು ಕೋಪಾಗ್ನಿಯಾಗಿ.


ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು.


ಆದುದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: “ಸ್ವಲ್ಪತಾಳಿರಿ, ನಾನು ತಪ್ಪನ್ನು ನಿಮಗೆ ತೋರಿಸುವ ದಿನಕ್ಕಾಗಿ ಕಾದಿರಿ. ರಾಷ್ಟ್ರಗಳನ್ನು ಒಂದಾಗಿಸಲು, ರಾಜ್ಯಗಳನ್ನು ಒಂದುಗೂಡಿಸಲು ನಿರ್ಧರಿಸಿದ್ದೇನೆ; ಹೀಗೆ ಅವುಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನು ಸುರಿಸಲು ತೀರ್ಮಾನಿಸಿದ್ದೇನೆ. ಲೋಕವೆಲ್ಲವು ನನ್ನ ಕೋಪಾಗ್ನಿಯಿಂದ ಧ್ವಂಸವಾಗುವುದು.


ಸುರಿಸಿದ್ದಾನೆ ಸರ್ವೇಶ್ವರ ತನ್ನ ರೋಷಾಗ್ನಿಯನ್ನು ತೀರಿಸಿಕೊಂಡಿದ್ದಾನೆ ತನ್ನ ಉಗ್ರಕೋಪವನ್ನು. ಆತ ಹೊತ್ತಿಸಿದ ಬೆಂಕಿಗೆ ಸಿಯೋನಿನ ಅಸ್ತಿವಾರ ಆಹುತಿಯಾಗಿದೆ.


ಎಂದೇ ಸುರಿಸಿದನಾತ ರೋಷಾಗ್ನಿಯನು, ಯುದ್ಧದ ರೌದ್ರವನು ಅವರ ಮೇಲೆಲ್ಲ; ಸುತ್ತಲು ಉರಿ ಹತ್ತಿದರೂ ಅವರು ಅರಿಯಲಿಲ್ಲ, ದಹಿಸಿದರೂ ಅವರು ಕಲಿಯಲಿಲ್ಲ.


ಅವನು ಹೊಟ್ಟೆಯನು ತುಂಬಿಸಿಕೊಳ್ಳುವಾಗಲೇ ದೇವರು ಸುರಿಸುವರು ಕೋಪಾಗ್ನಿಯನು ಆಹಾರದಂತೆ.


ಸರ್ವೇಶ್ವರ ಸೈತಾನನಿಗೆ, “ನೋಡು, ಆತನ ಆಸ್ತಿಪಾಸ್ತಿಯೆಲ್ಲ ನಿನ್ನ ಕೈವಶಕ್ಕೆ ಬಿಟ್ಟಿದ್ದೇನೆ. ಆತನ ಮೈಮೇಲೆ ಮಾತ್ರ ಕೈಹಾಕಬೇಡ,” ಎಂದು ಅಪ್ಪಣೆಕೊಟ್ಟರು. ಕೂಡಲೆ ಸೈತಾನನು ಸರ್ವೇಶ್ವರರ ಸನ್ನಿಧಾನದಿಂದ ಹೊರಟುಹೋದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು