ಕೀರ್ತನೆಗಳು 78:37 - ಕನ್ನಡ ಸತ್ಯವೇದವು C.L. Bible (BSI)37 ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ I ಬದ್ಧರಾಗಿರಲಿಲ್ಲ ಆತನ ನಿಬಂಧನೆಗಳಲಿ II ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201937 ಅವರ ಹೃದಯವು ಆತನಲ್ಲಿ ನೆಲೆಗೊಳ್ಳಲಿಲ್ಲ; ಅವರು ಆತನ ನಿಬಂಧನೆಯನ್ನು ನಿಷ್ಠೆಯಿಂದ ಕೈಗೊಳ್ಳಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)37 ಅವರ ಹೃದಯವು ಆತನಲ್ಲಿ ನೆಲೆಗೊಳ್ಳಲಿಲ್ಲ; ಆತನ ನಿಬಂಧನೆಯನ್ನು ನಿಷ್ಠೆಯಿಂದ ಕೈಕೊಳ್ಳಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್37 ಅವರ ಹೃದಯಗಳು ಆತನಲ್ಲಿ ನೆಲೆಗೊಂಡಿರಲಿಲ್ಲ. ಆತನ ಒಡಂಬಡಿಕೆಗೆ ಅವರು ನಂಬಿಗಸ್ತರಾಗಿರಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ37 ಅವರ ಹೃದಯವು ದೇವರ ಸಂಗಡ ಸ್ಥಿರವಾಗಿರಲಿಲ್ಲ. ಅವರು ದೇವರ ಒಡಂಬಡಿಕೆಯಲ್ಲಿ ನಂಬಿಗಸ್ತರಾಗಿರಲಿಲ್ಲ. ಅಧ್ಯಾಯವನ್ನು ನೋಡಿ |
ನಾನು ಪ್ರಮಾಣಮಾಡಿ ಕೊಟ್ಟ ನಾಡಿಗೆ ಇವರು ಸೇರುವುದಕ್ಕಿಂತ ಮುಂಚಿತವಾಗಿಯೇ ಇವರು ಈಗಲೂ ಮಾಡುವ ದುರಾಲೋಚನೆಗಳನ್ನು ನಾನು ಬಲ್ಲೆ. ನಾನು ಇವರ ಪಿತೃಗಳಿಗೆ ಪ್ರಮಾಣಮಾಡಿದಂತೆ ಹಾಲೂ ಜೇನೂ ಹರಿಯುವ ನಾಡಿಗೆ ಇವರನ್ನು ಸೇರಿಸಿದ ಮೇಲೆ ಇವರು ಚೆನ್ನಾಗಿ ಉಂಡು ಕೊಬ್ಬಿದವರಾದಾಗ, ಇತರ ದೇವರುಗಳನ್ನು ಅವಲಂಬಿಸಿ, ಪೂಜಿಸಿ, ನನ್ನನ್ನು ತಾತ್ಸಾರಮಾಡಿ, ನನ್ನ ನಿಬಂಧನೆಯನ್ನು ಮೀರುವರು. ಅನಂತರ ಅನೇಕ ಕಷ್ಟಗಳೂ ವಿಪತ್ತುಗಳೂ ಸಂಭವಿಸಿದಾಗ ಈ ಗೀತೆ ಇವರ ಸಂತತಿಯವರ ಬಾಯಲ್ಲಿದ್ದು ಅವರ ಮುಂದೆ ಸಾಕ್ಷಿಕೊಡುವುದು,” ಎಂದು ಹೇಳಿದರು.