Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 77:13 - ಕನ್ನಡ ಸತ್ಯವೇದವು C.L. Bible (BSI)

13 ನಿನ್ನ ಮಾರ್ಗ ದೇವಾ, ಪರಿಶುದ್ಧವಾದುದಯ್ಯಾ I ನಮ್ಮ ದೇವರಂತಹ ಮಹಾ ದೇವರಾರಯ್ಯಾ? II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ದೇವರೇ, ನಿನ್ನ ಮಾರ್ಗವು ಪರಿಶುದ್ಧವಾದುದು. ನಮ್ಮ ದೇವರಂತೆ ಮಹತ್ವವುಳ್ಳ ದೇವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ದೇವರೇ, ನಿನ್ನ ಮಾರ್ಗವು ಪರಿಶುದ್ಧವಾದದ್ದು. ನಮ್ಮ ದೇವರಂತೆ ಮಹತ್ವವುಳ್ಳ ದೇವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ದೇವರೇ, ನಿನ್ನ ಮಾರ್ಗಗಳು ಪರಿಶುದ್ಧವಾಗಿವೆ. ದೇವರೇ, ನಿನ್ನಂತೆ ಮಹತ್ವವುಳ್ಳವರು ಬೇರೆ ಯಾರೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ದೇವರೇ, ನಿಮ್ಮ ಮಾರ್ಗಗಳು ಪರಿಶುದ್ಧವಾದವುಗಳು. ನಮ್ಮ ದೇವರ ಹಾಗೆ ಮಹಾ ದೇವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 77:13
14 ತಿಳಿವುಗಳ ಹೋಲಿಕೆ  

ಆದರೆ ದೇವಾಲಯವನು ಹೊಕ್ಕು ನಿಂತಾಗ I ಆ ಜನರ ಅಂತಿಮ ಗತಿಯನಾಲೋಚಿಸಿದಾಗ I ಋಜುವಾದ ಜ್ಞಾನೋದಯ ಆಯಿತೆನಗಾಗ II


ಹೇ ಸರ್ವೇಶ್ವರಾ, ದೇವರುಗಳಲ್ಲಿ ನಿನಗಾರು ಸಮಾನನು? ಎಲ್ಲಿ ನಿನ್ನಂತೆ ಪವಿತ್ರತೆಯಲ್ಲಿ ಸರ್ವೋತ್ತಮನು? ಪ್ರಖ್ಯಾತ ಕಾರ್ಯವೆಸಗುವುದರಲ್ಲಿ ನಿನ್ನಂತೆ ಭಯಂಕರನು? ಅದ್ಭುತಗಳ ನಡೆಸುವುದರಲ್ಲಿ ನಿನ್ನ ಹೋಲುವವನು?


“ಇಂತಿರಲು ನನ್ನನ್ನು ಯಾರಿಗೆ ಹೋಲಿಸಬಲ್ಲಿರಿ?” ಯಾರಿಗೆ ನನ್ನನ್ನು ಸರಿಸಮಾನ ಮಾಡಬಲ್ಲಿರಿ?” ಎಂದು ಕೇಳುತ್ತಿಹರು ಪರಮಪಾವನ ಸ್ವಾಮಿ.


‘ನಮ್ಮಾಶ್ರಯ ದುರ್ಗ ಅವರ ಆಶ್ರಯದುರ್ಗದಂತಲ್ಲ’ ಎಂದು ಅವರ ಶತ್ರುಗಳೇ ಒಪ್ಪಿಕೊಳ್ಳುತ್ತಾರಲ್ಲವೆ?


ನಿನ್ನ ಮಂದಿರದಲಿ ನನಗಾದ ದರ್ಶನದಲಿ I ನಿನ್ನ ಶಕ್ತಿ ಪ್ರತಿಭೆಯನು ಕಂಡಿರುವೆನಲ್ಲಿ II


ನಾನೊಂದನು ಕೋರಿದೆ ಪ್ರಭುವಿನಿಂದ I ನಾನದನ್ನೇ ನಿರೀಕ್ಷಿಸಿದೆ ಆತನಿಂದ : I ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ I ನಾ ತಲ್ಲೀನನಾಗಬೇಕು ಅಲ್ಲಾತನ ಪ್ರಸನ್ನತೆಯಲಿ II


ನನ್ನನ್ನು ಯಾರಿಗೆ ಸರಿಹೋಲಿಸಬಲ್ಲಿರಿ? ನನ್ನನ್ನು ಯಾರಿಗೆ ಸಾಟಿಮಾಡಬಲ್ಲಿರಿ?


ಇಂತಿರಲು ಯಾರಿಗೆ ಹೋಲಿಸಬಲ್ಲಿರಿ ದೇವರನು? ಕೊಡಬಲ್ಲಿರಾ ಆತನಿಗೆ ಯಾವುದಾದರೊಂದು ಉಪಮಾನವನು?


ದೇವರುಗಳಲಿ ಪ್ರಭು, ನಿನ್ನಂಥವನಿಲ್ಲ I ನಿನ್ನ ಮಹತ್ಕಾರ್ಯಗಳಿಗೆ ಸಾಟಿಯೇ ಇಲ್ಲ II


ನಿನ್ನ ಶಕ್ತಿ, ನಿನ್ನ ನೀತಿ ದೇವಾ, ಗಗನ ಮುಟ್ಟುತ್ತಿಹವು I ಮಹತ್ಕಾರ್ಯಗಳೆಸಗಿದ ನಿನಗೆ ದೇವಾ, ಯಾರು ಸಾಟಿಯು? II


ಮುಂಗಡೆಯಲಿದೋ ಹಾಡುಗಾರರು I ಹಿಂಗಡೆಯಲಿದೋ ವಾದ್ಯಗಾರರು I ನಡುವೆ ದಮ್ಮಡಿ ಬಡಿವ ಮಹಿಳೆಯರು II


ಹಾಡಿ ಪಾಡಿ ಹೊಗಳಿರಿ ಪ್ರಭುವನು I ಧ್ಯಾನಿಸಿ ನೀವು ಆತನ ಪವಾಡಗಳನು II


ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ I ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು