ಕೀರ್ತನೆಗಳು 77:10 - ಕನ್ನಡ ಸತ್ಯವೇದವು C.L. Bible (BSI)10 ಆಗ ನಾನು “ನೆನೆಯಲೀಪರಿ, ನನ್ನ ಚಪಲತೆಯೇ ಕಾರಣ I ಮಾಡುವೆನೀಗ ಪರಾತ್ಪರನಾ ಪವಾಡ ವರುಷಗಳ ಸ್ಮರಣ” II ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಪುನಃ ನಾನು, “ಹೀಗೆ ನೆನಸುವುದು ನನ್ನ ಬಲಹೀನತೆಯೇ. ಪರಾತ್ಪರನಾದ ದೇವರ ಭುಜಬಲವು ಪ್ರಕಟವಾದ ವರ್ಷಗಳನ್ನು ಜ್ಞಾಪಿಸಿಕೊಳ್ಳುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಮತ್ತೂ ನಾನು ಅಂದುಕೊಂಡದ್ದೇನಂದರೆ - ಹೀಗೆ ನೆನಸುವದು ನನ್ನ ಬಲಹೀನತೆಯೇ. ಪರಾತ್ಪರನ ಭುಜಬಲವು ಪ್ರಕಟವಾದ ವರುಷಗಳನ್ನು ಜ್ಞಾಪಿಸಿಕೊಳ್ಳುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಬಳಿಕ ನಾನು ಹೀಗೆ ಆಲೋಚಿಸಿಕೊಂಡೆ: “ಮಹೋನ್ನತವಾದ ದೇವರು ತನ್ನ ಶಕ್ತಿಯನ್ನು ಕಳೆದುಕೊಂಡನೇ?” ಎಂಬುದೇ ನನ್ನನ್ನು ಕಾಡಿಸುವ ಪ್ರಶ್ನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ನಂತರ ನಾನು ಯೋಚಿಸಿದ್ದೇನಂದರೆ, “ಹೀಗೆ ನೆನಸಿದ್ದು ನನ್ನ ಬಲಹೀನತೆಯೇ. ಮಹೋನ್ನತ ದೇವರ ಬಲಗೈಯ ಪರಾಕ್ರಮದ ವರ್ಷಗಳನ್ನು ನಾನು ಸ್ಮರಿಸುವೆನು. ಅಧ್ಯಾಯವನ್ನು ನೋಡಿ |